More

    ಸಿಗಂದೂರು ಕ್ಷೇತ್ರದ ವಿಷಯದಲ್ಲಿ ರಾಜಕಾರಣ

    ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಗಂದೂರು ದೇವಸ್ಥಾನದ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

    ಸಾಗರದ ಶಾಸಕರು ಸೇರಿ ಕೆಲವರು ಕ್ಷೇತ್ರದ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈಗ ಸಿಗಂದೂರು ಕ್ಷೇತ್ರ ರಾಜಕೀಯ ಹೋರಾಟದ ತಾಣವಾಗಿದೆ. ಭಕ್ತಿಯ ಜಾಗದಲ್ಲಿ ಬೆಂಕಿ ಬಿತ್ತಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಜಿಲ್ಲಾಧಿಕಾರಿ ಅನಗತ್ಯವಾಗಿ ಸಿಗಂದೂರು ದೇವಸ್ಥಾನದ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಯಾವ ನೋಟಿಸ್ ನೀಡದೆ, ಸಾಗರದ ನ್ಯಾಯಾಲಯದಲ್ಲಿ ನಡೆದ ಸಂಧಾನವನ್ನೂ ಪರಿಗಣಿಸದೆ ಮೇಲುಸ್ತುವಾರಿ ಸಮಿತಿ ರಚಿಸಿರುವುದು ಸರಿಯಲ್ಲ. ಈ ಸಮಿತಿ ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಾತೀತ ಹಾಗೂ ಜಾತ್ಯತೀತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಅಲ್ಲಿಗೆ ಏಕಿಲ್ಲ? ಆನಂದಪುರದ ಮುಜರಾಯಿ ದೇವಸ್ಥಾನದಲ್ಲಿ ಸಾಕಷ್ಟು ಗಲಾಟೆಗಳಾಗಿವೆ. ಎರಡು ಹುಂಡಿಗಳನ್ನು ಇಟ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಲ್ಲಿಗೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಭೇಟಿ ನೀಡುತ್ತಿಲ್ಲ. ತನಿಖೆಯನ್ನೂ ಮಾಡುವುದಿಲ್ಲ. ರಾಜ್ಯದ ಅನೇಕ ದೇಗುಲಗಳಲ್ಲಿ ಭ್ರಷ್ಟಾಚಾರ, ಮನಸ್ತಾಪವಿದೆ. ಅದೆಲ್ಲವನ್ನೂ ಬಿಟ್ಟು ಸಿಗಂದೂರಿಗೆ ಮಾತ್ರ ಮೇಲುಸ್ತುವಾರಿ ಸಮಿತಿ ಏಕೆ ಎಂದು ಬೇಳೂರು ಪ್ರಶ್ನಿಸಿದರು.

    ಹೊನಗೋಡು ರತ್ನಾಕರ್, ವಿಜಯಕುಮಾರ್, ಸುರೇಶ್ ಗೌಡ್ರು, ಸತೀಶ್, ರಾಮಪ್ಪ, ವಿರುಪಾಕ್ಷ ಗೌಡ್ರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts