More

    ದೇವಸ್ಥಾನಗಳಲ್ಲಿ ಸಾಮೂಹಿಕ ಬ್ರಹ್ಮಧ್ವಜ ಪೂಜೆ

    ಗದಗ: ಚೈತ್ರ ಶುಕ್ಲ ಪ್ರತಿಪದೆ ಅರ್ಥಾತ್ ಹಿಂದೂ ಹೊಸವರ್ಷದ ನಿಮಿತ್ತ ಗದಗ ಲಕ್ಷ್ಮೇಶ್ವರ ಶಿಗ್ಲಿ  ಪಟ್ಟಣದ ದೇವಸ್ಥಾನಗಳಲ್ಲಿ ಸಾಮೂಹಿಕ ಬ್ರಹ್ಮ ಧ್ವಜ ಪೂಜೆ, ನಾಮಜಪ ಮಾಡಲಾಯಿತು.ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು, ಅರ್ಚಕರು  ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಭಾರತವನ್ನು ‘ಸುರಾಜ್ಯ’ವನ್ನಾಗಿಸುವ ಸಾಮೂಹಿಕ ಪ್ರತಿಜ್ಞಾವಿಧಿ ತೆಗೆದುಕೊಂಡರು.

    ಈ ವೇಳೆ ಮಾತನಾಡಿದ ಸಂಯೋಜಕರಾದ  ಶ್ರೀ. ಶಿವರಾಂ ಇವರು ಹಿಂದೂ ಧರ್ಮದಲ್ಲಿ ಮೂರುವರೆ ಮಹೂರ್ತದಲ್ಲಿ ಶುಭ ಕರ್ಮಗಳನ್ನು ಮಾಡುವ ಸಂಕಲ್ಪ ಮಾಡಲಾಗುತ್ತದೆ. ಯುಗಾದಿಯು ಈ ಮೂರುವರೆ ಮಹೂರ್ತದಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ  ಪ್ರಭು ಶ್ರೀರಾಮ ವಿರಾಜಮಾನನಾದ ನಂತರ ದೇಶಕ್ಕೆ ಆಧ್ಯಾತ್ಮಿಕ ಊರ್ಜೆ ಲಭಿಸಿದಂತಾಗಿದೆ. ಈಗ ದೇಶವು ರಾಮರಾಜ್ಯವಾಗಬೇಕಿದೆ ಅರ್ಥಾತ್ ‘ಸ್ವರಾಜ್ಯದಿಂದ ಸುರಾಜ್ಯ’ವಾಗಬೇಕಿದೆ ! ಪ್ರಭು ಶ್ರೀರಾಮನು ಎಲ್ಲ ಜನರ ಕಲ್ಯಾಣವಾಗುವ ರಾಮರಾಜ್ಯದ ಸ್ಥಾಪನೆ ಮಾಡಿದ್ದರು. ಅದರಂತೆ ಆದರ್ಶ ರಾಜ್ಯದ ಸ್ಥಾಪನೆಗಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯ ತರಲು ನಿರಂತರ ಪ್ರಯತ್ನ ಮಾಡಬೇಕಾಗಿದೆ. ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡಿ, ನೈತಿಕ ಹಾಗೂ ಸದಾಚಾರಿ ಜೀವನ ನಡೆಸುವ ಸಂಕಲ್ಪ ಮಾಡಬೇಕಿದೆ. ಸಾಮಾಜಿಕ ಜೀವನದಲ್ಲಿ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯನ್ನು ವಿರೋಧಿಸಲು ಕೃತಿಶೀಲರಾಗಬೇಕಿದೆ. ಸಾತ್ತ್ವಿಕ ಸಮಾಜದ ನೇತೃತ್ವದಲ್ಲೇ ಅಧ್ಯಾತ್ಮದ ಆಧಾರಿತ ರಾ‌‌ಷ್ಟ್ರರಚನೆ, ಅರ್ಥಾತ್ ರಾಮರಾಜ್ಯ ಸಂಭವವಾಗಲಿದೆ; ಆದ್ದರಿಂದ ಈ ಯುಗಾದಿಯಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯ ತರಲು ಸಂಕಲ್ಪ ಮಾಡೋಣ ಎಂದರು.

    ಈ ವೇಳೆ ನೆರೆದಿದ್ದ ದೇವಸ್ಥಾನ ವಿಶ್ವಸ್ಥರು ಅರ್ಚಕರು, ಭಕ್ತರು ಇದಕ್ಕೆ ಸಹಕರಿಸಿ ಪ್ರತಿಜ್ಞೆ ಮಾಡಿದರು.

    ಈ ಅಭಿಯಾನದಲ್ಲಿ ಹಲವಾರು ಧರ್ಮಪ್ರೇಮಿಗಳು ತಮ್ಮ ತಮ್ಮ ಮನೆಯ ಮುಂದೆ, ಅಂಗಡಿಗಳ ಮುಂದೆ ಬ್ರಹ್ಮಧ್ವಜ ಸ್ಥಾಪಿಸಿ ರಾಮರಾಜ್ಯ ತರಲು ಸಂಕಲ್ಪ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts