More

    ವಿಮಾನ ಪ್ರಯಾಣಿಕರಿಗೆ ಸೆಕ್ಸ್​ ಆಫರ್​: ಗಗನಸಖಿಯ ಫೇಸ್​ಬುಕ್​ ಪೋಸ್ಟ್​ನಿಂದ ಮಾದಕ ರಹಸ್ಯ ಬಯಲು!

    ಲಂಡನ್​: ಬ್ರಿಟಿಷ್​ ಏರ್​ವೇಸ್​ನ ಗಗನಸಖಿಯೊಬ್ಬಳು ವಿಮಾನ ಹಾರಾಟದ ನಡುವೆಯೇ ಸೆಕ್ಸ್​ ಮಾರಾಟ ಮಾಡುವುದಾಗಿ ಹೇಳಿದ್ದು, ಮೈಲ್​ ಹೈ ಕ್ಲಬ್​ (ವಿಮಾನದಲ್ಲಿ ಸೆಕ್ಸ್​ ದಂಧೆ ನಡೆಸುವ ಅನಧಿಕೃತ ಗ್ರೂಪ್​​)ಗೆ ಸೇರಿಕೊಳ್ಳಬಹುದು ಎಂದು ಗ್ರಾಹಕರಿಗೆ ಆಫರ್​ ಮಾಡಿದ್ದಾಳೆ.

    ಫೇಸ್​ಬುಕ್​ ಪೇಜ್​ನಲ್ಲಿ ವಿಮಾನದ ಒಳಗೆ ತೆಗೆದಿರುವ ತನ್ನದೇ ಕೆಲವೊಂದು ಅಶ್ಲೀಲ ಚಿತ್ರಗಳನ್ನು ಗಗನಸಖಿ ಪೋಸ್ಟ್ ಮಾಡಿಕೊಂಡಿದ್ದು, ಪ್ರೀತಿಯ ಪ್ರಯಾಣಿಕರೇ ನಾನು ನಿಮ್ಮ ವಿಮಾನ ಮನರಂಜಕ. ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ? ಎಂದು ಚಿತ್ರಕ್ಕೆ ಅಡಿಬರಹ ನೀಡಿದ್ದಾಳೆ.

    ಅನಾಮಧೇಯ ಗಗನಸಖಿ ದಿ ಸನ್​ ವೆಬ್​ಸೈಟ್​ ಜತೆ ಮಾತನಾಡಿದ್ದು, ತಾನು ಬ್ರಿಟಿಷ್​ ಏರ್​ವೇಸ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಅಲ್ಲದೆ, ಆನ್​ಲೈನ್​ ಮೂಲಕ 25 ಪೌಂಡ್ (2,460 ರೂಪಾಯಿ)ಗೆ ತನ್ನ ಒಂದು ಜತೆ ಒಳಉಡುಪು ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದಿಸುತ್ತೇನೆ. ಅಲ್ಲದೆ, ಒಂದೊಂದು ಸೇವೆಗಳಿಗೂ ಪ್ರತ್ಯೇಕ ಹಣವನ್ನು ತೆಗೆದುಕೊಳ್ಳುತ್ತೇನೆಂದು ಮುಕ್ತವಾಗಿ ಹೇಳಿದ್ದಾಳೆ.

    ಇದನ್ನೂ ಓದಿ: ಜೀವದಾನಕ್ಕೂ ಕರೊನಾ ಕಾಟ: ಅಂಗಾಂಗ ಕಸಿ, ನೇತ್ರ, ರಕ್ತದಾನಕ್ಕೆ ಅಡ್ಡಿಯಾದ ಮಹಾಮಾರಿ ಗ್ರಹಣ

    ಇನ್ನು ತನ್ನ ಬ್ಲಾಗ್​ನಲ್ಲೂ ಬರೆದುಕೊಂಡಿರುವ ಗಗನಸಖಿ, ವಿಮಾನದಲ್ಲಿ ಗ್ರಾಹಕರು ಹಣ ನೀಡುವುದಾದರೆ ವಯಸ್ಕ ಮನರಂಜನೆಯನ್ನು ನೀಡುತ್ತೇನೆಂದು ಆಫರ್​ ಮಾಡಿದ್ದಾಳೆ. ಪ್ರತಿಯೊಂದು ದರವು ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ನಾನು ಕೆಲಸಕ್ಕಾಗಿ ಹೋಟೆಲ್​ ಬುಕ್​ ಮಾಡಿದರೆ, ಅಲ್ಲಿಯೂ ಭೇಟಿಗಳು ನಡೆಯುತ್ತಿರುತ್ತದೆ ಎಂದಿದ್ದಾಳೆ.

    ಅನಾಮಧೇಯ ಗಗನಸಖಿ ಕೇವಲ ಗ್ರಾಹಕರೊಂದಿಗೆ ತೊಡಗಿಸಿಕೊಂಡಿಲ್ಲ, ತನ್ನ ಸಹವರ್ತಿ ಸದಸ್ಯರೊಂದಿಗೆ ಉತ್ಸಾಹದ ಕ್ಷಣಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ. ಪೈಲಟ್​ರೊಂದಿಗೂ ಸಮಯ ಕಳೆದಿರುವುದಾಗಿ ತಿಳಿಸಿದ್ದಾಳೆ.

    ಜಾಲತಾಣದಲ್ಲಿ ಗಗನಸಖಿಯ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬ್ರಿಟಿಷ್​ ಏರ್​ವೇಸ್​,​ ನಮ್ಮ ಎಲ್ಲ ಸಹೋದ್ಯೋಗಿಗಳಿಂದ ಎಲ್ಲ ಸಮಯದಲ್ಲೂ ಉನ್ನತ ಮಟ್ಟದ ನಡವಳಿಕೆಯನ್ನು ನಾವು ನಿರೀಕ್ಷಿಸುತ್ತೇವೆ. ಹೀಗಾಗಿ ಇದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದಿದೆ. (ಏಜೆನ್ಸೀಸ್​)

    ಮದುವೆಗೆ ವಧು-ವರ ಹುಡುಕುವ ಮುನ್ನ ಎಚ್ಚರ! ನಿಮ್ಮ ಲೈಫ್​ಗೆ ಈ ಗ್ಯಾಂಗ್ ಎಂಟ್ರಿಕೊಟ್ರೆ ಮುಗಿದೇ ಹೋಯ್ತು…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts