More

    ಆನ್​ಲೈನ್​ ಕ್ಲಾಸ್​​ಗಾಗಿ ಮೊಬೈಲ್​ಫೋನ್​ ಕದ್ದು ಸಿಕ್ಕಿಬಿದ್ದ ಬಾಲಕ, ಆಮೇಲೆ ಪೊಲೀಸರು ಮಾಡಿದ್ದೇನು?

    ಚೆನ್ನೈ: ಆನ್​ಲೈನ್​ ಕ್ಲಾಸ್​ ಅಟೆಂಡ್​ ಆಗಲು ಸ್ಮಾರ್ಟ್​ಫೋನ್​ ಇಲ್ಲದ ಬಾಲಕ ಮೊಬೈಲ್​ ಫೋನ್​ ಕಳವು ಮಾಡಿದ್ದಷ್ಟೇ ಅಲ್ಲ, ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದಾನೆ. ಆದರೆ ಆಮೇಲಾಗಿದ್ದೇ ಬೇರೆ…

    ಹದಿಮೂರು ವರ್ಷದ ಶಾಲಾ ವಿದ್ಯಾರ್ಥಿಗೆ ಆನ್​ಲೈನ್​ ಕ್ಲಾಸ್​ ಅಟೆಂಡ್​ ಆಗಲೇಬೇಕಿತ್ತು. ಆದರೆ ಬಡವರಾಗಿರುವ ಪಾಲಕರು ಆತನಿಗೆ ಮೊಬೈಲ್​ಫೋನ್​ ಕೊಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆತ ಸ್ಮಾರ್ಟ್​ಫೋನ್​ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಚೆನ್ನೈನ ಕಾರ್ಪೋರೇಷನ್​ ಶಾಲೆಯೊಂದರ ಈ ವಿದ್ಯಾರ್ಥಿ, ಇನ್ನಿಬ್ಬರು ಗೆಳೆಯರ ಜತೆ ಸೇರಿ ತಿರುವಟ್ಟಿಯೂರ್ ಎಂಬಲ್ಲಿ ಟ್ರಕ್​ ಚಾಲಕನೊಬ್ಬನ ಸ್ಮಾರ್ಟ್​ಫೋನ್​ ಎಗರಿಸಿ ಪರಾರಿಯಾಗಿದ್ದ. ಬಳಿಕ ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದರು.

    ಮೂವರನ್ನೂ ಬಂಧಿಸಿದ್ದ ಪೊಲೀಸ್​ ಇನ್​ಸ್ಪೆಕ್ಟರ್ ಭುವನೇಶ್ವರಿ ಅವರಿಗೆ ಈತನ ಪರಿಸ್ಥಿತಿ ಅರ್ಥವಾಗಿದೆ. ಮೊಬೈಲ್​ ಫೋನ್​ ಇಲ್ಲದಿದ್ದರೆ ಶಿಕ್ಷಣ ಮುಂದುವರಿಕೆ ಕಷ್ಟವಾದ್ದರಿಂದ ವಿದ್ಯಾರ್ಥಿ ಈ ಕೃತ್ಯವೆಸಗಿದ್ದಾನೆ ಎಂಬುದನ್ನು ತಿಳಿದ ಇನ್​​ಸ್ಪೆಕ್ಟರ್, ತನ್ನ ಪುತ್ರಿಗೆ ಸ್ಮಾರ್ಟ್​ಫೋನ್​ ಕೊಡಿಸಲು ಎತ್ತಿಟ್ಟುಕೊಂಡಿದ್ದ ಹಣದಲ್ಲೇ ಈ ಬಾಲಕನಿಗೆ ಹೊಸ ಮೊಬೈಲ್​ಫೋನ್​ ಕೊಡಿಸಿದ್ದಾರೆ. ಅಲ್ಲದೆ ಈತನ ವಿರುದ್ಧ ಕ್ರಮಕೈಗೊಂಡರೆ ಇವನ ಭವಿಷ್ಯಕ್ಕೇ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಮುಂದೆ ಹಾಗೆ ಮಾಡದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts