More

    ತಪ್ಪು ಗ್ರಹಿಕೆಯಿಂದ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.. ಯಾರನ್ನೂ ಬಂಧಿಸಬೇಡಿ; ಬಿಎಸ್​​ವೈ

    ಬೆಂಗಳೂರು: ಮೀಸಲಾತಿ ಪ್ರಕಟ ಮಾಡಿದ ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು. ಈ ಕುರಿತಾಗಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ.

    ನಗರದ ಮಾಳರಕೇರಿ ಬಡಾವಣೆಯಲ್ಲಿನ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಯಡಿಯೂರಪ್ಪ ಜನ್ಮ ದಿನದ ಅಂಗವಾಗಿ ಶಿಕಾರಿಪುರ ತಾಲೂಕಿನಾದ್ಯಂತ ಸೀರೆ ವಿತರಣೆ ಮಾಡಲಾಗಿತ್ತು. ಇಂದು ಆ ಸೀರೆಗಳನ್ನು ಪ್ರತಿಭಟನೆಗೆ ತೆಗೆದುಕೊಂಡು ಬಂದ ಪ್ರತಿಭಟನಕಾರರು ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್​ವೈ ಅವರು, ” ಇವತ್ತು ಶಿಕಾರಿಪುರದಲ್ಲಿ ಕೆಲ ಬಂಜಾರ ಸಮುದಾಯದ‌ವರು ನಮ್ಮ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ನಾನು ಕೂಡಲೇ ಎಸ್​​ಪಿ ಅವರ ಬಳಿ ಮಾತನಾಡಿದ್ದೇನೆ. ಯಾರನ್ನೂ ಬಂಧಿಸಬೇಡಿ ಎಂದು ಎಸ್​ಪಿಗೆ ಸೂಚಿಸಿದ್ದೇನೆ. ಇದರ ಹಿಂದೆ ಯಾರ ಕೈವಾಡವೂ ಇಲ್ಲ. ತಪ್ಪು ಗ್ರಹಿಕೆಯಿಂದಷ್ಟೇ ಈ ಘಟನೆ ಆಗಿದೆ ಪ್ರತಿಭಟನಾಕಾರರ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಇರಲು ಹೇಳಿದ್ದೇನೆ” ಎಂದಿದ್ದಾರೆ.

    ಇದನ್ನೂ ಓದಿ:  ಮೀಸಲಾತಿ ವಿರೋಧಿಸಿ ಭುಗಿಲೆದ್ದ ಹೋರಾಟ– ಬಿಎಸ್​ವೈ ನಿವಾಸದ ಮೇಲೆ ಕಲ್ಲು ತೂರಾಟ

    ಈ ಹಿಂದಿನಿಂದಲೂ‌ ಬಂಜಾರ‌ ಸಮುದಾಯದ ಜೊತೆ ಇದ್ದವನು ‌ನಾನು. ಸಮುದಾಯಕ್ಕೆ ಸಿಗಬೇಕಾದ‌ ನ್ಯಾಯಯುತ ಬೇಡಿಕೆ ಸರಿಪಡಿಸಲು ಪ್ರಯತ್ನಿಸುತ್ತೇನೆ. ತಾಂಡಾ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಿದ್ದೇನೆ. ಈ ರೀತಿಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಂತೆ ಶಾಂತವಾಗಿ ವರ್ತಿಸಬೇಕು.ನಾಳೆ ಅಥವಾ ನಾಡಿದ್ದು ನಾನೇ ಹೋಗಿ ಅವರ‌ನ್ನ‌‌ ಭೇಟಿಯಾಗುತ್ತೇನೆ. ನಂತರ ಈ ವಿಚಾರವಾಗಿ ಮಾತನಾಡುತ್ತೇನೆಂದು ಹೇಳಿದ್ದಾರೆ.

    ಸಮುದಾಯದ ಬೇಡಿಕೆ‌ ಬಗ್ಗೆ ಚರ್ಚಿಸಲು ನಾನು, ವಿಜಯೇಂದ್ರ 24 ಗಂಟೆಯೂ ಸಿದ್ದರಿದ್ದೇವೆ. ಕೇಂದ್ರ ಸಚಿವ ನಾರಾಯಣ‌ಸ್ವಾಮಿ ಅವರಿಗೂ ಈ ಕುರಿತಾಗಿ ಹೇಳುತ್ತೇನೆ. ತಪ್ಪು ಗ್ರಹಿಕೆಯ ಹೇಳಿಕೆ ಕೊಡಬಾರದು. ಏನಾದರೂ ಲೋಪವಾಗಿದ್ದರೆ ಮುಖ್ಯಮಂತ್ರಿಯನ್ನ‌ ಭೇಟಿಯಾಗಿ ಚರ್ಚಿಸಬಹುದು ಎಂದು ನುಡಿದಿದ್ದಾರೆ.

    ಮಾಂಸ ತರಲಿಲ್ಲವೆಂದು ಜಗಳವಾಡಿದ ಪತ್ನಿಯ ಕತ್ತು ಸೀಳಿದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts