More

    ಚುನಾವಣೆ ಪ್ರಚಾರದಲ್ಲಿ ಡೀಪ್‌ಫೇಕ್ ತಂತ್ರಜ್ಞಾನ ದುರ್ಬಳಕೆ: ಕಾಂಗ್ರೆಸ್ ವಿರುದ್ಧ ಬಿಆರ್​ಎಸ್​ ದೂರು

    ಹೈದರಾಬಾದ್: ‘ಡೀಪ್‌ಫೇಕ್’ ತಂತ್ರಜ್ಞಾನ ಈಗ ಸಾಕಷ್ಟು ವಿವಾದ ಸೃಷ್ಟಿಸುತ್ತಿದೆ. ನಟ, ನಟಿಯರ ಚಿತ್ರ ಹಾಗೂ ವಿಡಿಯೋಗಳನ್ನು ಇನ್ನೊಬ್ಬರೊಂದಿಗೆ ಜೋಡಿಸಿ ನಕಲು ಸೃಷ್ಟಿಸಿ ಹರಿಯಬಿಡಲಾಗುತ್ತದೆ. ಆರ್ಟಿಫಿಷಿಯಲ್​ ಇಂಟಲಿಜೆನ್ಸ್ (ಎಐ) ಬಳಸಿಕೊಂಡುಕೊಂಡು ನೈಜ ಎನ್ನುವ ರೀತಿಯಲ್ಲಿ ಡೀಪ್​ಫೇಕ್​ ಸೃಷ್ಟಿಸುತ್ತಿರುವುದು ಇನ್ನಷ್ಟು ಆತಂಕಕಾರಿಯಾಗಿದೆ. ಈ ಪಿಡುಗಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಕಾನೂನು, ನಿಯಮಾವಳಿ ರೂಪಿಸಲು ಕ್ರಮ ಕೈಗೊಳ್ಳುತ್ತಿದೆ.

    ಈ ಪಿಡುಗು ರಾಜಕೀಯ, ಚುನಾವಣೆಗೂ ಹಬ್ಬುತ್ತಿದೆಯೇ ಎಂಬ ಪ್ರಶ್ನೆ ಈಗ ಉದ್ಘವಿಸುತ್ತಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಸದ್ಯ ಜರುಗುತ್ತಿದ್ದು, ತೆಲಂಗಾಣದಲ್ಲಿ ನ. 30ರಂದು ಮತದಾನ ನಡೆದಿದೆ. ಈ ರಾಜ್ಯದಲ್ಲಿ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಕಾಂಗ್ರೆಸ್​ ವಿರುದ್ಧ ಡೀಪ್​ಫೇಕ್​ ತಂತ್ರಜ್ಞಾನ ದುರುಪಯೋಗದ ಆರೋಪ ಮಾಡಿದೆ.

    ತೆಲಂಗಾಣದಲ್ಲಿ ಬಿಆರ್‌ಎಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇತರ ಪ್ರಮುಖರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ‘ಡೀಪ್‌ಫೇಕ್’ ತಂತ್ರಜ್ಞಾನವನ್ನು ಬಳಸಿಕೊಂಡು ಕಪೋಲಕಲ್ಪಿತ ವಿಷಯವನ್ನು ಸೃಷ್ಟಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ (ಇಸಿ) ದೂರು ಸಲ್ಲಿಸಿದೆ.

    ಮುಖ್ಯ ಚುನಾವಣಾ ಆಯುಕ್ತರು, ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ಮತ್ತು ರಾಜ್ಯ ಡಿಜಿಪಿ ಅವರಿಗೆ ಬುಧವಾರ ನೀಡಿದ ದೂರಿನಲ್ಲಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯು (ಟಿಪಿಸಿಸಿ) ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯ ಮೂಲಕ ಆಡಿಯೋ ಮತ್ತು ವಿಡಿಯೋ ವಿಷಯಗಳ ನಕಲಿ ಸೃಷ್ಟಿ ಮತ್ತು ಪ್ರಸರಣದಲ್ಲಿ ತೊಡಗಿಸಿಕೊಂಡಿದೆ ಎಂದು ವಿಶ್ವಾಸಾರ್ಹ ಮೂಲಗಳು ಮಾಹಿತಿ ನೀಡಿವೆ ಎಂದು ಬಿಆರ್‌ಎಸ್ ಹೇಳಿದೆ. ”ಡೀಪ್‌ಫೇಕ್.

    ಕೆಸಿಆರ್, ಕೆ.ಟಿ.ರಾಮರಾವ್, ಸಚಿವ ಹರೀಶ್ ರಾವ್, ಎಂಎಲ್ಸಿ ಕೆ.ಕವಿತಾ ಸೇರಿದಂತೆ ಬಿಆರ್‌ಎಸ್‌ನ ಪ್ರಮುಖ ನಾಯಕರು ಮತ್ತು ಪಕ್ಷದ ಇತರ ಅಭ್ಯರ್ಥಿಗಳಿಗೆ ಸಂಬಂಧಿಸಿದ ಕಪೋಲಕಲ್ಪಿತ ವಿಷಯವನ್ನು ಇದು ಒಳಗೊಂಡಿದೆ ಎಂದು ಬಿಆರ್​ಎಸ್​ ಆಪಾದಿಸಿದೆ. ತಂತ್ರಜ್ಞಾನದ ಕಾನೂನುಬಾಹಿರ ಬಳಕೆಯ ವಿರುದ್ಧ ಕಾಂಗ್ರೆಸ್​ ಮೇಲೆ ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಕೋರಿದೆ.

    “ಈ ಕುಶಲತೆಯ ವಿಷಯವು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಚಿತ್ರ, ವೀಡಿಯೋಗಳು ಮತ್ತು ಮೀಮ್‌ಗಳು ಸೇರಿದಂತೆ ವಿವಿಧ ಸ್ವರೂಪದಲ್ಲಿ ಮಾಧ್ಯಮಗಳನ್ನು ಸೃಷ್ಟಿಸುತ್ತಿರುವ ರಾಜ್ಯ ಕಾಂಗ್ರೆಸ್​ ಮತ್ತು ಅದರ ವಿವಿಧ ಕಾನೂನು, ಕಾನೂನುನೇತರ ಮತ್ತು ಅದೃಶ್ಯ ನಿರ್ವಾಹಕರನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ” ಎಂದು ಬಿಆರ್‌ಎಸ್ ದೂರಿನಲ್ಲಿ ತಿಳಿಸಲಾಗಿದೆ.

    “ಆತ್ಮೀಯ ಮತದಾರರೇ, ನಾವು ಜಾಗರೂಕರಾಗಿರಬೇಕು! ಹತಾಶ ಪಕ್ಷಗಳು ತೆಲಂಗಾಣದಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿವೆ! ನಕಲಿ ಸುದ್ದಿಗಳು ನಿಮ್ಮ ನಿರ್ಧಾರಗಳನ್ನು ತಿರುಗಿಸಲು ಬಿಡಬೇಡಿ. ಮೊದಲು ಮಾಹಿತಿಯನ್ನು ಪರಿಶೀಲಿಸಿ ನಂಬುವುದು ಅಥವಾ ಹಂಚಿಕೊಳ್ಳುವುದು ಮಾಡಬೇಕು. ನಮ್ಮ ಪ್ರಜಾಪ್ರಭುತ್ವವು ತಿಳಿವಳಿಕೆಯುಳ್ಳ ಆಯ್ಕೆಗಳ ಮೇಲೆ ಬೆಳೆಯುತ್ತದೆ, ತಪ್ಪು ಮಾಹಿತಿ ಮೇಲಲ್ಲ” ಎಂದು ಬಿಆರ್​ಎಸ್ ನಾಯಕಿ ಕವಿತಾ ಅವರು ಎಕ್ಸ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

    ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ ಎಂದರೇನು? ಗ್ರೇ ಮಾರುಕಟ್ಟೆಯಲ್ಲಿ ಷೇರು ವಹಿವಾಟು ಹೇಗೆ ನಡೆಯುತ್ತದೆ?

    ಭಾರತೀಯರನ್ನು ಬಾಸ್ಟರ್ಡ್ಸ್​ ಎಂದಿದ್ದ ನೊಬೆಲ್​ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ 100ನೇ ವಯಸ್ಸಿನಲ್ಲಿ ನಿಧನ

    ಗುಜರಾತ್ ಈಥರ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಏಳು ಕಾರ್ಮಿಕರ ಶವ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts