More

    ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಪಟ್ಟಕ್ಕೇರಿದ ಕನ್ನಡಿಗ ಬೋಪಣ್ಣ: ಕ್ರಿಕೆಟ್ ದೇವರ ಶ್ಲಾಘನೆ

    ಮೆಲ್ಬೋರ್ನ್: ಭಾರತದ ಅಗ್ರ ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಎಟಿಪಿ ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ. ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಆತಿಥೇಯ ಆಟಗಾರ ಮ್ಯಾಥ್ಯೂ ಎಬ್ಡೆನ್ ಜತೆಯಾಗಿ ಸೆಮಿೈನಲ್‌ಗೇರುವ ಮೂಲಕ ಬೋಪಣ್ಣ ಈ ಸಾಧನೆ ಮಾಡಿದ್ದಾರೆ. 7,170 ಪಾಯಿಂಟ್ಸ್ ಕಲೆಹಾಕಿರುವ 43 ವರ್ಷದ ಬೋಪಣ್ಣ ಎಟಿಪಿ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅತಿ ಹಿರಿಯ ಆಟಗಾರ ಎನಿಸಿದ್ದಾರೆ. ಸೋಮವಾರ ಬಿಡುಗಡೆಯಾಗಲಿರುವ ಪರಿಷ್ಕೃತ ರ‌್ಯಾಂಕಿಂಗ್‌ನಲ್ಲಿ ಬೋಪಣ್ಣ ಅಗ್ರಸ್ಥಾನ ಅಧಿಕೃತಗೊಳ್ಳಲಿದೆ. ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಎರಡನೇ ಸ್ಥಾನಕ್ಕೆ ಏರಲಿದ್ದಾರೆ.

    ಮೆಲ್ಬೋರ್ನ್ ಪಾರ್ಕ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್‌ೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಬೋಪಣ್ಣ-ಎಬ್ಡೆನ್ ಜೋಡಿ 6-4,7-6 (5) ನೇರ ಸೆಟ್‌ಗಳಿಂದ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ಅವರನ್ನು 1 ಗಂಟೆ 46 ನಿಮಿಷಗಳ ಹೋರಾಟದಲ್ಲಿ ಪರಾಭವಗೊಳಿಸಿದರು. ಉಪಾಂತ್ಯದಲ್ಲಿ ಶ್ರೇಯಾಂಕ ರಹಿತ ತೋಮಸ್ ಮಚಾಕ್ ಮತ್ತು ಝಿಜೆನ್ ಝಾಂಗ್ ಜೋಡಿ ಸವಾಲು ಎದುರಿಸಲಿದ್ದಾರೆ.
    ಸತತ 17ನೇ ಬಾರಿ ಆಸ್ಟ್ರೇಲಿಯನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಬೋಪಣ್ಣ ಮೊದಲ ಬಾರಿ ಸೆಮಿೈನಲ್ ಪ್ರವೇಶಿಸಿದ್ದಾರೆ. 2023ರ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿ ಮುಕ್ತ ಟೆನಿಸ್ ಯುಗದಲ್ಲಿ ಗ್ರಾಂಡ್ ಸ್ಲಾಂ ೈನಲ್ ಆಡಿದ ಅತಿ ಹಿರಿಯ ಆಟಗಾರ ಎನಿಸಿದ್ದರು. ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಅಮೆರಿಕದ ರಾಜೀವ್ ರಾಮ್ ಅವರನ್ನು ಹಿಂದಿಕ್ಕಿದ್ದಾರೆ. ರಾಜೀವ್ ರಾಮ್ ತನ್ನ 38ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

    20 ವರ್ಷಗಳ ವೃತ್ತಿಜೀವನದಲ್ಲಿ ರೋಹನ್ ಬೋಪಣ್ಣ ಒಮ್ಮೆ ಮಾತ್ರ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದ್ದಾರೆ. 2017ರ ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಕೆನಡದ ಗೇಬ್ರಿಯೆಲಾ ಡಬ್ರೋವ್ಸ್ಕಿ ಜತೆಯಾಗಿ ಪ್ರಶಸ್ತಿ ಗೆದ್ದರೆ, ಡಬಲ್ಸ್‌ನಲ್ಲಿ ಯುಎಸ್ ಓಪನ್‌ನಲ್ಲಿ 2010, 2023ರಲ್ಲಿ ಬಾರಿ ರನ್ನರ್ ಆಪ್ ಆಗಿದ್ದಾರೆ.

    4: ರೋಹನ್ ಬೋಪಣ್ಣ ಎಟಿಪಿ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ 4ನೇ ಭಾರತೀಯ ಎನಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಖ್ಯಾತಿಯ ಲಿಯಾಂಡರ್ ಪೇಸ್-ಮಹೇಶ್ ಭೂಪತಿ (1999), ಸಾನಿಯಾ ಮಿರ್ಜಾ (2015) ಹಿಂದಿನ ಸಾಧಕರು.

    ವಯಸ್ಸು ಕೇವಲ ಒಂದು ಸಂಖ್ಯೆ. ಆದರೆ ‘ನಂಬರ್ ಒನ್’ ಎಂಬುದು ಇನ್ನೊಂದು ಸಂಖ್ಯೆ ಅಲ್ಲ.ಅಭಿನಂದನೆಗಳು ರೋಹನ್! ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ. 1 ಆದ ಅತ್ಯಂತ ಹಿರಿಯ ಆಟಗಾರ ಎಂಬುದು ಅದ್ಭುತ ಸಾಧನೆಯಾಗಿದೆ. ಸಚಿನ್ ತೆಂಡುಲ್ಕರ್, ಕ್ರಿಕೆಟ್ ದಿಗ್ಗಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts