More

    ಮುಸ್ಲಿಮರಿಗೆ ನಾವು ಅನ್ಯಾಯ ಮಾಡಿಲ್ಲ, ಅಧಿಕಾರಕ್ಕೆ ಬರುವ ಪಕ್ಷದಲ್ಲಿ ಈ ರೀತಿಯ ಗೊಂದಲ ಸಹಜ: ಬಿಎಸ್​ ಯಡಿಯೂರಪ್ಪ

    ಬೆಂಗಳೂರು: ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮಾತನಾಡಿದ್ದು ‘ಕೇಂದ್ರದ ಸಚಿವರು, ಸಂಸದರು ಎಲ್ಲರ ಸಹಕಾರದೊಂದಿಗೆ ‌ಮತ್ತೆ ಅಧಿಕಾರಕ್ಕೆ ಬರೋದು‌ ನಿಶ್ಚಿತ. ಮೀಸಲಾತಿ ಪ್ರಮಾಣ‌ ಏರಿಸುವ ಮೂಲಕ ಅನುಕೂಲವಾಗಿದೆ. ಮುಸ್ಲಿಮರಿಗೆ ನಾವು ಅನ್ಯಾಯ ಮಾಡಿಲ್ಲ. ಮುಸಲ್ಮಾನರನ್ನು 4% ಮೀಸಲಾತಿಯಿಂದ ತೆಗೆದು‌ ews ಗೆ ಸೇರಿಸಿದ್ದೇವೆ’ ಎಂದಿದ್ದಾರೆ.

    ಇನ್ನು ಪಕ್ಷದಲ್ಲೇ ಟಿಕೆಟ್​ಗಾಗಿ ಆಗುತ್ತಿರುವ ಭಿನ್ನಾಭಿಪ್ರಾದ ಬಗ್ಗೆ ಮಾತನಾಡಿದ ಬಿಎಸ್​ವೈ, ‘ಯಾವ ಪಕ್ಷ ನೂರಕ್ಕೆ‌ನೂರು‌ ಅಧಿಕಾರಕ್ಕೆ‌ ಬರುತ್ತೋ ಆ ಪಕ್ಷದಿಂದ ಸ್ಪರ್ಧಿಸೋಕೆ ಎಲ್ಲರೂ ಮುಂದಾಗುತ್ತಾರೆ. ಯಾರಿಗೆ ಸೀಟ್ ಸಿಗುವುದಿಲ್ಲವೋ ಅಂತಹವರು ಬಿಜೆಪಿ ಪಕ್ಷದ ಪರ ನಿಂತು ಕೆಲಸ ಮಾಡಬೇಕು. ಟಿಕೆಟ್ ನೀಡುವುದನ್ನು ಪಕ್ಷ ತೀರ್ಮಾನಿಸುತ್ತದೆ’ ಎಂದಿದ್ದಾರೆ.

    ಇದನ್ನೂ ಓದಿ: ತಪ್ಪು ಗ್ರಹಿಕೆಯಿಂದ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.. ಯಾರನ್ನೂ ಬಂಧಿಸಬೇಡಿ; ಬಿಎಸ್​​ವೈ

    ಇನ್ನು ಪಕ್ಷದಲ್ಲಿ ಕೆಲವರಿಂದ ತಮ್ಮ ಮಕ್ಕಳಿಗೂ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿರುವ ವಿಚಾರವಾಗಿ ಮಾತನಾಡಿದ ಬಿಎಸ್​ವೈ ‘ಕೇಂದ್ರದ ನಾಯಕರ ಜೊತೆ ಮಾತನಾಡುತ್ತೇವೆ. ಅಮಿತ್ ಷಾ‌ ಹೋದ ಕಡೆ ಎಲ್ಲೂ ಹಿನ್ನಡೆ ಆಗಿಲ್ಲ. ಕೇಂದ್ರದ‌ ನಿರ್ಧಾರಕ್ಕೆ ನಾವೆಲ್ಲರೂ‌ ಬದ್ಧರಾಗಿರಬೇಕು’ ಎಂದಿದ್ದಾರೆ.

    ಇನ್ನು ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ವಿರುದ್ದ ಟಿಕೆಟ್ ಕೊಡದಂತೆ ಪ್ರತಿಭಟನೆಯ ವಿಚಾರವಾಗಿ ‘ಯಾವ ಪಕ್ಷ ನೂರಕ್ಕೂ ನೂರರಷ್ಟು ಅಧಿಕಾರಕ್ಕೆ ಬರುತ್ತದೋ ಆ ಪಕ್ಷದಲ್ಲಿ ಈ ರೀತಿ ವಿರೋಧ ವ್ಯಕ್ತವಾಗೋದು ಸಹಜ. ಈಗಾಗಲೇ ಮೂರು ಸರ್ವೆ ಆಗಿದೆ. ಆದಷ್ಟು ಬೇಗ ಹೈಕಮಾಂಡ್ ನಾಯಕರು ಅಭ್ಯರ್ಥಿ ಆಯ್ಕೆ ಮಾಡ್ತಾರೆ.

    ಇನ್ನು ಕೆಲ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿದ್ದು ಇದರ ಕುರಿತಾಗಿ ಮಾತನಾಡಿದ ಬಿಎಸ್​ವೈ ‘ಯಾರಿಗೆ ಟಿಕೆಟ್ ಸಿಗಲ್ವೋ ಅವರು ಕೂಡ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆ. ಕೆಲವು ಒಂದಿಬ್ಬರು ಟಿಕೆಟ್ ಸಿಗಲ್ಲ ಅಂತಾ ಬೇರೆ ಕಡೆ ಹೋಗಿರಬಹುದು. ಆದರೆ ಹಿಂದೆ ಬಿಜೆಪಿಗೆ ಬಂದ ಯಾವ ಶಾಸಕರು ಕೂಡ ಕಾಂಗ್ರೆಸ್ ಗೆ ಹೋಗಲ್ಲ. ಅವರು ಎಲ್ಲರಿಗೂ ಮೋದಿ ಮೇಲೆ ಬಹಳ ನಂಬಿಕೆ ವಿಶ್ವಾಸ ಇದೆ. ಟಿಕೆಟ್ ಆಯ್ಕೆ ಮಾನದಂಡಗಳ ಬಗ್ಗೆ ನಾನು ತೀರ್ಮಾನ ಮಾಡುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ’ ಎಂದಿದ್ದಾರೆ.

    ಇದನ್ನೂ ಓದಿ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ: ಜಾಮೀನಿನ ಮೇಲೆ ಮೂವರ ಬಿಡುಗಡೆ

    ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು ಇದೇ ಸಂದರ್ಭ ಸಿದ್ದರಾಮಯ್ಯಗೆ ಮಾಜಿ ಸಿಎಂ ಬಿಎಸ್ವೈ ಟಾಂಗ್ ಕೊಟ್ಟಿದ್ದಾರೆ. ‘ವರುಣಾದಲ್ಲಿ ವಿಜಯೇಂದ್ರ‌ ಸ್ಪರ್ಧೆ ಬಗ್ಗೆ ಚರ್ಚೆ ನಡೀತ್ತಿದೆ. ಸಿದ್ದರಾಮಯ್ಯಗೂ ಗೊತ್ತಿದೆ ಅವರ ನೆಲ ಕುಸಿಯುತ್ತಿದೆ ಎಂದು. ಅವರ ಗೆಲುವು ಅಷ್ಟು ಸುಲಭವಲ್ಲ ಅಂತಲೂ ಅವರಿಗೆ ತಿಳಿದಿದೆ. ನಾವು ಅವರ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕ್ತೀವಿ. ಟಫ್ ಫೈಟ್ ಅಂತೂ ಆಗುತ್ತದೆ. ವಿಜಯೇಂದ್ರ‌ ಸ್ಪರ್ಧೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ’ ಎಂದು ಬಿಎಸ್​ವೈ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts