More

    ಅಂಚೆ ಇಲಾಖೆಯ ಸೇವೆಗಳುನ್ನು ಬಳಸಿ

    ಕಂಪ್ಲಿ: ಅಂಚೆ ಇಲಾಖೆಯ ಸೇವೆಗಳು ಸುಧಾರಿತಗೊಂಡಿದ್ದು ಗ್ರಾಹಕರು ಅರಿತು ಸದುಪಯೋಗಿಸಿ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್.ಚಿತ್ತಕೋಟಿ ಹೇಳಿದರು.

    ಇದನ್ನೂ ಓದಿ: ಗ್ರಾಮೀಣ ಅಂಚೆ ನೌಕರರ ಧರಣಿ ಆರಂಭ

    ಪಟ್ಟಣದ ಅಂಚೆಕಚೇರಿಯಲ್ಲಿ ನಡೆದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಸೋಮವಾರ ಮಾತನಾಡಿದರು. ಅಂಚೆ ಯೋಜನೆಗಳ ಕುರಿತು ನಾಗರೀಕರು, ಗ್ರಾಹಕರು ಮತ್ತು ಅಂಚೆ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ‘ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೆಟ್ ಯೋಜನೆ’ ಮಹಿಳೆಯರಿಗೆ ವರದಾನವಾಗಿದೆ.

    ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಹಕರು ಸಾಮೂಹಿಕ ಅಪಘಾತ ವಿಮೆ ಯೋಜನಡಿ ವಾರ್ಷಿಕ 396ರೂಪಾಯಿಗಳನ್ನು ಪಾವತಿಸಿ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು.

    ಪಿಎಂಜೆಜೆಬಿವೈ ಹಾಗೂ ಪಿಎಂಎಸ್‌ಬಿವೈ ನಾನಾ ಯೋಜನೆಗಳಿದ್ದು ಬಳಸಿಕೊಳ್ಳಬೇಕಿದೆ. ಖಾತೆಗಳಿಗೆ ಸರ್ಕಾರದ ನಾನಾ ಯೋಜನೆಗಳ ಸೌಲಭ್ಯಗಳು ಡಿಬಿಟಿ ಮೂಲಕ ತ್ವರಿತವಾಗಿ ಜಮೆಯಾಗುತ್ತಿದೆ. ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ನಾಗರೀಕರು ಜಾಗೃತಿ ತೋರಬೇಕು ಎಂದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಅನ್ನಪೂರ್ಣ ಗುಡದೂರ, ಶಿರಗುಪ್ಪ ವಿಭಾಗದ ಅಂಚೆ ನಿರೀಕ್ಷಕ ಗೋಪಿ ಸಾಗರ್, ಕಂಪ್ಲಿ ಅಂಚೆ ಪಾಲಕ ವಿ.ಹುಲುಗಪ್ಪ, ಉಪಅಂಚೆ ಕಚೇರಿ ಅಂಚೆ ಪಾಲಕಿ ಕಲಾವತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts