More

    ಮಾತ್ಹೋಬಾರನಿಗೆ ಬ್ರಹ್ಮರಥ ಸಿದ್ಧ

    ಭಟ್ಕಳ: ನೂತನ ರಥ ನಿರ್ಮಾಣ ಮಾಡಬೇಕೆಂದುಕೊಂಡಿದ್ದ ಡಾ. ಆರ್.ಎನ್. ಶೆಟ್ಟಿ ಅವರ ಮಹದಾಸೆಯನ್ನು ಅವರ ಪುತ್ರ ಸುನೀಲ ಶೆಟ್ಟಿ ಮತ್ತು ಅವರ ಕುಟುಂಬದವರು ಸಾಕಾರಗೊಳಿಸಿದ್ದು, ಜ. 6ರಂದು ಉಡುಪಿ ಜಿಲ್ಲೆಯ ಕೋಟೇಶ್ವರದಿಂದ ಮುರ್ಡೆಶ್ವರಕ್ಕೆ ನೂತನ ಬ್ರಹ್ಮರಥ ಆಗಮಿಸಲಿದೆ.
    ಕೋಟೇಶ್ವರದಿಂದ ಆಗಮಿಸುವ ಬ್ರಹ್ಮರಥಕ್ಕೆ ಮುರ್ಡೆಶ್ವರದ ಮಹಾದ್ವಾರದ ಬಳಿ ವಿಶೇಷ ಪೂಜೆ ಸಲ್ಲಿಸಿ, ಪುರಪ್ರವೇಶ ನಡೆಯಲಿದೆ. ನಂತರ ಊರಿನ ನಾಗರಿಕರು, ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ನಡೆಯಲಿದೆ. ವಿವಿಧ ವೇಷಭೂಷಣ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಓಲಗ ಮಂಟಪದವರೆಗೆ ರಥ ಆಗಮಿಸಲಿದೆ.
    ಜ. 9ರಂದು ಬೆಳಗ್ಗೆ 8 ಗಂಟೆಗೆ ದೇವರ ಪ್ರಾರ್ಥನೆ, ಗಣಪತಿ ಹೋಮ, ಶತರುದ್ರ ಹೋಮ ನಂತರ ದೇವರಿಗೆ ವಿಶೇಷ ಪೂಜೆಯ ಬಳಿಕ 1 ಗಂಟೆಯಿಂದ ಊರಿನ ಸಮಸ್ತ ಭಕ್ತರಿಗೆ ಮಹಾಪ್ರಸಾದ ನಡೆಯಲಿದೆ. ಸಂಜೆ 5 ಗಂಟೆಗೆ ಹೊಸ ರಥದ ಬಳಿ ಸಂಸ್ಕಾರಪೂಜೆ, ಗಣಪತಿ ಪೂಜೆ, ಪೂರ್ವಕ ಶಿಲ್ಪಿ ಪೂಜೆ, ರಥದ ಪರಿಗೃಹ, ರಥಕ್ಕೆ ರಾಕ್ಷೋಘ್ನ ವಾಸ್ತು ಹೋಮಾದಿಗಳು, ರಥಕ್ಕೆ ಬಲಿಪೂಜೆ, ರಥದ ಶುದ್ಧಿ ಕ್ರಿಯೆಗಳು ನಡೆದು ರಥಾಂಗಗಳಲ್ಲಿ ದೇವತಾ ಆವ್ಹಾಹನೆ ನಡೆಯಲಿದೆ. . 15ರಂದು ರಥದ ಎದುರು ಗಣಹವನ, ರಥಾಂಗ ದೇವತಾ ಆಹ್ವಾನ ಹವನ, ರಥ ಪೂಜೆ ನಂತರ ಮಂಗಳವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತೆರಳಿ, ದೇವರಿಗೆ ಬ್ರಹ್ಮರಥ ಸಮರ್ಪಣೆಯಾಗಲಿದೆ. ಮುರ್ಡೆಶ್ವರಕ್ಕೆ ಹೊಸರಥ ಆಗಮಿಸಲಿದ್ದು, ಊರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts