More

    ಗ್ರಾಮೀಣ ಅಂಚೆ ನೌಕರರ ಧರಣಿ ಆರಂಭ

    ಅಥಣಿ: ಅಖಿಲ ಭಾರತ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಚಿಕ್ಕೋಡಿ ವಿಭಾಗದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರದಿಂದ ಆರಂಭಿಸಲಾಗಿದೆ.

    ಸಂಘದ ಕಾರ್ಯದರ್ಶಿ ಎಸ್.ಎಂ.ಮಂಟೂರ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸಿ ದಿನದ 8 ಗಂಟೆಗೆ ಕೆಲಸ ನೀಡುವ ಜತೆಗೆ ನಿವೃತ್ತಿ ಬಳಿಕ ಪಿಂಚಣಿ ಸೇವೆ ಒದಗಿಸಬೇಕು. ಕಮಲೇಶಚಂದ್ರ ಸಮಿತಿ ವರದಿಯಂತೆ ವೇತನ ಪರಿಷ್ಕರಣೆ, ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ, 5 ಲಕ್ಷ ರೂ. ವರೆಗೆ ಗ್ರೂಪ್ ಇನ್ಶೂರೆನ್ಸ್ ಕವರೇಜ್, 280 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ, ಅಂಚೆ ನೌಕರರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಸೇರಿ ಇತರ ಬೇಡಿಕೆ ಈಡೇರಿಸುವಂತೆ ದೇಶಾದ್ಯಂತ ಮುಷ್ಕರ ನಡೆಸಲಾಗುತ್ತಿದ್ದು, ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸುವರೆಗೂ ಮುಷ್ಕರ ಮುಂದುವರಿಸಲಾಗುವುದು ಎಂದರು.

    ನಿವೃತ್ತ ಅಂಚೆ ಅಧಿಕಾರಿಗಳಾದ ಕೆ.ಜಿ.ಹಿರೇಮಠ ಮತ್ತು ಸಂಗನಗೌಡ ಪಾಟೀಲ ಮಾತನಾಡಿ, ಮಳೆ, ಗಾಳಿ, ಚಳಿ ಎನ್ನದೆ ಹಗಲಿರುಳು ಶ್ರಮಿಸುತ್ತಿರುವ ಗ್ರಾಮೀಣ ಅಂಚೆ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದರು.

    ಗ್ರಾಮೀಣ ಅಂಚೆ ನೌಕರರಾದ ಪರಗೊಂಡ ಮಗದುಮ್ಮ, ಪ್ರಕಾಶ ಪೂಜಾರಿ, ಗಿರೀಶ ಕುಲಕರ್ಣಿ, ಶ್ರೀಶೈಲ ಬುಸಾನಿ, ಲಕ್ಷ್ಮೀ ಗಾಯಕವಾಡ, ಮಂಗಲ ಪಾಟೀಲ, ಮಹೇಶ ಕುಲಕರ್ಣಿ, ಸುವರ್ಣಾ ಹೂರಣಗಿ, ಬಿ.ವಿ.ಸಿಂಧೆ, ಆರ್.ವಿ.ಕಮಲಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts