More

    22ಕ್ಕೆ ಆಂಜನೇಯ ದೇವಾಲಯದ ಬ್ರಹ್ಮಕುಂಭಾಭಿಷೇಕ

    ತೀರ್ಥಹಳ್ಳಿ: ರಾಮಾಯಣ ಹಿನ್ನೆಲೆಯ ಪುರಾಣ ಪ್ರಸಿದ್ಧ ತಾಲೂಕಿನ ಮೃಗವಧೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಆಂಜನೇಯ ದೇವಾಲಯದ ಬ್ರಹ್ಮಕುಂಭಾಭಿಷೇಕ ಮುಂತಾದ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಗಳು ಜ. 22 ರಂದು ಜರುಗಲ್ಖಿಉ.
    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಶುಚಿ ಸಂದರ್ಭದಲ್ಲೇ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಶ್ರೀಗಳ ಪರಮಾನುಗ್ರಹದಿಂದ ಈ ಶಿಲಾಮಯ ದೇವಾಲಯದ ಲೋಕಾರ್ಪಣೆ, ಆಂಜನೇಯ ಸ್ವಾಮಿಯ ಜೀರ್ಣೋದ್ಧಾರ ಮರು ಅಷ್ಟಬಂಧ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ, ಶ್ರೀರಾಮನ ಭಕ್ತನ ಈ ದೇವಾಲಯ ಉದ್ಘಾಟನೆಗೊಳ್ಳುತ್ತಿರುವುದು ಯೋಗಾಯೋಗ ಎಂಬುದು ಭಕ್ತರ ಅನಿಸಿಕೆಯಾಗಿದೆ.
    ಜ. 21ರಿಂದ 24ರವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. 21ರಂದು ಗುರುಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ನಾಂದಿ, ಋತ್ವಿಗ್ವರಣೆ, ಬಿಂಬಶುದ್ದಿ ಕಲಶ ಸ್ಥಾಪನೆ ಹಾಗೂ ಬಿಂಬ ಶುದ್ಧಿಹೋಮ, 22ರಂದು ಬೆಳಗ್ಗೆ 10.30ಕ್ಕೆ ಆಂಜನೇಯ ಸ್ವಾಮಿಯ ಬಿಂಬ ಪ್ರತಿಷ್ಠೆ, ಪ್ರತಿಷ್ಠಾನ್ಯಾಸಾದಿಗಳು, ಜೀವ ಕುಂಭಾಭಿಷೇಕ ಪೂಜೆ ಹಾಗೂ ಅದೇ ದಿನ ಸಂಜೆ ತತ್ವಾವಾಸ ಹೋಮ ಮತ್ತು ತತ್ವ ಕಲಶಾಭಿಷೇಕ ಪೂಜೆ ನಡೆಯಲಿದೆ.
    ಜ.23ರಂದು ಮೂಲಮಂತ್ರ ಹೋಮ, ಶಾಂತಿ ಹೋಮ, 108 ಬ್ರಹ್ಮಕುಂಭ ಪ್ರತಿಷ್ಠಾಪನೆ, ಮಹಾಪೂಜೆ ಮುಂತಾದ ಎಲ್ಲ ಧಾರ್ಮಿಕ ಕಾರ್ಯಗಳು ಕಮ್ಮರಡಿ ವೇ.ಬ್ರ.ಲಕ್ಷ್ಮೀನಾರಾಯಣ ಸೋಮಯಾಜಿಗಳ ನೇತೃತ್ವದಲ್ಲಿ ನಡೆಯಲಿದೆ. ವಿವರಗಳಿಗೆ ದೇವಾಲಯದ ದೂರವಾಣಿ: 08181 234577 ಸಂಪರ್ಕಿಸಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts