More

    ಇಟ್ಟಿಗೆ ಭಟ್ಟಿಗಳಿಂದ 63 ಜೀತದಾಳುಗಳ ರಕ್ಷಣೆ

    ಮುಜಾಫರ್​​ನಗರ: ಪಂಜಾಬ್ ರಾಜ್ಯದಲ್ಲಿ ಎರಡು ಇಟ್ಟಿಗೆ ಭಟ್ಟಿಗಳಿಂದ 63 ಜೀತ ಕಾರ್ಮಿಕರನ್ನು ಪಂಜಾಬ್ ಹೈಕೋರ್ಟ್ ಮಧ್ಯಸ್ಥಿಕೆಯಲ್ಲಿ ಇತ್ತೀಚೆಗೆ ರಕ್ಷಿಸಲಾಯಿತು.
    ಆಕ್ಷನ್ ಏಡ್ ಎಂಬ ಎನ್‌ಜಿಒ ಮತ್ತು ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿನ ರಾಷ್ಟ್ರೀಯ ಸಮಿತಿ (ಎನ್‌ಸಿಸಿಇಬಿಎಲ್) ನ್ಯಾಯಾಲಯವನ್ನು ಸಂಪರ್ಕಿಸಿದ ನಂತರ ನ್ಯಾಯಾಲಯದ ಮಧ್ಯಸ್ಥಿಕೆಯಿಂದಾಗಿ ಜೀತ ಕಾರ್ಮಿಕರನ್ನು ರಕ್ಷಿಸಲಾಯಿತು.

    ಎರಡು ಇಟ್ಟಿಗೆ ಭಟ್ಟಿಗಳು ಜೀತ ಕಾರ್ಮಿಕರನ್ನು ಇಟ್ಟುಕೊಂಡಿರುವುದಾಗಿ ತಿಳಿದು ಬಂದ ನಂತರ ಜೂನ್‌ನಲ್ಲಿ ಎರಡು ಎನ್‌ಜಿಒಗಳು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಆಗ ಹೈಕೋರ್ಟ್ ಕಾರ್ಮಿಕರನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು.

    ಇದನ್ನೂ ಓದಿ: ಮಾತೃಭೂಮಿ ವೈಭವ ಹಾಳು ಮಾಡಲು ಬಿಡುವುದಿಲ್ಲ ಎಂದ ಪ್ರಧಾನಿ

    ಇದರ ಬೆನ್ನಲ್ಲೇ ಪೊಲೀಸರು 63 ಸಂತ್ರಸ್ತರನ್ನು ರಕ್ಷಿಸಿದ್ದಾರೆ. ರಕ್ಷಿತ ಕಾರ್ಮಿಕರು ಬಿಲಾಸ್​ಪುರ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಂದ ಬಂದವರಾಗಿದ್ದಾರೆ.
    ಕಾರ್ಮಿಕರಲ್ಲೊಬ್ಬರಾದ ಡ್ಯಾನಿಶ್ ಅಹ್ಮದ್ ಸುದ್ದಿ ಸಂಸ್ಥೆಯೊಂದರಕ್ಕೆ ಮಾತನಾಡುತ್ತಾ, “ನಾನು ಗುತ್ತಿಗೆದಾರರೊಬ್ಬರನ್ನು ಸಂಪರ್ಕಿಸಿದಾಗ, ಜಲಂಧರ್​​​ನಲ್ಲಿ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡಿದರೆ ನಾನು ಚೆನ್ನಾಗಿ ಸಂಪಾದಿಸಬಹುದು ಎಂದು ಅವರು ಹೇಳಿದ್ದರು.

    ಳೆದ ವರ್ಷ ಜೂನ್‌ನಲ್ಲಿ ನಾನು ನನ್ನ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದೆ. ಆದರೆ ವೇತನದ ಬದಲು, ನಾವು ಹೊಡೆತಗಳನ್ನು ತಿಂದಿದ್ದೇವೆ. ನಾವು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆವು ಮತ್ತು ಜೀವಂತವಾಗಿರಲು ಆಹಾರವನ್ನು ಮಾತ್ರ ಅಲ್ಲಿ ನೀಡುತ್ತಿದ್ದರು ಎಂದು ತಿಳಿಸಿದರು.

    ಇದನ್ನೂ ಓದಿ: ಮದುವೆ ನಡೆಯುತ್ತಿರುವಾಗ ಒಮ್ಮೆಲೇ ಬಿದ್ದು, ಶವವಾದಳು ವಧು; ವರ ಏನು ಮಾಡಿದ?

    ಮತ್ತೊಬ್ಬ ಕಾರ್ಮಿಕ ಆಶಾನ್ ಮೊಹ್ಮದ್ ಮಾತನಾಡಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಗುವಿಗೆ ಉದ್ಯೋಗದಾತ ಔಷಧವನ್ನೂ ಕೊಡಿಸಲಿಲ್ಲ. ಲಾಕ್​​ಡೌನ್ ಅವಧಿಯಲ್ಲಿ ತಮ್ಮ ಊರುಗಳಿಗೆ ಹೊರಡುವ ಕುರಿತು ಕಾರ್ಮಿಕರು ಮಾತನಾಡಿದಾಗಲೆಲ್ಲಾ ಚಿತ್ರ ಹಿಂಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
    ಸಂರಕ್ಷಿತ ಕಾರ್ಮಿಕರಿಗೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಮತ್ತು ಪೊಲೀಸ್ ಪ್ರಕರಣ ದಾಖಲಾಗಿಲ್ಲ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎನ್​​ಸಿಸಿಇಬಿಎಲ್​​ನ ಸಿಬ್ಬಂದಿ ನಿರ್ಮಲ್ ಗೊರಾನಾ ತಳಿಸಿದ್ದಾರೆ.

    ಲಡಾಖ್ ಗಡಿಗೆ ವಾಯುರಕ್ಷಣಾ ವ್ಯವಸ್ಥೆ ರವಾನೆ; ಚೀನಾ ಸೇನಾ ಜಮಾವಣೆಗೆ ಭಾರತ ಪ್ರತ್ಯುತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts