More

    ಆ್ಯಪ್ ಮೂಲಕ ಜೂಜಾಟ- ಪಂಟರ್​ಗಳ ಆಟಕ್ಕೆ ಬ್ರೇಕ್ ಹಾಕಿದ ಸಿಸಿಬಿ ಪೊಲೀಸರು: ಬುಕ್ಕಿ ಅಂದರ್​…

    ಬೆಂಗಳೂರು: ರಾಜ್ಯಾದ್ಯಂತ ಲಾಕ್​ಡೌನ್ ಘೋಷಣೆಯಾದ ಬೆನ್ನಲ್ಲೇ ನಗರದಲ್ಲಿ ಆನ್​ಲೈನ್ ಜೂಜಾಟದ ಕ್ರೇಜ್ ಹೆಚ್ಚಾಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ಪೋಕರ್ ಹೆಸರಿನ ಜೂಜಾಟ ಆಡಿಸುತ್ತಿದ್ದ ಬುಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಕಾಮಾಕ್ಷಿಪಾಳ್ಯ ಮಾರುತಿನಗರದ ನಿವಾಸಿ ಪುನೀತ್ (31) ಬಂಧಿತ. ಆರೋಪಿ ಬಳಿಯಿದ್ದ 52,300 ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್​ನಲ್ಲಿ ಗ್ರೂಪ್ ಮಾಡಿಕೊಂಡು ಜೂಜಾಡುವ ಪಂಟರ್​ಗಳಿಂದ ಹಣವನ್ನು ಪಣವಾಗಿ ಕಟ್ಟಿಸಿ ಕೊಂಡು ಲೈಸೆನ್ಸ್ ಇಲ್ಲದೆ ಆನ್​ಲೈನ್ ಪೋಕರ್ ಗೇಮ್ ಆಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಏ.4ರಂದು ಕೆಲ ಪಂಟರ್​ಗಳಿಗೆ ಯೂಸರ್ ಐಡಿ ಮತ್ತು ಪಾಸ್​ವರ್ಡ್ ನೀಡಲು ಆರೋಪಿ ಮನೆ ಮುಂದೆ ಕಾಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯು ಆಪ್ ಮತ್ತು ವೆಬ್​ಸೈಟ್ ಮೂಲಕ ಪಂಟರ್​ಗಳಿಗೆ ಯೂಸರ್ ಐಡಿ ಹಾಗೂ ಪಾಸ್​ವರ್ಡ್ ನೀಡಿ ಪೋಕರ್ ಎಂಬ ಅದೃಷ್ಟದ ಜೂಜಾಟ ಆಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಕೆ.ವಿ.ಜಾನ್ಸನ್ ವಸಂತನಗರದಲ್ಲಿ ಇನ್ ಪ್ಲೇ ಗೇಮಿಂಗ್ ಎಂಬ ಕಚೇರಿ ತೆರೆದಿದ್ದು, ಪಂಟರ್​ಗಳಿಗೆ ಆಪ್ ಹಾಕಿ ಕೊಟ್ಟು ಆನ್​ಲೈನ್​ನಲ್ಲಿ ಜೂಜಾಟ ಆಡಿಸುತ್ತಿದ್ದ ಎಂಬ ವಿಚಾರ ಪುನೀತ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯು ಪೋಕರ್ ಜೂಜಾಡಿಸುವ ಬುಕ್ಕಿಯಾಗಿದ್ದು, ತನ್ನ ಬಳಿ ಇರುವ ಪಂಟರ್​ಗಳಿಗೆ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಹಣ ಹಾಕಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದವನೀಗ ಪೊಲೀಸರ ಅತಿಥಿ: ಆಡಳಿತ ಮಂಡಳಿಗೆ ದೂರು ಕೊಟ್ಟರೂ ಆಗಿರಲಿಲ್ಲ ಪ್ರಯೋಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts