More

    ಮಿಯಾಮಿ ಓಪನ್​ನಲ್ಲಿ ಫೈನಲ್​ಗೇರಿದ ಬೋಪಣ್ಣ-ಎಬ್ಡೆನ್​ ಜೋಡಿ

    ಮಿಯಾಮಿ: ಅಗ್ರ ಶ್ರೇಯಾಂಕಿತ ರೋಹನ್​ ಬೋಪಣ್ಣ ಹಾಗೂ ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜೋಡಿ ಮಿಯಾಮಿ ಓಪನ್​ ಎಟಿಪಿ ಮಾಸ್ಟರ್ಸ್​-1000 ಟೆನಿಸ್​ ಟೂರ್ನಿಯ ಪುರುಷರ ಡಬಲ್ಸ್​ ವಿಭಾಗದಲ್ಲಿ ಫೈನಲ್​ಗೇರಿದೆ. ಆಸ್ಟ್ರೆಲಿಯನ್​ ಓಪನ್​ ಚಾಂಪಿಯನ್​ ಬೋಪಣ್ಣ-ಎಬ್ಡೆನ್​ ಜೋಡಿ ಐದನೇ ಬಾರಿ ಮಾಸ್ಟರ್ಸ್​-1000 ಪ್ರಶಸ್ತಿ ಸುತ್ತಿನಲ್ಲಿ ಆಡಲಿದೆ. ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಅವರು ಕ್ರೊವೇಷಿಯಾದ ಇವಾನ್​ ಡೋಡಿಗ್​ ಮತ್ತು ಅಮೆರಿಕದ ಆಸ್ಟಿನ್​ ಕ್ರಾಜಿಸೆಕ್​ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

    ಗುರುವಾರ ರಾತ್ರಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ವಿಶ್ವ ನಂ.2 ಬೋಪಣ್ಣ ಮತ್ತು ಎಬ್ಡೆನ್​ 6-1, 6-4 ನೇರ ಸೆಟ್​ಗಳಿಂದ ಸ್ಪೇನ್​ನ ಗ್ರಾನೊಲ್ಲರ್ಸ್​ ಮತ್ತು ಅರ್ಜೆಂಟೀನಾದ ಝೆಬಾಲ್ಸ್​ ವಿರುದ್ಧ ಗೆದ್ದು ಬೀಗಿದರು. ಇದರೊಂದಿಗೆ ಸೋಮವಾರ ಪ್ರಕಟವಾಗುವ ಎಟಿಪಿ ಡಬಲ್ಸ್​ ರ್ಯಾಂಕಿಂಗ್​ನಲ್ಲಿ 44 ವರ್ಷದ ಬೋಪಣ್ಣ ಮರಳಿ ಅಗ್ರಸ್ಥಾನಕ್ಕೇರುವ ಅವಕಾಶ ಪಡೆದಿದ್ದಾರೆ. ಕಳೆದ ದುಬೈ ಚಾಂಪಿಯನ್​ಷಿಪ್​ನಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಮತ್ತು ಇಂಡಿಯನ್​ ವೇಲ್ಸ್​ ಮಾಸ್ಟರ್ಸ್​ನಲ್ಲಿ 32ರ ಘಟ್ಟದಲ್ಲೇ ಸೋಲು ಕಂಡ ಬಳಿಕ ಬೋಪಣ್ಣ 2ನೇ ಸ್ಥಾನಕ್ಕೆ ಕುಸಿದಿದ್ದರು. ಡಬಲ್ಸ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ಅತಿ ಹಿರಿಯ ಆಟಗಾರ ಎಂಬ ದಾಖಲೆ ಈಗಾಗಲೆ ಅವರ ಹೆಸರಿನಲ್ಲಿದೆ.

    ಬೋಪಣ್ಣಗೆ ಇದು ವೃತ್ತೀಜಿವನದ 14ನೇ ಎಟಿಪಿ ಮಾಸ್ಟರ್ಸ್​-1000 ಫೈನಲ್​ ಮತ್ತು ಮಿಯಾಮಿಯಲ್ಲಿ ಮೊದಲನೆಯದ್ದಾಗಿದೆ. ಬೋಪಣ್ಣ&ಎಬ್ಡೆನ್​ ಜೋಡಿಗೆ ಇದು ವರ್ಷದ 2ನೇ ಫೈನಲ್​ ಆಗಿದೆ. ಈ ಮುನ್ನ ವರ್ಷಾರಂಭದ ಆಸ್ಟ್ರೆಲಿಯನ್​ ಓಪನ್​ ಪ್ರಶಸ್ತಿ ಜಯಿಸುವ ಮೂಲಕ ಬೋಪಣ್ಣ ವಿಶ್ವ ನಂ. 1 ಪಟ್ಟಕ್ಕೂ ಬಡ್ತಿ ಪಡೆದಿದ್ದರು.

    ಪೇಸ್​ ಸಾಧನೆ ಸಮ
    ಎಲ್ಲ 9 ಎಟಿಪಿ ಮಾಸ್ಟರ್ಸ್​ ಟೂರ್ನಿಗಳಲ್ಲಿ ಫೈನಲ್​ ಆಡಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕನ್ನಡಿಗ ಬೋಪಣ್ಣ ಪಾತ್ರರಾಗಿದ್ದಾರೆ. ಲಿಯಾಂಡರ್​ ಪೇಸ್​ ಮೊದಲ ಸಾಧಕರಾಗಿದ್ದಾರೆ. ಬೋಪಣ್ಣಗೆ ಒಟ್ಟಾರೆ 63ನೇ ಎಟಿಪಿ ಫೈನಲ್​ ಇದಾಗಿದ್ದು, ಇದುವರೆಗೆ 25 ಡಬಲ್ಸ್​ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

    ಮುಂಬೈ ಇಂಡಿಯನ್ಸ್​ ತಂಡದೊಳಗೆ ಎರಡು ಬಣ! ಹಾರ್ದಿಕ್​-ರೋಹಿತ್​ ಪರ ಗುಂಪುಗಳಲ್ಲಿ ಆಟಗಾರರ ವಿಭಜನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts