More

    ಪುಸ್ತಕಗಳು ಅಂತಃಕರಣದ ಶಕ್ತಿಯನ್ನು ಹೆಚ್ಚಿಸುತ್ತವೆ

    ಹೂವಿನಹಡಗಲಿ: ಬಾಲ್ಯದ ಶಿಕ್ಷಣ ಜೀವನ ಮೌಲ್ಯಗಳನ್ನು ಕಲಿಸಿದರೆ, ಪುಸ್ತಕದ ಓದುವಿಕೆ ಬದುಕಿಗೆ ನವ ಚೈತನ್ಯ ತುಂಬುವ ಮೂಲಕ ಆಂತರಿಕ ಶಕ್ತಿಯನ್ನು ತುಂಬುತ್ತದೆ ಎಂದು ಕೆ.ಶರಣಮ್ಮ ಹೇಳಿದರು.

    ಇದನ್ನೂ ಓದಿ: ಪುಸ್ತಕ ಓದಿನಿಂದ ಜ್ಞಾನ ಭಂಡಾರ ಹೆಚ್ಚಳ

    ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ವಿವಿಧ ಗ್ರಂಥಾಲಯ ಸಂಘಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮಧ್ಯೆ ಮಕ್ಕಳಿಗೆ ಪುಸ್ತಕ ಓದುವ ಸಂಸ್ಕೃತಿಯನ್ನು ಕಲಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಲು ಶಾಲಾ, ಕಾಲೇಜುಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಪೂರಕ ವಾತಾವರಣ ಸೃಷ್ಟಿಸಬೇಕು.

    ಪದ್ಮಶ್ರೀ ಎಸ್.ಆರ್.ರಂಗನಾಥ್‌ರ ಗ್ರಂಥಾಲಯ ಚಳುವಳಿಯಿಂದ ಇಂದು ರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಂಥಾಲಯಗಳನ್ನು ಕಾಣಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪಾಠಕ್ಕಿಂತ ಹೆಚ್ಚಾಗಿ ಪುಸ್ತಕಗಳ ಜ್ಞಾನ ಅವಶ್ಯ. ಮಕ್ಕಳಿಗೆ ಮೊಬೈಲ್, ಟಿವಿಗಳಿಂದ ದೂರ ಉಳಿಸುವ ಮೂಲಕ ಭಾರತದ ಪರಂಪರೆಯನ್ನು ತಿಳಿಸುವ ಮಹಾ ಗ್ರಂಥಗಳ ಅರಿವು ಮೂಡಿಸಬೇಕು. ಯುವಕರು ಇ-ಗ್ರಂಥಾಲಯಗಳನ್ನು ಹೆಚ್ಚು ಬಳಸಿ ಎಂದರು.

    2023-24ನೇ ಸಾಲಿನ ಉತ್ತಮ ಓದುಗ ಪ್ರಶಸ್ತಿಯನ್ನು ಪಟ್ಟಣದ ಪ್ರಕಾಶ್ ಮಲ್ಕಿಒಡೆಯರ್ ಮತ್ತು ಬಿ.ಸದ್ಯೋಜಾತಪ್ಪಗೆ ನೀಡಲಾಯಿತು
    ಸಾಹಿತಿ ರಾಮಪ್ಪ ಮಾದರ ಕೋಟಿಹಾಳ, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಗೌರವಾಧ್ಯಕ್ಷ ಎಚ್.ಎಂ.ಬೆಟ್ಟಯ್ಯ,

    ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ದ್ವಾರಕೀಶ್ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉತ್ತಂಗಿ ಆನಂದ್, ಕಾರ್ಯದರ್ಶಿ ಪಿ.ಯೇಸು, ತಾಲೂಕು ದೈಹಿಕ ಅಧೀಕ್ಷಕ ಮುಸ್ತಫಾ ಎಸ್, ಶಾಖಾ ಗ್ರಂಥಾಲಯಾಧಿಕಾರಿ ಮಂಜುನಾಥ ಭೋವಿ, ಪುರಸಭೆಯ ವ್ಯವಸ್ಥಾಪಕ ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts