More

    72 ಸಾವಿರ ಅಂಕಗಳ ಗಡಿ ದಾಟಿದ ಬಿಎಸ್​ಇ ಸೂಚ್ಯಂಕ: ಸತತ ಮೂರನೇ ದಿನವೂ ಗುಳಿ ಗುಟುರು ಹಾಕಿದ್ದೇಕೆ?

    ಮುಂಬೈ: ಗುರುವಾರದ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕ 72 ಸಾವಿರ ಅಂಕಗಳ ಗಡಿಯನ್ನು ದಾಟಿತು. ನಿಫ್ಟಿ ಸೂಚ್ಯಂಕ ಕೂಡ 22,000 ಅಂಕಗಳ ಗಡಿ ಸಮೀಪಿಸಿತು,

    ಮಾರುಕಟ್ಟೆಯ ಪ್ರಮುಖ ಷೇರುಗಳಾದ ಎಂ & ಎಂ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐನಲ್ಲಿ ಭಾರಿ ಖರೀದಿ ನಡೆಯಿತು. ಇದಲ್ಲದೆ, ಆಟೋ, ಇಂಧನ ಮತ್ತು ಯುಟಿಲಿಟಿ ವಲಯಗಳಲ್ಲಿ ಬಲವಾದ ವಹಿವಾಟು ಕೂಡ ಸೂಚ್ಯಂಕ ಏರಿಕೆಗೆ ಕಾರಣವಾಯಿತು.

    ಗುರುವಾರ 30-ಷೇರುಗಳ ಬಿಎಸ್‌ಇ ಸೂಚ್ಯಂಕವು 227.55 ಅಂಕಗಳು ಅಥವಾ ಶೇಕಡಾ 0.32 ರಷ್ಟು ಏರಿಕೆಯಾಗಿ 72,050.38 ಕ್ಕೆ ತಲುಪಿತು. ದಿನದ ವಹಿವಾಟಿನ ನಡುವಿನ ಸಮಯದಲ್ಲಿ ಇದು ಗರಿಷ್ಠ 72,164.97 ಮತ್ತು ಕನಿಷ್ಠ 71,644.44 ಅಂಕಗಳನ್ನು ಮುಟ್ಟಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 70.70 ಅಂಕಗಳು ಅಥವಾ ಶೇಕಡಾ 0.32 ರಷ್ಟು ಏರಿಕೆ ಕಂಡು 21,910.75 ಕ್ಕೆ ತಲುಪಿತು.

    “ಜಾಗತಿಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಸಕಾರಾತ್ಮಕ ಭಾವನೆಯನ್ನು ಸೂಚ್ಯಂಕ ಪ್ರತಿಬಿಂಬಿಸುತ್ತದೆ. ಯುರೋ ವಲಯದಲ್ಲಿನ ಹಣದುಬ್ಬರ ಇಳಿತದ ಪ್ರವೃತ್ತಿಯು ಉತ್ತಮ ಗಳಿಕೆಯೊಂದಿಗೆ ಸೇರಿಕೊಂಡು ಹೂಡಿಕೆದಾರರ ಭಾವನೆಯನ್ನು ಹೆಚ್ಚಿಸಿತು. ಮಾರುಕಟ್ಟೆಯಲ್ಲಿ ಭಾಗವಹಿಸುವವರು ಗುಣಮಟ್ಟದ ದೊಡ್ಡ-ಕ್ಯಾಪ್ ಸ್ಟಾಕ್‌ಗಳತ್ತ ಹೆಚ್ಚು ಒಲವನ್ನು ಹೊಂದಿದ್ದಾರೆ, ಇದು ಸಣ್ಣ ಮತ್ತು ಮಧ್ಯಮ-ಕ್ಯಾಪ್‌ಗಳ ಮೇಲೆ ಎಚ್ಚರಿಕೆ ವಹಿಸಲು ಕಾರಣವಾಯಿತು” ಎಂದು ಜಿಯೋಜಿತ್ ಫೈನಾನ್ಷಿಯಲ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

    ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಬೆಲೆ ಶೇಕಡಾ 2.15 ರಷ್ಟು ಏರಿಕೆ ಕಂಡು 1,413.75 ರೂಪಾಯಿ ತಲುಪಿತು.
    ಮಹೀಂದ್ರಾ ಆ್ಯಂಡ್ ಮಹೀಂದ್ರಾ (M&M) ಷೇರುಗಳ ಬೆಲೆ ಶೇಕಡಾ 6.51ರಷ್ಟು ಏರಿಕೆಯಾಯಿತು. ನಂತರ ಎನ್​ಟಿಪಿಸಿ, ಪವರ್​ ಗ್ರಿಡ್​, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್ ಮತ್ತು ವಿಪ್ರೋ ಷೇರುಗಳ ಬೆಲೆ ಏರಿಕೆ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ, ಆಕ್ಸಿಸ್ ಬ್ಯಾಂಕ್, ಐಟಿಸಿ, ಎಚ್‌ಯುಎಲ್, ನೆಸ್ಲೆ ಇಂಡಿಯಾ ಮತ್ತು ಸನ್ ಫಾರ್ಮಾ ಷೇರುಗಳ ಬಲೆ ಕುಸಿಯಿತು.
    ಏಷ್ಯಾದಲ್ಲಿ, ಜಪಾನ್‌ನ ನಿಕ್ಕಿ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಲಾಭ ಕಂಡರೆ, ದಕ್ಷಿಣ ಕೊರಿಯಾದ ಕೋಸ್ಪಿ ನಷ್ಟ ಅನುಭವಿಸಿತು. ಚಂದ್ರಮಾನ ಹೊಸ ವರ್ಷದ ರಜಾದಿನಗಳಿಗಾಗಿ ಚೀನಾದ ಹಣಕಾಸು ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಆರಂಭಿಕ ವ್ಯವಹಾರಗಳಲ್ಲಿ ಐರೋಪ್ಯ ಮಾರುಕಟ್ಟೆಗಳು ಸಕಾರಾತ್ಮಕವಾಗಿ ವಹಿವಾಟು ನಡೆಸಿದವು. ಬುಧವಾರದ ರಾತ್ರಿಯ ವಹಿವಾಟಿನಲ್ಲಿ ಅಮೆರಿಕದ ಮಾರುಕಟ್ಟೆ ಲಾಭದಲ್ಲಿ ಮುನ್ನಡೆಯಿತು.

    ಬುಧವಾರದ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕ 267.64 ಅಂಕಗಳು ಅಥವಾ ಶೇಕಡಾ 0.37ರಷ್ಟು ಏರಿಕೆ ಕಂಡು 71,822.83 ಅಂಕಗಳಿಗೆ ತಲುಪಿತ್ತು. ನಿಫ್ಟಿ ಕೂಡ 96.80 ಅಂಕಗಳು ಅಥವಾ 0.45 ರಷ್ಟು ಏರಿಕೆ ಕಂಡು 21,840.05 ಅಂಕಗಳಿಗೆ ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರದಂದು ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ವಿನಿಮಯ ಕೇಂದ್ರದ ಮಾಹಿತಿಯ ಪ್ರಕಾರ ಅವರು ರೂ 3,929.60 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಇತರೆ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 39,621.72 (0.93% ಅಂಕ ಏರಿಕೆ)
    ಬಿಎಸ್​ಇ ಸ್ಮಾಲ್​​ ಕ್ಯಾಪ್​ ಸೂಚ್ಯಂಕ: 45,351.18 (1.24% ಅಂಕ ಏರಿಕೆ)
    ನಿಫ್ಟಿ ಮಿಡ್​ ಕ್ಯಾಪ್​ ಸೂಚ್ಯಂಕ: 48,821.90 (1.01% ಅಂಕ ಏರಿಕೆ)
    ನಿಫ್ಟಿ ಸ್ಮಾಲ್​​ ಕ್ಯಾಪ್​ ಸೂಚ್ಯಂಕ: 16,105.20 (1.32% ಅಂಕ ಏರಿಕೆ)

    ಮಾರ್ಚ್​ 2ರ ರಜಾದಿನದಂದು ಕೂಡ ಷೇರು ವಹಿವಾಟು: ಎನ್​ಎಸ್​ಇ ನಡೆಸಲಿದೆ ಸ್ಪೇಶಲ್​ ಲೈವ್​ ಟ್ರೇಡಿಂಗ್ ಸೆಷನ್​

    ಷೇರು ಬೆಲೆ ಕುಸಿತದಲ್ಲೂ ಲಾಭ ಮಾಡುವ ಜಾಣ್ಮೆ: ರೂ. 13,850 ಕೋಟಿಯ ಎಚ್​ಡಿಎಫ್​ಸಿ ಬ್ಯಾಂಕ್​ ಷೇರು ಖರೀದಿಸಿದ ಮ್ಯೂಚುವಲ್​ ಫಂಡ್​ಗಳು

    ಷೇರು ನೀಡಿದೆ 4300% ಬಂಪರ್ ಲಾಭ; 1 ಲಕ್ಷವಾಯ್ತು 44 ಲಕ್ಷ: ಹಲವು ಆರ್ಡರ್​ ಪಡೆದುಕೊಂಡು ವಹಿವಾಟಿನಲ್ಲಿ ಮುಂದಿದೆ ಐಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts