More

    ಸಿಎಂ ಸ್ಥಾನದಿಂದ ಬಿಎಸ್​ವೈ ಅವರನ್ನು ಕೆಳಗಿಳಿಸಿದರೆ ಇತಿಹಾಸ ಮರುಕಳಿಸುತ್ತದೆ: ಶಾಮನೂರು ಶಿವಶಂಕರಪ್ಪ ಎಚ್ಚರಿಕೆ

    ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಚರ್ಚೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಭೇಟಿ ಕುತೂಹಲ ಕೆರಳಿಸಿದೆ. ಮಾತ್ರವಲ್ಲ, ಈ ಮೂಲಕ ಕೇಂದ್ರ ಸರ್ಕಾರ ಅರ್ಥಾತ್ ಬಿಜೆಪಿ ರಾಷ್ಟ್ರಮಟ್ಟದ ನಾಯಕರಿಗೆ ಒಂದು ಎಚ್ಚರಿಕೆಯ ಸಂದೇಶ ರವಾನೆಯಾದಂತಾಗಿದೆ.

    ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿ ಹೊರಬಂದ ಬಳಿಕ ಶಾಮನೂರು ಶಿವಶಂಕರಪ್ಪ ಅವರು ಮಾಧ್ಯಮದವರ ಜತೆ ಮಾತನಾಡಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರು ಮುಂದುವರಿಯಬೇಕು ಅನ್ನೋದು ಸಮುದಾಯದ ಇಚ್ಛೆ. ಅದಾಗ್ಯೂ ಅವರನ್ನು ಬದಲಾಯಿಸಲು ಕೈ ಹಾಕಿದರೆ, ಅಂಥವರು ನಿರ್ನಾಮವಾಗುತ್ತಾರೆ ಎಂದು ಹೇಳಿದರು.

    ಸಿಎಂ ಸ್ಥಾನದಿಂದ ಬಿಎಸ್​ವೈ ಅವರನ್ನು ಕೆಳಗಿಳಿಸಿದರೆ ಇತಿಹಾಸ ಮರುಕಳಿಸುತ್ತದೆ: ಶಾಮನೂರು ಶಿವಶಂಕರಪ್ಪ ಎಚ್ಚರಿಕೆ
    ಅಧಿಕೃತ ನಿವಾಸ ಕಾವೇರಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಮಾತುಕತೆ.

    ಬಿಜೆಪಿ ಹೈಕಮಾಂಡ್ ಈ ಹಿಂದೆ ಬೊಮ್ಮಾಯಿ‌, ನಿಜಲಿಂಗಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿದಾಗ ಏನಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಈ ಹಿಂದೆ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಜೆ.ಹೆಚ್. ಪಟೇಲ್, ಬೊಮ್ಮಾಯಿ‌ ಅವರ ಇತಿಹಾಸವನ್ನು ಅವರು ಯೋಚನೆ ಮಾಡಿಕೊಳ್ಳಬೇಕು. ಈಗ ಯಡಿಯೂರಪ್ಪ ಅವರ ಬದಲಾವಣೆ ಮಾಡಿದರೂ ಅದೇರೀತಿ ಆಗುತ್ತದೆ ಎಂದ ಶಾಮನೂರು, ಯಡಿಯೂರಪ್ಪನವರಿಗೆ ಕೇಂದ್ರದವರು ಏನಾದರೂ ಹೆಚ್ಚೂಕಡಿಮೆ ಮಾಡಬಾರದು ಎಂದೂ ಹೇಳಿದರು.

    ಸಿಎಂ ಹುದ್ದೆಗೆ ಮತ್ತೆ ಕತ್ತಿ ವರಸೆ | ಮುಖ್ಯಮಂತ್ರಿ ಸ್ಥಾನ ಖಾಲಿಯಾದರೆ ನೆಕ್ಸ್ಟ್​ ನಾನೇ ಇದ್ದೇನೆ: ಸಚಿವ ಉಮೇಶ್​ ಕತ್ತಿ

    ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್​ನಲ್ಲೂ ಸಂಚಲನ; ದೆಹಲಿಗೆ ಸಿದ್ದರಾಮಯ್ಯ ಪ್ರಯಾಣ..

    ಕರೊನಾತಂಕದ ನಡುವೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆ ಯಶಸ್ವಿ; ಕಳೆದ ವಾರ್ಷಿಕ ಪರೀಕ್ಷೆಗಿಂತಲೂ ಈ ಸಲ ಹೆಚ್ಚು ಹಾಜರಾತಿ!

    ಎಸ್ಎಸ್​​ಎಲ್​ಸಿ ಪರೀಕ್ಷೆ: ಮೊದಲ ದಿನ ರಾಜ್ಯದ ಎಲ್ಲೆಲ್ಲಿ, ಏನೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts