More

    ಕಾರು ಅಪಘಾತದಲ್ಲಿ ಬಿಆರ್​ಎಸ್ ಶಾಸಕಿ ಲಾಸ್ಯ ನಂದಿತಾ ಸಾವು

    ತೆಲಂಗಾಣ: ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಲಾಸ್ಯ ಅವರು ತೆಲಂಗಾಣದ ಸಿಕಂದರಾಬಾದ್ ಕ್ಯಾಂಟ್ ಕ್ಷೇತ್ರದ ಶಾಸಕರಾಗಿದ್ದರು. ಸಂಗಾರೆಡ್ಡಿಯ ಅಮೀನ್‌ಪುರ ಮಂಡಲದ ವ್ಯಾಪ್ತಿಯ ಸುಲ್ತಾನ್‌ಪುರ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ಬಿಆರ್‌ಎಸ್ ಶಾಸಕರ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಲಾಸ್ಯ ನಂದಿತಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಲಾಸ್ಯ ಅವರ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನುವುದನ್ನು ಈ ಅಪಘಾತದ ಚಿತ್ರಗಳು ತೋರಿಸುತ್ತಿವೆ. ಲಾಸ್ಯ ನಂದಿತಾ ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಅವರ ತಂದೆ ಸಾಯಣ್ಣ ಅವರು ಸಿಕಂದರಾಬಾದ್ ಕ್ಯಾಂಟ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು.

    ಕಳೆದ ವರ್ಷ ಫೆಬ್ರವರಿಯಲ್ಲಿ ಲಾಸ್ಯ ನಂದಿತಾ ಅವರ ತಂದೆ ನಿಧನರಾಗಿದ್ದರು. ಇದಾದ ಬಳಿಕ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಸಿಕಂದರಾಬಾದ್‌ನಿಂದ ಲಾಸ್ಯ ನಂದಿತಾ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿತ್ತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಂದಿತಾ ಬಿಜೆಪಿ ಅಭ್ಯರ್ಥಿಯನ್ನು 17 ಸಾವಿರ ಮತಗಳಿಂದ ಸೋಲಿಸಿ ಗೆಲುವು ಸಾಧಿಸಿದ್ದರು.

    ಅಚ್ಚರಿಯ ಸಂಗತಿ ಎಂದರೆ ಇದಕ್ಕೂ ಕೆಲವೇ ದಿನಗಳ ಹಿಂದೆ ಬಿಆರ್ ಎಸ್ ಶಾಸಕಿ ನಂದಿತಾ ಮತ್ತೊಂದು ಅಪಘಾತಕ್ಕೀಡಾಗಿದ್ದರು. ಈ ತಿಂಗಳ ಫೆಬ್ರವರಿ 13 ರಂದು ನಾರ್ಕೆಟ್‌ಪಲ್ಲಿಯಲ್ಲಿ ಅವರ ಕಾರು ಅಪಘಾತಕ್ಕೀಡಾಗಿತ್ತು. ರಸ್ತೆ ಅಪಘಾತದಲ್ಲಿ ಆಕೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಸಮಯದಲ್ಲಿ ನಂದಿತಾಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಅವರು 10 ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ನಲ್ಗೊಂಡಕ್ಕೆ ಹೋಗುತ್ತಿದ್ದರು. ಈ ಸಮಯದಲ್ಲಿ, ಅವರ ಕಾರು ನಲ್ಗೊಂಡ ಜಿಲ್ಲೆಯ ನಾರ್ಕೆಟ್‌ಪಲ್ಲಿಯಲ್ಲಿ ಅಪಘಾತಕ್ಕೀಡಾಯಿತು, ಇದರಲ್ಲಿ ಅವರ ಹೋಮ್ ಗಾರ್ಡ್ ಜಿ ಕಿಶೋರ್ ಸಾವನ್ನಪ್ಪಿದ್ದರು. 

    ಮಹಾರಾಷ್ಟ್ರದ ಮಾಜಿ ಸಿಎಂ, ಮಾಜಿ ಲೋಕಸಭಾ ಸ್ಪೀಕರ್​ ಮನೋಹರ್​ ಜೋಶಿ ಹೃದಯಾಘಾತದಿಂದ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts