More

    ವಾಟ್ಸಾಪ್​ನಲ್ಲೇ ಆಟೋ-ಕ್ಯಾಬ್​ ಬುಕ್​ ಮಾಡಬಹುದು! ಈ ನಗರದಲ್ಲಿ ಪೈಲಟ್​ ಪ್ರಾಜೆಕ್ಟ್​

    ನವದೆಹಲಿ: ಓಲಾ, ಊಬರ್​ನಂಥ ಕಂಪೆನಿಗಳಿಂದಾಗಿ ದೇಶದ ಅನೇಕ ನಗರಗಳಲ್ಲಿ ಈಗ ಆಟೋ ಅಥವಾ ಕ್ಯಾಬ್​ಅನ್ನು ಮನೆ ಬಾಗಿಲಿಗೇ ಕರೆಸಿಕೊಳ್ಳುವ ಸೌಲಭ್ಯ ಸಿಕ್ಕಿದೆ. ಸ್ಮಾರ್ಟ್​ಫೋನಿನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಬುಕ್​ ಮಾಡುವುದೊಂದೇ ಬಾಕಿ! ಆದರೆ, ಇನ್ನು ಮುಂದಕ್ಕೆ ಈ ರೀತಿಯ ಸೇವೆ ಬಳಸಲು ಪ್ರತ್ಯೇಕ ಆ್ಯಪ್​ಗಳ ಅಗತ್ಯವೂ ಬೀಳದಿರಬಹುದು.

    ಹೌದು, ಊಬರ್​ ಕಂಪೆನಿ ತನ್ನ ಬಳಕೆದಾರರಿಗೆ ಜನಪ್ರಿಯ ನೆಟ್​​ವರ್ಕಿಂಗ್​ ಆ್ಯಪ್​ ಆದ ವಾಟ್ಸಾಪ್​ ಮೂಲಕವೇ ರೈಡ್​ ಬುಕ್​ ಮಾಡುವುದಕ್ಕೂ ಅವಕಾಶ ಕಲ್ಪಿಸುವ ಯೋಜನೆ ಮಾಡಿದೆ. ಜಗತ್ತಿನಲ್ಲೇ ಮೊದಲಿಗೆ ಭಾರತದ ಲಖನೌ ನಗರದಲ್ಲಿ ಈ ಪ್ರಯೋಗಕ್ಕೆ ಚಾಲನೆ ನೀಡುತ್ತಿದ್ದು, ಯಶಸ್ಸು ಕಂಡರೆ ಅನ್ಯ ನಗರಗಳಿಗೂ ವಿಸ್ತರಿಸಲಿದೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಉಪನ್ಯಾಸಕ!

    ವಾಟ್ಸಾಪ್​ ಬುಸಿನೆಸ್​ ಪ್ಲಾಟ್​ಫಾರಂ ಮೇಲೆ ನಿರ್ಮಿಸಲಾಗುವ ಈ ಸೇವೆಯು ಊಬರ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡಲಿದೆ. “ಎಲ್ಲಾ ಭಾರತೀಯರಿಗೂ ಊಬರ್​ ಟ್ರಿಪ್​ ತೆಗೆದುಕೊಳ್ಳಲು ಸುಲಭವಾಗಿಸುವುದು ನಮ್ಮ ಉದ್ದೇಶ. ಅವರಿಗೆ ಕಂಫರ್ಟಬಲ್​ ಆದ ಪ್ಲಾಟ್​ಫಾರಂನಲ್ಲಿ ಸೇವೆ ಒದಗಿಸಲು ವಾಟ್ಸಾಪ್​ನೊಂದಿಗೆ ಈ ಪಾಲುದಾರಿಕೆ ಮಾಡಿಕೊಂಡಿದ್ದೇವೆ” ಎಂದು ಊಬರ್​ನ ಹಿರಿಯ ನಿರ್ದೇಶಕ ನಂದಿನಿ ಮಹೇಶ್ವರಿ ಹೇಳಿದ್ದಾರೆ. (ಏಜೆನ್ಸೀಸ್)

    ವಿಕಿ ಕೌಶಲ್​ ಜತೆ ಕತ್ರೀನಾ ಮದುವೆ; ಅತಿಥಿ ಆಗಲಿದ್ದಾರಾ, ಸಲ್ಮಾನ್​ ಖಾನ್​?

    ಕಂಗನಾ ಪೋಸ್ಟ್​ಗಳ್ನ ಸೆನ್ಸರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts