More

    ಬೊಮ್ಮಾಯಿ ದೆಹಲಿ ಭೇಟಿ : ಅಮಿತ್​ ಷಾರೊಂದಿಗಿನ ಚರ್ಚೆ ವಿವರ ಬಿಚ್ಚಿಟ್ಟ ಗೃಹ ಸಚಿವ

    ಬೆಂಗಳೂರು: ಕರೊನಾ ಸೋಂಕಿನ ವಿರುದ್ಧ ಸಮರ ಸಾರಿರುವ ಹೊತ್ತಿನಲ್ಲಿ ರಾಜಕೀಯ ವಿಚಾರ ಪ್ರಸ್ತಾಪವೂ ಆಗಿಲ್ಲ, ನಾಯಕತ್ವ ಬದಲಾವಣೆ ಕುರಿತು ಚರ್ಚೆಯಾಯಿತು ಎಂದು ಹೇಳುವುದೂ ಸರಿಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ತಮ್ಮ ದೆಹಲಿ ಭೇಟಿಯ ಬಗೆಗಿನ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

    ಸಿಎಂ ಬಿಎಸ್​​ವೈ ನಿವಾಸದ ಬಳಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಬೊಮ್ಮಾಯಿ, ದೆಹಲಿ ಭೇಟಿ ಉದ್ದೇಶ ಹಾಗೂ ಚರ್ಚಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. “ನಾಯಕತ್ವ ಬದಲಾವಣೆ ಕುರಿತು ಚರ್ಚಿಸುವುದಕ್ಕಾಗಿ ವರಿಷ್ಠರು ತಮ್ಮನ್ನು ಕರೆಯಿಸಿಕೊಂಡಿದ್ದರು ಎನ್ನುವುದು ಶುದ್ಧ ಸುಳ್ಳು. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಅಂತಹ ವಿಷಯವೇ ಅಪ್ರಸ್ತುತ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ವೇಳೆ ಕರೊನಾ ಮಾತ್ರ ಚರ್ಚೆಯ ವಿಷಯವಾಗಿತ್ತು” ಎಂದರು.

    ಇದನ್ನೂ ಓದಿ: ಕೋವಿಡ್ ಸೆಂಟರ್ಗೆ ಎರಡು ಕೋಟಿ ಕೊಟ್ಟ ಅಮಿತಾಭ್ ಬಚ್ಚನ್

    ನೆರವಿನ ಭರವಸೆ: ಕರೊನಾ ಸೋಂಕು, ಸಾವು ಪ್ರಕರಣಗಳು, ಕೈಗೊಂಡ ಕ್ರಮಗಳ ಬಗ್ಗೆ ಷಾ ಅವರಿಗೆ‌ ವಿವರಿಸಿದ್ದು, ರಾಜ್ಯದಲ್ಲಿ ಸೋಂಕು ಉಲ್ಬಣಿಸಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕರೊನಾ 2ನೇ ಅಲೆಯು ವೇಗವಾಗಿ ಸೋಂಕು ಹರಡಿಸಿದ್ದು,‌ ಕರ್ನಾಟಕ ಮಾತ್ರವಲ್ಲದೆ ದೇಶದ ಹಲವು‌ ರಾಜ್ಯಗಳಲ್ಲಿ ಹೆಚ್ಚಿದೆ ಎಂದ ಷಾ, ನಿಯಂತ್ರಣ ಕ್ರಮಗಳಿಗೆ ಕೇಂದ್ರದಿಂದ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

    ರಾಜ್ಯದಲ್ಲೇ ಉತ್ಪಾದಿಸುವ ಆಮ್ಲಜನಕ ರಾಜ್ಯದಲ್ಲೇ ಬಳಕೆಗೆ ಅನುಮತಿ ನೀಡಲು ಕೋರಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡುವ ಸಲಹೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಎಂದು ಹೇಳಿದ್ದಾರೆ. ಹಂಚಿಕೆ ಪ್ರಮಾಣವನ್ನು 965 ಮೆಟ್ರಿಕ್ ಟನ್​​ಗಳಿಗೆ ಏರಿಸಲಾಗಿದ್ದು, 2.67 ಲಕ್ಷ ವಯಲ್ಸ್ ರೆಮ್​​ಡೆಸಿವಿರ್ ಚುಚ್ಚುಮದ್ದು ಹಂಚಿಕೆಯಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ವೇಶ್ಯೆಯ ಬರ್ಬರ ಕೊಲೆ : ಪರಾರಿಯಾಗುತ್ತಿದ್ದ ಆರೋಪಿ ಪೊಲೀಸ್​ ವಶಕ್ಕೆ

    ಉತ್ಪಾದಿತ ಆಕ್ಸಿಜನ್ ಸಾಗಣೆಗೆ‌ 4 ಟ್ಯಾಂಕರ್​​ಗಳನ್ನು ನೀಡಲಾಗುವುದು. ಹೆಚ್ಚುವರಿ 10 ಟ್ಯಾಂಕರ್​​ಗಳನ್ನು ಒದಗಿಸಲು ಸ್ವಲ್ಪ ಕಾಲಾವಕಾಶ ಹಿಡಿಯಲಿದೆ. ಸದ್ಯಕ್ಕೆ ಸಾಗಣೆ ಮಾರ್ಗದಲ್ಲಿರುವ‌ 4 ಟ್ಯಾಂಕರ್, ಬಹ್ರೇನ್​​ನಿಂದ ಬಂದಿರುವ 2 ಟ್ಯಾಂಕರ್​​ಗಳನ್ನು ಬಳಸಿಕೊಂಡು ಪರಿಸ್ಥಿತಿ ನಿರ್ವಹಿಸಲು ಷಾ ಸಲಹೆ ನೀಡಿದ್ದಾರೆ. ಸೋಂಕು ಹಾಗೂ ಸಾವು ತಡೆಗಟ್ಟಲು ಬೇಕಾದ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಿದ್ದಾರೆ ಎಂದು ಬೊಮ್ಮಾಯಿ‌ ವಿವರಿಸಿದರು.

    ಸ್ವಕ್ಷೇತ್ರದಲ್ಲೇ‌ ಇರಲು ಸಂಸದ-ಶಾಸಕರಿಗೆ ಸಿಎಂ ಬಿಎಸ್​ವೈ ಸಲಹೆ

    ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts