More

    ಬಿಪಿಎಲ್​ 1.50 ಲಕ್ಷ ರೂ. ಪರಿಹಾರ: ಕೋವಿಡ್​ನಿಂದ ಮೃತರಾದ ಎಲ್ಲರಿಗೂ 50 ಸಾವಿರ ರೂ.ನೀಡಲು ಕ್ರಮ

    ಬೆಂಗಳೂರು: ಕರೊನಾದಿಂದ ಮೃತಪಟ್ಟವರ ಸಂಖ್ಯೆ ಹಾಗೂ ಪರಿಹಾರ ನಿಗದಿ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಪರಿಷತ ಆದೇಶವನ್ನು ಮಂಗಳವಾರ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ತಿಳಿಸಿದರು. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾದಿಂದ ಮೃತಪಟ್ಟ ಎಲ್ಲರಿಗೂ ಕೇಂದ್ರದ ಎಸ್​ಡಿಆರ್​ಎ್​ ನಿಧಿಯಡಿ ತಲಾ 50,000 ರೂ. ಪರಿಹಾರ ದೊರೆಯಲಿದೆ. ಜತೆಗೆ ರಾಜ್ಯ ಸರ್ಕಾರದಿಂದ ಈಗಾಗಲೆ ಪ್ರಕಟಿಸಿದಂತೆ ಬಿಪಿಎಲ್​ ಕುಟುಂಬದ ಒಬ್ಬರಿಗೆ ಒಂದು ಲಕ್ಷ ರೂ. ನೀಡಲಾಗುವುದು. ಇದರಿಂದಾಗಿ ಬಿಪಿಎಲ್​ ಕುಟುಂಬದ ಒಬ್ಬರು ಮೃತಪಟ್ಟಿದ್ದರೆ 1.50 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದು ವಿವರಿಸಿದರು. ಕೇಂದ್ರದ ನೆರವು ಎಸ್​ಡಿಆರ್​ಎ್​ ಅಡಿ ವಿತರಿಸಿದರೆ, ರಾಜ್ಯ ಸಹಾಯಧನವನ್ನು ಸಾಮಾಜಿಕ ಭದ್ರತಾ ಯೋಜನೆ ಯಡಿ ನೀಡಲಾಗುವುದು. ಈ ಸಂಬಂಧ ಸ್ಪಷ್ಟ ಆದೇಶ ಹೊರಡಿಸಿದ್ದು, ಆಯಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

    ಅರ್ಜಿ ಜತೆಗೆ ಏನೆಲ್ಲ ಇರಬೇಕು: ಕರೊನಾ ಪಾಸಿಟಿವ್​ ವರದಿ, ರೋಗಿಯ ಪಿ.ನಂಬರ್​, ಮರಣ ಪ್ರಮಾಣಪತ್ರ, ಆಧಾರ್​ ಕಾರ್ಡ್​ ಪ್ರತಿ, ಅಜಿರ್ದಾರರ ಬ್ಯಾಂಕ್​ ಖಾತೆ ನಂಬರ್​ ಜತೆಗೆ ಆಯಾ ತಹಸೀಲ್ದಾರ್​ ಅಥವಾ ಜಿಲ್ಲಾಧಿಕಾರಿಗೆ ಅರ್ಜಿಸಲ್ಲಿಸಬಹುದಾಗಿದೆ. ಸ್ವತಃ ಪರಿಹಾರ ಕೋರುವ ಅಜಿರ್ದಾರರು ಸ್ವಯಂ ಘೋಷಣಾ ಾರಂ ನಂಬರ್​&2, ಕುಟುಂಬದ ಉಳಿದವರಿಗೆ ಾರಂ ನಂಬರ್​&3 ಅರ್ಜಿಸಲ್ಲಿಸಬಹುದಾಗಿದ್ದು, ಕೇಂದ್ರ ಸರ್ಕಾರದ ನೆರವು ಆರ್​ಟಿಜಿಎಸ್​ ಮೂಲಕ ನೇರ ಬ್ಯಾಂಕ್​ ಖಾತೆಗೆ ಜಮೆಯಾಗಲಿದೆ ಎಂಬ ಮಾಹಿತಿ ನೀಡಿದರು.

    ಐದು ಲಕ್ಷ ರೂ. ನೀಡಲು ಸಿದ್ದು ಆಗ್ರಹ
    ಷರತ್ತು ರಹಿತವಾಗಿ ಪ್ರಕೃತಿ ವಿಕೋಪ ನಿಯಮಗಳಡಿ ನೀಡುವ ಪರಿಹಾರದಂತೆಯೆ, ಕೋವಿಡ್​ನಿಂದ ಮೃತಪಟ್ಟ ಎಲ್ಲರ ವಾರಸು ದಾರರಿಗೂ 5 ಲ ರೂ.ನೀಡಬೇಕೆಂದು ಪ್ರತಿಪ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ವಿಕೋಪಗಳಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು ಎಂಬ ಪ್ರಕೃತಿ ವಿಕೋಪ ನಿಯಮಗಳನ್ನು ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ. ರಾಜ್ಯದಲ್ಲಿ ಕೋವಿಡ್​&19 ನ ಎರಡೂ ಅಲೆಗಳಿಂದ ಕನಿಷ್ಠವೆಂದರೂ 4 ಲ ಜನ ಮರಣ ಹೊಂದಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳಲು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು ನೊಂದ ಜನರಿಗೆ ದ್ರೋಹವೆಸಗುತ್ತಿವೆ ಎಂದು ಟೀಕಿಸಿದರು.

    ಆರೋಪವಷ್ಟೇ
    ಕರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿರುವುದು ಆರೋಪವಷ್ಟೇ. ಯಾವುದೇ ಅಂಕಿ&ಸಂಖ್ಯೆಯನ್ನು ಮುಚ್ಚಿಡಲಾಗದು, ಎಲ್ಲವೂ ದಾಖಲೀಕರಣವಾಗಿರುತ್ತದೆ. ಸತ್ತವರ ಅಧಿಕೃತ ಮಾಹಿತಿ, ವೈದ್ಯರ ಪ್ರಮಾಣಪತ್ರ, ತಹಸೀಲ್ದಾರ್​ ಮತ್ತು ಕಂದಾಯ ಇಲಾಖೆಯ ವರದಿ, ಪ್ರತಿಯೊಬ್ಬ ರೋಗಿಗೆ ಆಸ್ಪತ್ರೆಯಿಂದ ಪಿ ನಂಬರ್​ ನೀಡಿರುತ್ತಾರೆ. ಬೋಗಸ್​ ಆಗುವುದಕ್ಕೆ ಅವಕಾಶವಿಲ್ಲ, ಆರೋಪ ಮಾಡುವುದು ಕಾಂಗ್ರೆಸ್​ಗೆ ಚಟವಾಗಿದೆ ಎಂದು ಆರ್​.ಅಶೋಕ್​ ಕುಟುಕಿದರು.
    ಸಮಿತಿ ರಚನೆ

    ಅರ್ಜಿಗಳ ತ್ವರಿತ ವಿಲೇವಾರಿ, ನೈಜ ಸಂತ್ರಸ್ತರಿಗೆ ಪರಿಹಾರ ತಲುಪಲೆಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ವೈದ್ಯಾಧಿಕಾರಿ ಸದಸ್ಯ ಕಾರ್ಯದಶಿರ್ಯಾಗಿರುತ್ತಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯ ಜಂಟಿ ಆಯುಕ್ತರು ಇರಲಿದ್ದಾರೆ. ಸಲ್ಲಿಕೆಯಾದ ಅಜಿರ್ಗಳ ಪರಿಶೀಲನೆ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ಒಪ್ಪಿಸಲಾಗಿದೆ.
    ಮತಾಂತರ ನಿಷೇಧಕ್ಕೆ ಕಾಯ್ದೆ ಅಗತ್ಯ: ರಾಜ್ಯದಲ್ಲಿ ಬಲವಂತದ ಮತದಾನ ನಿಷೇಧಕ್ಕೆ ಸೂಕ್ತ ಕಾಯ್ದೆ ಅಗತ್ಯವಿದ್ದು,ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆಗೆ ಚಚಿರ್ಸಲಾಗುವುದು ಎಂದು ಆರ್​.ಅಶೋಕ್​ ಹೇಳಿದರು.

    ಶಾಲಾ ಮಕ್ಕಳಲ್ಲಿ ಶೇ. 0.1 ಸೋಂಕು ಪತ್ತೆ
    ಬೆಂಗಳೂರು: ರಾಜ್ಯದಲ್ಲಿ ಸಂಭಾವ್ಯ ಕೋವಿಡ್​ ಮೂರನೇ ಅಲೆ ಆತಂಕದ ನಡುವೆಯು 6 ರಿಂದ 12ನೇ ತರಗತಿವರೆಗೂ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಈ ಮಕ್ಕಳಲ್ಲಿ ಶೇ. 0.1 ಕೋವಿಡ್​ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಶಾಲೆ ನಡೆಸುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮಾಸ್ಕ್​, ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ಸ್ವಚ್ಛತೆಗೆ ಮುಂದೆಯೂ ಹೆಚ್ಚು ಆದ್ಯತೆ ನೀಡುವ ಅಗತ್ಯವಿದೆ ಎಂದು ರಾಜ್ಯ ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಎಚ್ಚರಿಸಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸುವ ಅಗತ್ಯವಿದೆ. ಆದರೆ 1&6 ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ನಡೆಸಬೇಕೆ ಬೇಡವೆ? ಎಂಬ ಬಗ್ಗೆ ದಸರಾ ನಂತರದ ಕೋವಿಡ್​ ವರದಿಯನ್ನು ಆಧರಿಸಿ ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್​ ತಿಳಿಸಿದ್ದಾರೆ.

    539 ಮಂದಿಗೆ ಸೋಂಕು ದೃಢ

    ರಾಜ್ಯದಲ್ಲಿ ಒಂದೆಡೆ ಕೋವಿಡ್​ ಸೋಂಕು ಪ್ರಮಾಣ ಇಳಿಕೆಯಾಗುತ್ತಿದ್ದರೆ ಮತ್ತೊಂದೆಡೆ ಮರಣ ಪ್ರಮಾಣ ದರ ಏರಿಕೆಯಲ್ಲಿಯೇ ಇದೆ. ಬುಧವಾರ 539 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಲಿಸದೆ 17 ಮಂದಿ ಮೃತಪಟ್ಟಿದ್ದಾರೆ. 24 ಗಂಟೆಗಳಲ್ಲಿ ಸೋಂಕಿತರಲ್ಲಿ 591 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.24 ಲಕ್ಷ ಮೀರಿದೆ. ಈವರೆಗೂ 29.75 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದು, 37,780 ಮಂದಿ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ. ಬುಧವಾರ ಒಂದೇ ದಿನ ರಾಜ್ಯಾದ್ಯಂತ 10.26 ಲ ಲಸಿಕೆ ವಿತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts