More

    ಕಾರವಾರದಲ್ಲೂ ‘ವೆಲ್​ಕಮ್ ಟು ಮಹಾರಾಷ್ಟ್ರ’ !

    ಕಾರವಾರ ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ ಪವಾರ ಇತ್ತೀಚೆಗೆ ನೀಡಿದ ಹೇಳಿಕೆ ಕನ್ನಡಿಗರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೆ, ಬಿಎಸ್​ಎನ್​ಎಲ್ ಆಗಲೇ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಬಿಟ್ಟಂತಿದೆ!!

    ಕಾರವಾರ ನಗರದಲ್ಲಿರುವ ಬಿಎಸ್​ಎನ್​ಎಲ್ ಮೊಬೈಲ್ ನೆಟ್​ವರ್ಕ್ ಬಳಕೆದಾರರಿಗೆ ವೆಲ್​ಕಮ್ ಟು ಮಹಾರಾಷ್ಟ್ರ ಎಂಬ ಸಂದೇಶ ಬರುತ್ತಿದೆ. ಇದರಿಂದಾಗಿ ಜನರು ಗೊಂದಲಕ್ಕೀಡಾಗಿದ್ದಾರೆ. ಯಾವಾಗ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿದರು ಎಂದು ತಿಳಿಯದಂತಾಗಿದ್ದಾರೆ.

    ನವೆಂಬರ್ 27ರ ರಾತ್ರಿ ನಗರದ ಕೆಎಚ್​ಬಿ ಭಾಗದ ಕೆಲ ಬಿಎಸ್​ಎನ್​ಎಲ್ ಗ್ರಾಹಕರಿಗೆ ಈ ರೀತಿ ಸಂದೇಶ ಬಂದಿದೆ. ಇದೇನು ಮೊದಲ ಬಾರಿಯಲ್ಲ. ಗೋವಾ ಗಡಿಯಲ್ಲಿರುವ ದೇವಬಾಗ, ಮಾಜಾಳಿ, ಸದಾಶಿವಗಡ ಯಾವುದೇ ಪ್ರದೇಶಕ್ಕೆ ಪರವೂರಿನ ಜನ ಹೋದರೂ ಅವರ ಮೊಬೈಲ್​ಫೋನ್​ಗೆ ವೆಲ್​ಕಮ್ ಟು ಮಹಾರಾಷ್ಟ್ರ ಎಂಬ ಸಂದೇಶ ಬರುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ನಗರದಲ್ಲೂ ಈ ರೀತಿ ಸಂದೇಶ ಬಂದಿದ್ದು, ಇದರ ಸ್ಕ್ರೀನ್ ಶಾಟ್ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

    ಗೋವಾ ರಾಜ್ಯವು ಬಿಎಸ್​ಎನ್​ಎಲ್ ಮಹಾರಾಷ್ಟ್ರ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಇದರಿಂದ ಗೋವಾಕ್ಕೆ ಕಾಲಿಟ್ಟರೂ ವೆಲ್​ಕಮ್ು ಮಹಾರಾಷ್ಟ್ರ ಎಂಬ ಸಂದೇಶ ಬರುತ್ತದೆ. ಆದರೆ, ಗೋವಾದದಿಂದ 12 ಕಿ.ಮೀ. ದೂರದಲ್ಲಿರುವ ಕಾರವಾರ ನಗರಕ್ಕೂ ಈ ಸಂದೇಶ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

    ಆ ರೀತಿಯ ಸಂದೇಶ ಬರಬಾರದು. ನಿರ್ದಿಷ್ಟ ಪ್ರದೇಶ ಯಾವುದು ಎಂದು ತಿಳಿಸಿದರೆ, ನಾವು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರಾಜೇಶ್ವರಿ ಎ.ಎಸ್. ಬಿಎಸ್​ಎನ್​ಎಲ್ ಅಧಿಕಾರಿ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts