More

    ಕಸ್ತೂರಿ ವರದಿ ಜಾರಿಗೆ ಉಪಸಮಿತಿ – ಕೈಗಾರಿಕೆ ಭೂಮಿ ನೋಂದಣಿ ಶುಲ್ಕ ಇಳಿಕೆ : ಸಂಪುಟ ಸಭೆ ಒಪ್ಪಿಗೆ

    ಬೆಂಗಳೂರು : ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಮತ್ತು ಜೀವ ವೈವಿಧ್ಯತೆ ರಕ್ಷಣೆ ಸಂಬಂಧ ಡಾ.ಕಸ್ತೂರಿ ರಂಗನ್ ನೀಡಿರುವ ವರದಿ ಜಾರಿ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಕ್ಕಾಗಿ ಆರು ಸಚಿವರನ್ನೊಳಗೊಂಡ ಸಂಪುಟ ಉಪ ಸಮಿತಿಯನ್ನು ಮುಖ್ಯಮಂತ್ರಿ ರಚಿಸಿದ್ದಾರೆ.

    ಗುರುವಾರ ನಡೆದ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚೆ ನಡೆಯಿತು. ರಾಜ್ಯದ ರಾಷ್ಟ್ರೀಯ ಉದ್ಯಾನವನದ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ವರದಿ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಮಿತಿ ರಚಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅರಣ್ಯ ಸಚಿವರ ಅಧ್ಯಕ್ಷತೆ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ, ಕಂದಾಯ ಸೇರಿ ಆರು ಇಲಾಖೆ ಸಚಿವರು ಈ ಸಮಿತಿ ಸದಸ್ಯರಾಗಿರುತ್ತಾರೆ. ಕೂಡಲೇ ಈ ಸಮಿತಿ ಸಭೆಗಳನ್ನು ನಡೆಸಿ ರಾಜ್ಯದ ತೀರ್ಮಾನ ಬಗ್ಗೆ ಸ್ಪಷ್ಟತೆ ತಂದುಕೊಳ್ಳಬೇಕಿದೆ.

    ಕೇರಳ ಸರ್ಕಾರ ಉಪಗ್ರಹ ಆಧಾರಿತ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಟ್ಟಿತು. ಬಳಿಕ ಅನೇಕ ಪ್ರದೇಶಗಳನ್ನು ಕೈಬಿಡಲಾಯಿತು. ಆದರೆ ಕರ್ನಾಟಕ ಮಾತ್ರ ಆಕ್ಷೇಪಣೆ ಸಲ್ಲಿಸುತ್ತಾ ಬಂದಿದೆಯೇ ವಿನಾ ಪರ್ಯಾಯಗಳ ಬಗ್ಗೆ ತೀರ್ವನಗಳನ್ನು ಮಾಡಿರಲಿಲ್ಲ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಯ ಭೂ ಕುಸಿತ, ಅತಿವೃಷ್ಟಿ ಹಿನ್ನೆಲೆಯಲ್ಲಿ ಈ ವರದಿಗೆ ಮಹತ್ವವಿದೆ. ಆದರೆ, ಅದನ್ನು ಜಾರಿ ಮಾಡುವುದು ಅಷ್ಟು ಸಲೀಸಲ್ಲ. ಜನ ವಿರೋಧ ಎದುರಿಸಬೇಕಾಗುತ್ತದೆ.

    ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಡಾ.ಕಸ್ತೂರಿ ರಂಗನ್ ವರದಿಯ 4ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಿತ್ತು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈ ವರದಿ ಪ್ರಕಾರ ರಾಜ್ಯದ ಹಲವು ಜಿಲ್ಲೆಗಳ ವಿವಿಧ ಗ್ರಾಮ ಮತ್ತು ಅರಣ್ಯ ಪ್ರದೇಶಗಳನ್ನು ಸೂಕ್ಷ್ಮ ಪರಿಸರ ವಲಯ (ಇಎಸ್​ರೆೆಡ್) ಎಂದು ಘೋಷಿಸಲು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

    ಏನಿದೆ ವರದಿಯಲ್ಲಿ?
    ವರದಿ ಹಾಗೂ ಕೇಂದ್ರದ ಕರಡಿನ ಪ್ರಕಾರ, ರಾಜ್ಯದ 1452 ಗ್ರಾಮಗಳ ಪರಿದಿಯ ಈ ವ್ಯಾಪ್ತಿಯಲ್ಲಿ ಯಾವುದೇ ಹೊಸ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಎಲ್ಲ ರೀತಿಯ ಗಣಿಗಾರಿಕೆಯನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಗಿತಗೊಳಿಸಬೇಕು, ದೊಡ್ಡ ಕಟ್ಟಡ ನಿರ್ವಿುಸುವಂತಿಲ್ಲ, ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆ ಸಂಪೂರ್ಣ ನಿಷಿದ್ಧ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವರದಿಯನ್ನು ಯಥಾವತ್ತು ಜಾರಿಗೊಳಿಸದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಮತ್ತೊಮ್ಮೆ ಪತ್ರ ಬರೆಯಲು ನಿರ್ಧರಿಸಿದ್ದರು. ಇನ್ನೊಂದೆಡೆ ವರದಿ ಜಾರಿಗೆ ಸಂಬಂಧಿಸಿದಂತೆ ಡಿ.31ರೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇದೇ ವೇಳೆ ವರದಿ ಜಾರಿಯಾದರೆ ಮಲೆನಾಡಿನ ಜನರ ಜೀವನಕ್ಕೆ ತೊಂದರೆಯಾಗಲಿದೆ. ನೂರಾರು ಹಳ್ಳಿಗಳಲ್ಲಿನ ರಸ್ತೆ, ಆಸ್ಪತ್ರೆಗಳೆಲ್ಲ ಅರಣ್ಯದ ಭಾಗವಾಗಲಿದೆ. ನ್ಯಾಯಾಲಯ ಆದೇಶ ಪಾಲಿಸುವ ಧಾವಂತ ಬೇಡ. ಜನರಲ್ಲಿ ಒಕ್ಕಲೆಬ್ಬಿಸುವ ಆತಂಕವಿದೆ ಎಂದು ಮಲೆನಾಡು ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ವರದಿ ಜಾರಿಗೆ ಅಧಿಸೂಚನೆ ಹೊರಡಿಸದೆ ಇದ್ದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಹಸಿರು ನ್ಯಾಯಾಧಿಕಾರಣ ಕೇಂದ್ರವನ್ನು ಎಚ್ಚರಿಸಿದೆ. ಇದೇ ಕಾರಣಕ್ಕೆ ಕೇಂದ್ರ ಕೂಡ ರಾಜ್ಯದ ಮೇಲೆ ಒತ್ತಡ ಹೇರುತ್ತಿದೆ.

    ಗ್ರಾಮಗಳ ವಿರೋಧ
    1576 ಗ್ರಾಮ ಸಭೆಗಳು ವರದಿ ಜಾರಿ ವಿರುದ್ಧ ನಿರ್ಣಯ ಮಾಡಿದ್ದು, ಅದನ್ನು ಕೇಂದ್ರಕ್ಕೂ ಕಳಿಸಲಾಗಿದೆ. ಅಲ್ಲದೆ ಜನರಿಗೆ ತೊಂದರೆಯಾಗುವ ಈ ವರದಿ ಜಾರಿಯನ್ನು ರಾಜ್ಯ ಸರ್ಕಾರ ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿತ್ತು. ಕೇಂದ್ರ ಸರ್ಕಾರ ನಾಲ್ಕು ಬಾರಿ ಕರಡು ಅಧಿಸೂಚನೆ ಹೊರಡಿಸಿದರೂ ರಾಜ್ಯ ಸರ್ಕಾರ ಒಪ್ಪಿಕೊಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ.

    ನೋಂದಣಿಗೆ ರಿಯಾಯಿತಿ – ಕೈಗಾರಿಕೆ ಭೂಮಿ ಶುಲ್ಕ ಶೇ.3ಕ್ಕೆ ಇಳಿಕೆ
    *20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲ್ಯಾಟ್​ಗಳಿಗೆ ಶೇ.2 ಡಿಸ್ಕೌಂಟ್
    ನೂತನ ಕೈಗಾರಿಕಾ ನೀತಿಯಲ್ಲಿ ಪ್ರಸ್ತಾಪಿಸಿದಂತೆ ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕವನ್ನು ಸರ್ಕಾರ ಇಳಿಕೆ ಮಾಡಿದೆ. ಪ್ರಸ್ತುತ ಕೈಗಾರಿಕಾ ಭೂಮಿಯ ನೊಂದಣಿ ಶುಲ್ಕ ಶೇ.5 ಇದೆ. ಅದನ್ನು ಶೇ.3ಕ್ಕೆ, 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲ್ಯಾಟ್​ಗಳ ನೋಂದಣಿಯಲ್ಲೂ ಶೇ.2 ರಿಯಾಯಿತಿ ನೀಡಲು ಸಂಪುಟ ನಿರ್ಧರಿಸಿದೆ. 20 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಫ್ಲ್ಯಾಟ್​ಗಳಿಗೆ ಈ ರಿಯಾಯಿತಿ ಅನ್ವಯವಾಗಲ್ಲ. ಆದರೆ, ಕೈಗಾರಿಕೆ ಭೂಮಿ ಖರೀದಿ ವಿಚಾರದಲ್ಲಿ ಯಾವುದೇ ಮಿತಿ ಇರುವುದಿಲ್ಲ. ಎಷ್ಟೇ ಭೂಮಿ ಖರೀದಿಸಿದರೂ ಶೇ.2 ನೋಂದಣಿ ಶುಲ್ಕ ವಿನಾಯಿತಿ ಸಿಗಲಿದೆ.

    ಇತರ ನಿರ್ಣಯಗಳು
    *ಕರೆ ತುಂಬಿಸುವ 1281 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ
    *5 ಸಾವಿರ ಬಸ್​ಗಳಿಗೆ ಸಿಸಿಟಿವಿ
    *ಮಹಿಳೆಯರ ಸುರಕ್ಷತೆಗೆ ಆಪ್, ಹೊಸ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಘೋಷಣೆ. ಚರ್ಚ್​ಗೆ ಭೂಮಿ. ಖನಿಜಾನ್ವೇಷಣೆಗೆ ಅನುಮೋದನೆ

    ವಸತಿ ರಿಯಲ್​ಎಸ್ಟೇಟ್ ಕ್ಷೇತ್ರಕ್ಕೆ ಉಡುಗೊರೆ- ಬಿಲ್ಡರ್​ಗಳಿಗೂ, ಮನೆ ಖರೀದಿದಾರರಿಗೂ ತೆರಿಗೆ ವಿನಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts