More

    ರಾಜಧಾನಿ ದೆಹಲಿ ವಿಧಾನಸಭೆಯಲ್ಲಿ ಪತ್ತೆಯಾಯ್ತು ರಹಸ್ಯ ಸುರಂಗ ಮಾರ್ಗ..!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆಯಲ್ಲಿ ಗುರುವಾರ ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ. ಬ್ರಿಟಿಷ್​ ಕಾಲದ ಆ ಸುರಂಗ ಮಾರ್ಗವು ವಿಧಾನಸಭೆಯಿಂದ ರೆಡ್​ಪೋರ್ಟ್​ ಅನ್ನು ಸಂಪರ್ಕಿಸುತ್ತದೆ.

    ಮೂಲಗಳ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಭಟನೆಯ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಬ್ರಿಟಿಷರು ಈ ಸುರಂಗ ಮಾರ್ಗವನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

    ಈ ಬಗ್ಗೆ ಮಾತನಾಡಿರುವ ದೆಹಲಿ ವಿಧಾನಸಭೆಯ ಸ್ಪೀಕರ್​ ರಾಮ್​ ನಿವಾಸ್​ ಗೋಯೆಲ್​, ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಹೋಗುವ ಸುರಂಗದ ಬಗ್ಗೆ ಸುದ್ದಿಯಿತ್ತು ಮತ್ತು ನಾನು ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದೆ. ಆದರೆ ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ಸುರಂಗದ ಬಾಗಿಲು ಪತ್ತೆಯಾಗಿದೆ. ಆದರೆ, ನಾವದನ್ನು ಅಗೆಯುವುದಿಲ್ಲ. ಏಕೆಂದರೆ ಸುರಂಗದ ಎಲ್ಲ ಮಾರ್ಗಗಳು ಮೆಟ್ರೋ ಯೋಜನೆ ಪೈಪ್​ ಅಳವಡಿಯಿಂದ ನಾಶವಾಗಿದೆ ಎಂದು ಹೇಳಿದರು.

    ಆದರೆ, ನಾವದನ್ನು ಶೀಘ್ರವೇ ನವೀಕರಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತೇವೆ. ಮುಂದಿನ ವರ್ಷ ಆಗಸ್ಟ್ 15ರೊಳಗೆ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭಾವಿಸುತ್ತೇನೆಂದು ರಾಮ್ ನಿವಾಸ್ ಗೋಯೆಲ್ ಹೇಳಿದರು. ರಾಜಧಾನಿಯನ್ನು ಕೋಲ್ಕತ್ತಾದಿಂದ 1912ರಲ್ಲಿ ದೆಹಲಿಗೆ ವರ್ಗಾಯಿಸಿದ ನಂತರ ದೆಹಲಿ ಶಾಸನಸಭೆಯನ್ನು ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಯಿತು ಎಂದು ತಿಳಿಸಿದರು. 1926ರಲ್ಲಿ ಅಸೆಂಬ್ಲಿಯನ್ನು ನ್ಯಾಯಾಲಯವಾಗಿ ಪರಿವರ್ತಿಸಲಾಯಿತು ಮತ್ತು ಬ್ರಿಟಿಷರು ಈ ಸುರಂಗವನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲು ಬಳಸುತ್ತಿದ್ದರು ಎಂದು ತಿಳಿಸಿದರು.

    ಸ್ವಾತಂತ್ರ್ಯ ಹೋರಾಟದ ಸಂದರ್ಭದ ಈ ಸ್ಥಳವು ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಪ್ರವಾಸಿಗರು ನಮ್ಮ ಇತಿಹಾಸದ ಪ್ರತಿಬಿಂಬವನ್ನು ಪಡೆಯುವ ರೀತಿಯಲ್ಲಿ ನಾವು ಅದನ್ನು ನವೀಕರಿಸಲು ಉದ್ದೇಶಿಸಿದ್ದೇವೆ ಎಂದು ರಾಮ್ ನಿವಾಸ್ ಗೋಯೆಲ್ ಹೇಳಿದರು. (ಏಜೆನ್ಸೀಸ್​)

    ತಂದಿಡೋಕೆ ಪ್ರಯತ್ನ ಮಾಡಿದ್ರು: ಕೆಲ ಯೂಟ್ಯೂಬರ್ಸ್​ ವಿರುದ್ಧ ಬೇಸರ ವ್ಯಕ್ತಪಡಿಸಿದ ನಟ ಧ್ರುವ ಸರ್ಜಾ

    ಡೆಡ್ಲಿ ಕಾರು ಅಪಘಾತ ಕೇಸ್​: ಕೇರಳದ ಧನುಷಾ MLA ಪುತ್ರನ ಕಾರನ್ನೇರಿದ್ದೇಕೆ? ಇಬ್ಬರಿಗೂ ಹೇಗೆ ಪರಿಚಯ?

    ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಸಾರಾ ಮಹೇಶ್​! ಆಂಧ್ರ ಅಧಿಕಾರಿಗಳ ಮನೆಗೆ ಹೋಯ್ತಾ 6 ಕೋಟಿ ರೂ.?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts