More

    ಮಹಾರಾಷ್ಟ್ರ ಸಚಿವರಿಗೆ ಕರ್ನಾಟಕಕ್ಕೆ ಬರಲು ಬಿಡಬೇಡಿ; ಬೆಳಗಾವಿ ಪೊಲೀಸ್ ಕಮಿಷನರ್​​ಗೆ ಮನವಿ..

    ಬೆಳಗಾವಿ: ರಾಜ್ಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಉಲ್ಬಣಿಸಿದ್ದು, ಇದೀಗ ಅದರ ಬಿಸಿ ಮಹಾರಾಷ್ಟ್ರ ಸಚಿವರಿಗೂ ತಟ್ಟುವಂತಾಗಿದೆ. ಅಂದರೆ ಕರ್ನಾಟಕಕ್ಕೆ ಬರಲಿರುವ ಮಹಾರಾಷ್ಟ್ರ ಸಚಿವರಿಗೆ ಇಲ್ಲಿಗೆ ಆಗಮಿಸಲು ಬಿಡಬಾರದು ಎಂದು ಬೆಳಗಾವಿ ಪೊಲೀಸ್​ ಕಮಿಷನರ್​ಗೆ ಮನವಿ ಮಾಡಿಕೊಳ್ಳಲಾಗಿದೆ.

    ಬೆಳಗಾವಿಗೆ ಬಂದು ಗಡಿಭಾಗದ ಜನರ ಸಮಸ್ಯೆ ಆಲಿಸುವಂತೆ ಎಂಇಎಸ್ ಮುಖಂಡರು ಮಹಾರಾಷ್ಟ್ರ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ಎಂಇಎಸ್ ಮುಖಂಡರ ಆಹ್ವಾನದ ‌ಮೇರೆಗೆ ಡಿ. 3ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಲಿದ್ದು, ಈ ಬಗ್ಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿದೆ.

    ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಬೆಳಗಾವಿಯ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ದ ಎತ್ತಿಕಟ್ಟಿ, ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು, ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಬೆಳಗಾವಿ ಪ್ರವೇಶ ಮಾಡದಂತೆ ಕಡಿವಾಣ ಹಾಕಬೇಕು ಎಂಬುದಾಗಿ ಕರವೇ ಜಿಲ್ಲಾಧ್ಯಕ್ಷ ದೀಪಕ್​ ಗುಡಗನಟ್ಟಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

    ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ಅವರು ಡಿ.3ರಂದು ಬೆಳಗಾವಿಯಲ್ಲಿ ಸಭೆ ನಡೆಸುವದಾಗಿ ಟ್ವೀಟ್ ಮಾಡಿದ್ದಾರೆ. ಅವರ ಬರದಂತೆ ಕಡಿವಾಣ ಹಾಕದಿದ್ದರೆ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಗಣಿಸದಿದ್ದರೆ ಕರವೇ ಕಾರ್ಯಕರ್ತರು ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಯಲ್ಲಿ ನಡೆಸುವ ಸಭೆಗೆ ನುಗ್ಗುತ್ತೇವೆ ಎಂದು ದೀಪಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿಗೆ ಬರುವಂತೆ ಪತ್ರ ಬರೆದಿರುವ ಎಂಇಎಸ್ ನಾಯಕರನ್ನು ಕೂಡಲೇ ಬಂಧಿಸಬೇಕು ಎಂಬುದಾಗಿಯೂ ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರ ಸಚಿವರಿಗೆ ಕರ್ನಾಟಕಕ್ಕೆ ಬರಲು ಬಿಡಬೇಡಿ; ಬೆಳಗಾವಿ ಪೊಲೀಸ್ ಕಮಿಷನರ್​​ಗೆ ಮನವಿ..

    ನಿನ್ನೆ ಒಂದೇ ದಿನ 108, ಇಂದು ಮತ್ತೆ 30 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ಎಲ್ಲಿಗೆ ಯಾರು? ಇಲ್ಲಿದೆ ಪೂರ್ತಿ ಪಟ್ಟಿ…

    ಸಂಭ್ರಮದ ಸಾವು: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts