More

    ಸಿಎಂ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿಯಾಗಿ ಎನ್​.ಆರ್​. ಸಂತೋಷ್ ನೇಮಕ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪಿಎ ಆಗಿದ್ದ ಎನ್.ಆರ್. ಸಂತೋಷ್ ಅವರನ್ನು ರಾಜ್ಯ ಸಚಿವರ ಸ್ಥಾನಮಾನದೊಂದಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿ ಶನಿವಾರ ಸಂಜೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)ನಲ್ಲಿ ಸಕ್ರೀಯವಾಗಿ ಕಾರ್ಯಕರ್ತನಾಗಿದ್ದ ಎನ್.ಆರ್.ಸಂತೋಷ್,​ ವಿದ್ಯಾರ್ಥಿ ಜೀವನದಲ್ಲಿ ಅನೇಕ ಹೋರಾಟ ರೂಪಿಸಿದ್ದರು. ಆಪರೇಷನ್ ಕಮಲ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಸಂತೋಷ್ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ನಂತರ ಬಿಎಸ್‌ವೈರಿಂದ ದೂರವಾಗಿದ್ದರು.

    ಇದನ್ನೂ ಓದಿ: ಕೊವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸೋತಿದೆ; ರಾಜ್ಯಪಾಲರ ತೀವ್ರ ಅಸಮಾಧಾನ, ಟೀಕೆ

    ಯಡಿಯೂರಪ್ಪ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದ್ದ ಎರಡು ಪತ್ರಗಳನ್ನು ಬರೆದವರು ಸಂತೋಷ್ ಎಂದೇ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಈಗ ಮತ್ತೆ ಸಂತೋಷ್ ಸಿಎಂ ಆಪ್ತ ವಲಯ ಸೇರಿಕೊಂಡಿದ್ದಾರೆ.

    ಕಾರ್ಯದರ್ಶಿಯಾಗಿ ನೇಮಕವಾಗಿರುವ ಖುಷಿಯಲ್ಲಿ ಸಂತೋಷ್​ ಸಿಎಂ ಬಿಎಸ್​ವೈ ಅವರನ್ನು ಭೇಟಿಯಾಗಲಿದ್ದು, ಕಾವೇರಿ ನಿವಾಸಕ್ಕೆ ತೆರಳಿ ಬಿಎಸ್​ವೈ ಆಶೀರ್ವಾದ ಪಡೆಯಲಿದ್ದಾರೆ.

    ಸಂತೋಷ್ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗುವ ಮೂಲಕ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಶಾಸಕರಾದ ಎಸ್.ಆರ್. ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ. ಕಿಸಾನ್ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ್ ರಾಜಕೀಯ ಕಾರ್ಯದರ್ಶಿಗಳಾಗಿದ್ದಾರೆ. ಪತ್ರಕರ್ತ ಎಂ.ಬಿ. ಮರಮಕಲ್ ರಾಜಕೀಯ ಸಲಹೆಗಾರರಾಗಿದ್ದಾರೆ.

    ಇದನ್ನೂ ಓದಿ: ಪಾಕ್​ ಬೇಹುಗಾರಿಕೆ ಜಾಲ ಭೇದಿಸಿದ ಮಿಲಿಟರಿ ಇಂಟೆಲಿಜೆನ್ಸ್​

    ಇನ್ನೊಂದೆಡೆ ಸಂತೋಷ್‌ಗೆ ಮನ್ನಣೆ ನೀಡಿರುವುದಕ್ಕೆ ಆರ್‌ಎಸ್‌ಎಸ್ ಮತ್ತು ನಿಷ್ಠಾವಂತ ಬಿಜೆಪಿ ಗುಂಪು ಅಪಸ್ವರ ಎತ್ತುವ ಲಕ್ಷಣಗಳು ಕಾಣಿಸುತ್ತಿವೆ. ಈಗಾಗಲೇ ಬಿಜೆಪಿ ಭಿನ್ನಮತ ವಿಚಾರಗಳ ಮಾಧ್ಯಮಗಳಲ್ಲಿ ಸ್ಪೋಟವಾಗಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಕರೊನಾ ಸೋಂಕು ಕಡಿಮೆಯಾದರೆ ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಗೆ ತೊಡಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts