More

    ಕುಲಪತಿ ಹುದ್ದೆಗೆ ಲಂಚ, ನಿವೃತ್ತ ನ್ಯಾಯಾಧೀಶರಿಂದ ತನಿಖೆ

    ಮಂಗಳೂರು: ಕುಲಪತಿ ಹುದ್ದೆಗಾಗಿ ಲಂಚ ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಗೆ ಒ್ಪಪಿಸುವುದು ಮತ್ತು ಲಂಚ ನೀಡಿದ ಉಪನ್ಯಾಸಕರನ್ನು 6 ತಿಂಗಳ ಕಾಲ ಅಮಾನತ್ತಿನಲ್ಲಿಡಲು ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆ ನಿರ್ಣಯಿಸಿದೆ. ಮಂಗಳೂರು ಅಥವಾ ರಾಯಚೂರು ವಿವಿಯ ಕುಲಪತಿ ಮಾಡುವುದಾಗಿ ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾ ವರ ಎಂಬಾತ 17.5 ಲಕ್ಷ ರೂ.ಪಡೆದು ವಂಚಿಸಿದ್ದಾಗಿ ಉಪನ್ಯಾಸಕ ಜೈಶಂಕರ್ ಕಂಕನಾಡಿ ಠಾಣೆಗೆ ದೂರು ನೀಡಿದ್ದರು.

    ಆರೋಪಿಯನ್ನು ಪ್ರಸಾದ್‌ನನ್ನು ಬಂಧಿಸಲಾಗಿತ್ತು. ಆದರೆ ಲಂಚ ಪಡೆದುದಷ್ಟೇ ಅಲ್ಲ, ಲಂಚ ನೀಡಿದ್ದು ಕೂಡ ತಪ್ಪೇ ಆಗಿದೆ. ಲಂಚ ಕೊಟ್ಟವರ ವಿರುದ್ಧ ಕ್ರಮ ಯಾಕಿಲ್ಲ ಎಂದು ಎಬಿವಿಪಿ ಸಂಘಟನೆ ಹಾಗೂ ಅನೇಕ ಚಿಂತಕರು ಪ್ರಶ್ನಿಸಿದ್ದರು. ಈ ಹಿನ್ನೆಲೆ ಶುಕ್ರವಾರ ವಿಶೇಷ ಸಿಂಡಿಕೇಟ್ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು ಎಂದು ತಿಳಿದುಬಂದಿದೆ. ಏ.10ರಂದು ವಿವಿ ಘಟಿಕೋತ್ಸವ ನಡೆಯಲಿದ್ದು ಮುಂದಿನ ವಾರವೇ ತನಿಖೆಯ ದಾರಿ ಸ್ಪಷ್ಟಗೊಳ್ಳುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts