More

    ಮೋದಿ ಸರ್ಕಾರದ ರೈತಪರ ಯೋಜನೆ ಜನರಿಗೆ ತಲುಪಿಸಿ

    ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ, ರೈತಪರವಾದ ಯೋಜನೆಗಳನ್ನು ಗ್ರಾಮಾಂತರ ಪ್ರದೇಶದ ಜನರಿಗೆ ತಲುಪಿಸಬೇಕು. ಜತೆಗೆ ರಾಜ್ಯ ಸರ್ಕಾರ ರೈತರಿಗೆ ಮಾಡಿದ ಅನ್ಯಾಯವನ್ನು ಬಿಂಬಿಸುವುದು ರೈತ ಮೋರ್ಚಾ ಉದ್ದೇಶವಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಿಂಬೆಗೊAದಿ ಸಿದ್ಲಿಂಗಪ್ಪ ಹೇಳಿದರು.
    ಬರಗಾಲ, ಪ್ರಕೃತಿ ವ್ಯತ್ಯಯದಿಂದಾಗಿ ರಾಜ್ಯದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಕೃಷಿಗೆ ಸೌರ ವಿದ್ಯುತ್ ಬಳಸಲು ರೈತರ ಮೇಲೆ ಒತ್ತಡ ಹೇರುತ್ತಿದೆ. ಇದರಿಂದ ರೈತರಿಗೆ ಎರಡರಿಂದ ಎರಡೂವರೆ ಲಕ್ಷ ರೂ. ಖರ್ಚಾಗುತ್ತದೆ. ತಕ್ಷಣ ಈ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಯೋಜನೆಯನ್ನೇ ಜಾರಿಗೆ ತರಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಹಾಲಿನ ಒಕ್ಕೂಟಗಳು ಸರ್ಕಾರದ ಆದೇಶದಂತೆ ಹಾಲು ಉತ್ಪಾದಕರಿಗೆ ಕೇವಲ ಒಂದು ತಿಂಗಳಷ್ಟೇ ಮೂರು ರೂಪಾಯಿ ಪ್ರೋತ್ಸಾಹ ಧನ ನೀಡಿದವು. ನಂತರ ಅದನ್ನು ಕಿತ್ತುಕೊಂಡಿವೆ. ಇದರಿಂದ ಹಾಲು ಉತ್ಪಾದಕರಿಗೆ ಅನ್ಯಾಯವಾಗಿದೆ. ಈ ಬಗ್ಗೆ ರೈತ ಮೋರ್ಚಾದಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಇದೇ ರೀತಿ ಹಲವು ಸಮಸ್ಯೆಗಳಿದ್ದು ಇದನ್ನು ರೈತ ಮೋರ್ಚಾ ಜನಾಂದೋಲನವಾಗಿ ರೂಪಿಸಿ ಸರ್ಕಾರದ ಕಣ್ಣು ತೆರೆಸಲಿದೆ ಎಂದು ಎಚ್ಚರಿಕೆ ನೀಡಿದರು.
    ಫೆ.೧೨ರಂದು ದೇಶಾದ್ಯಂತ ಗ್ರಾಮ ಪರಿಕಲ್ಪನಾ ಯಾತ್ರೆ ಉದ್ಘಾಟನೆಯಾಗಲಿದ್ದು ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಿದ್ದಾರೆ. ಬಿದರಕೊಪ್ಪ ತಾಂಡಾದಲ್ಲಿ ಚಾಲನೆ ನೀಡಲಿದ್ದು ನಂತರ ದಿಂಡದಹಳ್ಳಿ ಮಾರವಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಸರ್ಕಾರ ರೈತ ವಿರೋಽ ನೀತಿಯನ್ನು ಜನರಿಗೆ ತಿಳಿಸಲಿದೆ ಎಂದರು.
    ಉಪಾಧ್ಯಕ್ಷೆ ಶಾರದಾ ರಂಗನಾಥ್, ಶಿವಕುಮಾರ್ ನಾಯಕ್, ಸತೀಶ್ ಗೌಡ, ಪ್ರಧಾನ ಕಾರ್ಯದರ್ಶಿ ಬಿಳಕಿ ಗಣೇಶ್, ಕುಮಾರ ನಾಯ್ಕ್, ಕಾರ್ಯದರ್ಶಿ ಹೊಸಳ್ಳಿ ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಕಾರ್ಯದರ್ಶಿ ಅಶೋಕ್ ಮಾರವಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts