More

    ಪುಸ್ತಕ ಕಾಲಗಳನ್ನು ಬೆಸೆಯುವ ಸೇತುವೆ: ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿಕೆ

    ಮಂಡ್ಯ: ಪುಸ್ತಕ ಒಂದು ಜಡವಸ್ತು ಅಥವಾ ಪ್ರಕಟಣೆ ವ್ಯವಹಾರವಲ್ಲ. ಅದೊಂದು ಸಾಂಸ್ಕೃತಿಕ ಜವಾಬ್ದಾರಿಯ ಕ್ರಿಯೆ. ಪ್ರತೀ ಪುಸ್ತಕದ ಹಿಂದೆಯೂ ಅಂತರಂಗದ ಸಂವೇಧನೆಗಳನ್ನು ಹೇಳಿಕೊಳ್ಳಬಯಸುವ ಸೂಕ್ಷ್ಮ ಮನಸ್ಸು ಇರುತ್ತದೆ ಎಂದು ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
    ನಗರದ ಗಾಂಧಿಭವನದಲ್ಲಿ ಮಹಾತ್ಮಾಗಾಂಧಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಹಿತಿ ಡಾ.ಕ್ಯಾತನಹಳ್ಳಿ ರಾಮಣ್ಣ ಅವರ ವಿರಚಿತ ಐದು ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದರು. ವರ್ತಮಾನದ ಆಲೋಚನೆಗಳು, ಭೂತ ಕಾಲ ಮತ್ತು ಭವಿಷ್ಯದ ನಡುವೆ ಬೆಸೆಯುವ ಸೇತುವೆಯಾಗಿ ಪುಸ್ತಗಳು ಹೊರಹೊಮ್ಮುತ್ತವೆ ಎಂದರು.
    ಓದುವಿಕೆ ಎನ್ನುವುದು ಕಾಲಾದೇಶಗಳ ಬಂಧನವಿಲ್ಲದ ನಾಡಿನಲ್ಲಿ ಒಂದು ಪಯಣ. ಒಂದು ತಲೆಮಾರು, ಹಿಂದಿನ ತಲೆಮಾರುಗಳನ್ನು ಗ್ರಹಿಸುವ, ಅರಗಿಸಿಕೊಳ್ಳುವ ಔಚಿತ್ಯ ಬಹಳ ಇದೆ. ಜನಪದದ ಘಟನೆಗಳಲ್ಲಿ ಹೆಣ್ಣಿಗೆ ಯಾವ ರೀತಿಯ ಜೀವನ ಸಿಗುತ್ತಿತ್ತು ಎಂಬುದನ್ನು ಡಾ.ಕ್ಯಾತನಹಳ್ಳಿ ರಾಮಣ್ಣ ಅವರು ತುಂಬಾ ಚೆನ್ನಾಗಿ ದಾಖಲಿಸಿದ್ದಾರೆ. ಅನೇಕ ಸಂಗತಿಗಳ ಆಧಾರ ನೀಡಿ ವಿವರಿಸಿದ್ದಾರೆ. ಶಬ್ಧ ಮತ್ತು ಅದರ ಅರ್ಥಗಳ ಬಗ್ಗೆ ಇರುವ ಸಂಬಂಧ ವಿಸ್ತಾರವಾಗಿದೆ. ಅದರ ಅರಿವು, ತಿಳಿವು, ಬೀಸುಗಳನ್ನು ತಿಳಿಯುವುದು ಕಷ್ಟ ಎಂದು ವಿವರಿಸಿದರು.
    ಶಬ್ಧಗಳು ಸ್ಪುರಿಸುವ ಅರ್ಥ ತರಂಗಗಳ ಪ್ರಪಂಚ, ನಾವು ತಿಳಿದ ಉದ್ದೇಶಿತ ಅರ್ಥ ಪ್ರಪಂಚವನ್ನು ದಾಟಿ ಹೋಗುತ್ತೆಘಿ. ಇನ್ನೇನೋ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತೆ. ಎಷ್ಟೊಂದು ಆಚಾರ ವಿಚಾರಗಳನ್ನು, ಸಾಹಿತ್ಯ ಪಾರಾಕಗಳನ್ನು ಎತ್ತಿ ತೋರಿಸಿದ್ದಾರೆ. ಇದೊಂದು ಆಕಾರ ಗ್ರಂಥವಾಗುತ್ತದೆ ಎಂದು ತಿಳಿಸಿದರು.
    ‘ಜಾನಪದ ಮುಂಬು’ ಪುಸ್ತಕ ಕುರಿತು ಡಾ.ಜಯಲಕ್ಷ್ಮೀ ಸೀತಾಪುರ, ‘ಎಂದು ಬಂದೀತೋ ಮಳೆ’ ಡಾ.ಪ್ರೀತಿ ಶ್ರೀಮಂಧರ ಕುಮಾರ್, ‘ಎರಡು ಅಧ್ಯಯನ’ ಕುರಿತು ಡಾ.ಎಚ್.ಆರ್.ಚೇತನಾ, ‘ನಂಜುಂಡೇಶ್ವರ ಕಾವ್ಯ’ ಕುರಿತು ಉಷಾರಾಣಿ, ‘ಗಾಂಧಿ ಕಾಣ್ಕೆ’ ಕುರಿತು ಡಾ.ಆರ್.ಪಿ.ಛಾಯಾ ವಿಶ್ಲೇಷಿಸಿದರು. ಸಾಹಿತಿ ಡಾ.ಕ್ಯಾತನಹಳ್ಳಿ ರಾಮಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts