More

    ಬಾಕ್ಸರ್​ ಸುನಿಲ್​, ಆರ್ಚರ್ ನೀರಜ್​ಗೆ ಕ್ರೀಡಾ ಸಚಿವಾಲಯ ನೆರವು; ತಲಾ 5 ಲಕ್ಷ ರೂ. ಮಂಜೂರು

    ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕ್ರೀಡಾ ಸಹೋದರರ ಕುಟುಂಬಕ್ಕೆ ಕ್ರೀಡಾ ಸಚಿವಾಲಯ ಸಹಾಯಕ್ಕೆ ಮುಂದಾಗಿದ್ದು, ತಲಾ 5 ಲಕ್ಷ ರೂ. ಮಂಜೂರು ಮಾಡಿದೆ.

    ಉತ್ತರ ಪ್ರದೇಶದಲ್ಲಿ ನೆಲೆಸಿರುವ ಬಾಕ್ಸರ್ ಸುನಿಲ್​ ಚೌಹಾಣ್​ ಹಾಗೂ ಆತನ ಸಹೋದರ ಆರ್ಚರ್​ ನೀರಜ್​ ಚೌಹಾಣ್​ ಅವರ ತಂದೆ ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬಕ್ಕೆ ಜೀವಾನಾಧಾರ ಆಗಿರುವ ಅವರು ಇದರಿಂದಾಗಿ ಜೀವನನಿರ್ವಹಣೆಗೆ ತರಕಾರಿ ಮಾರಾಟ ಮಾಡಬೇಕಾಗಿದೆ.

    ಈ ವಿಷಯ ತಿಳಿದ ಕ್ರೀಡಾ ಸಚಿವ ಕಿರಣ್​ ರಿಜಿಜು ಇಬ್ಬರೂ ಸಹೋದರರಿಗೂ ತಲಾ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಪಂಡಿತ್ ದೀನದಯಾಳ್​ ಉಪಾಧ್ಯಾಯ ನ್ಯಾಷನಲ್​ ವೆಲ್​ಫೇರ್​ ಫಂಡ್ ಫಾರ್​ ಸ್ಪೋರ್ಟ್ಸ್​ ಪರ್ಸನ್ಸ್​ನಡಿ ಈ ಆರ್ಥಿಕ ನೆರವು ನೀಡಲಾಗುತ್ತಿದೆ.

    ನೀರಜ್​ 50 ಮೀ. ಸೀನಿಯರ್ ಆರ್ಚರಿ ಚಾಂಪಿಯನ್​ಷಿಪ್​-2018 ಬೆಳ್ಳಿ ಪದಕ, 65ನೇ ನ್ಯಾಷನಲ್​ ಸ್ಕೂಲ್​ ಗೇಮ್ಸ್​ 2020ರಲ್ಲಿ ಪದಕ ಗಳಿಸಿದ್ದು, ಸುನಿಲ್​ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್​ 2020ರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಆರ್ಥಿಕ ನೆರವು ಮಂಜೂರು ಹಿನ್ನೆಲೆಯಲ್ಲಿ ಸಚಿವರಿಗೆ ಇಬ್ಬರೂ ಧನ್ಯವಾದ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts