More

    ರಸ್ತೆ ದುರಸ್ತಿಗಾಗಿ ಮತದಾನ ಬಹಿಷ್ಕಾರ

    ಎನ್.ಆರ್.ಪುರ: ಕಡಹಿನಬೈಲು ಗ್ರಾಪಂ ಹಿರೇಬಿಸು-ಕರುಗುಂದ ಗ್ರಾಮದ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ಮುಖ್ಯ ರಸ್ತೆಯಿಂದ 1.30 ಕಿ.ಮೀ. ದೂರವಿರುವ ರಸ್ತೆ ದುರಸ್ತಿ ಮಾಡಿಲ್ಲ. ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದೆ. ಕೆಲವು ವರ್ಷಗಳ ಹಿಂದೆ ತಾಪಂನಿಂದ ಮಣ್ಣು ಹಾಕಿ ಗುಂಡಿ ಮುಚ್ಚಲಾಗಿತ್ತು. ನಂತರ ದುರಸ್ತಿಪಡಿಸಿಲ್ಲ. ರಸ್ತೆಯಲ್ಲಿ ಆಟೋದವರೂ ಬರಲು ಒಪ್ಪುತ್ತಿಲ್ಲ. 15-20 ಮನೆಗಳಿವೆ. ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಹೋಗಬೇಕಾಗಿದೆ. ರಸ್ತೆ ದುರಸ್ತಿ ಮಾಡದೆ ಇದ್ದರೆ ಮತದಾನ ಮಾಡುವುದಿಲ್ಲ ಎಂದು ಶುಕ್ರವಾರ ಬೆಳಗ್ಗೆ ಮತದಾನದ ಬಹಿಷ್ಕಾರದ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ತಹಸೀಲ್ದಾರ್, ತಾಪಂ ಇಒ ಅವರಿಗೆ ಮತದಾನ ಬಹಿಷ್ಕಾರದ ದೂರು ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗೂ ಅಂಚೆ ಮೂಲಕ ಕಳುಹಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
    ಮಧ್ಯಾಹ್ನ ತಹಸೀಲ್ದಾರ್ ರಮೇಶ್, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಕಂದಾಯ ಅಧಿಕಾರಿ ಮಂಜುನಾಥ್, ಪಿಡಿ ವಿಂಧ್ಯಾ ಗ್ರಾಮಕ್ಕೆ ಭೇಟಿ ನೀಡಿ ಮತದಾರರ ಸಮಸ್ಯೆ ಆಲಿಸಿದರು.
    ಮತದಾನ ಬಹಿಷ್ಕಾರ ಮಾಡಬೇಡಿ. ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ತಿಳಿಸುತ್ತೇವೆ. ಜಿಲ್ಲಾಧಿಕಾರಿಗೆ, ಚುನಾವಣಾ ಆಯುಕ್ತರಿಗೆ ಪತ್ರ ಬರೆಯುತ್ತೇವೆ. ಮತದಾನ ಮಾಡಲು ಮನ ಒಲಿಸಿದ್ದೇವೆ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts