More

    ಬ್ರಿಟನ್​ನಲ್ಲಿ ಮತ್ತೆ ಹೆಚ್ಚಿದ ಕರೊನಾ; ಲಸಿಕೆ ಪಡೆದಿದ್ದ ಆರೋಗ್ಯ ಸಚಿವರಿಗೂ ಸೋಂಕು ದೃಢ

    ಲಂಡನ್: ಕರೊನಾದ ಅಲೆ ಸ್ವಲ್ಪ ಮಟ್ಟಿಗೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಮತ್ತೆ ಕೆಲ ರಾಷ್ಟ್ರಗಳಲ್ಲಿ ಸೋಂಕಿನ ಆರ್ಭಟ ಹೆಚ್ಚಾಗಿದೆ. ಅದೇ ರೀತಿ ಬ್ರಿಟನ್​ನಲ್ಲೂ ಕರೊನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಕರೊನಾ ಲಸಿಕೆ ಪಡೆದಿದ್ದ ಆರೋಗ್ಯ ಸಚಿವರಿಗೂ ಸೋಂಕು ದೃಢವಾಗಿದೆ.

    ಬ್ರಿಟನ್​ನ ಆರೋಗ್ಯ ಸಚಿವರಾಗಿರುವ ಸಾಜಿದ್ ಜಾವಿದ್ ಅವರಿಗೆ ಕರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿರುವ ಅವರು, ನನಗೆ ರ್ಯಾಪಿಡ್ ಪರೀಕ್ಷೆಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಆರ್​ಟಿಪಿಸಿಆರ್ ವರದಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕರೊನಾದ ಲಸಿಕೆಯನ್ನು ಈಗಾಗಲೇ ಪಡೆದಿದ್ದರಿಂದಾಗಿ ರೋಗ ಲಕ್ಷಣ ಹೆಚ್ಚಿಲ್ಲ. ನೀವೂ ಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

    ಬ್ರಿಟನ್​ನಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುತ್ತಿದೆ. ಶುಕ್ರವಾರ ರಾಷ್ಟ್ರದಲ್ಲಿ 36 ಸಾವಿರಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ವಾರಕ್ಕೆ ಹೋಲಿಸಿದರೆ ಸೋಂಕಿನ ಪ್ರಮಾಣ ಶೇ. 17 ಏರಿಕೆ ಆಗಿದೆ ಎಂದು ತಿಳಿಸಲಾಗಿದೆ. ಅದರಲ್ಲೂ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. (ಏಜೆನ್ಸೀಸ್)

    ಕರೊನಾ ಗೆದ್ದವರಿಗೆ ಕ್ಷಯರೋಗದ ಆತಂಕ? ಎಲ್ಲರೂ ಟಿಬಿ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಇಲಾಖೆ

    ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ಕರೊನಾ ಸೋಂಕಿನಿಂದ ನಿಮಗಿದೆಯಂತೆ ಕೊಂಚ ರಿಯಾಯಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts