More

    ರೂ.100 ಲಂಚ ಚಿಕ್ಕದೆಂದ ಬಾಂಬೆ ಹೈಕೋರ್ಟ್

    ಮುಂಬೈ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು 100 ರೂಪಾಯಿ ಲಂಚದ ಮೊತ್ತ ತೀರಾ ಚಿಕ್ಕದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

    ಕ್ಷುಲ್ಲಕ ವಿಷಯವೆಂದು ಪರಿಗಣಿಸಲು ಯೋಗ್ಯವಾದ ಪ್ರಕರಣ ಇದು ಎಂದು ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರಿದ್ದ ಏಕ ಸದಸ್ಯ ಪೀಠವು ಹೇಳಿದ್ದು, ವೈದ್ಯಾಧಿಕಾರಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

    ಏನಿದು ಪ್ರಕರಣ ?: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪೌಡ್​ನಲ್ಲಿರುವ ಗ್ರಾಮೀಣ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲ್ ಶಿಂಧೆ ಅವರು ಗಾಯಗೊಂಡಿದ್ದ ಎಲ್​ಟಿ ಪಿಂಗಳೆ ಎಂಬುವರ ಗಾಯವನ್ನು ಪ್ರಮಾಣೀಕರಿಸಲು 2007ರಲ್ಲಿ 100 ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪಿಂಗಳೆ ದೂರು ನೀಡಿದ್ದರು. ಪಿಂಗಳೆ ಅವರ ದೂರಿನನ್ವಯ ಡಾ. ಶಿಂಧೆ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ಅಧಿಕಾರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು. ಜನವರಿ 2012ರಲ್ಲಿ ವಿಶೇಷ ನ್ಯಾಯಾಲಯವು ಡಾ. ಶಿಂಧೆ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು. ವಿಶೇಷ ನ್ಯಾಯಾಲಯದ ಆದೇಶವನ್ನು ರಾಜ್ಯವು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

    ಹೈಕೋರ್ಟ್ ಆದೇಶ: ಮೇಲ್ಮನವಿಯಲ್ಲಿ ಹೈಕೋರ್ಟ್ ಯಾವುದೇ ಅರ್ಹತೆ ಕಂಡು ಕೊಂಡಿಲ್ಲ. ಪೀಠವು ತನ್ನ ಆದೇಶದಲ್ಲಿ, ಪ್ರಸ್ತುತ ಪ್ರಕರಣದಲ್ಲಿ 2007ರಲ್ಲಿ 100 ರೂಪಾಯಿ ಲಂಚ ಪಡೆದ ಆರೋಪವಿದೆ. ಈ ಮೊತ್ತವು 2007ರಲ್ಲಿ ತೀರಾ ಚಿಕ್ಕದಾಗಿದೆ ಮತ್ತು 2023ರವರೆಗಿನ ವಿಚಾರಣೆಯ ಸಮಯ ದಲ್ಲಿ ಇನ್ನೂ ಕಡಿಮೆಯಾಗಿದೆ ಎಂದು ಹೇಳಿದೆ.

    ನಾಯ್ಡು ನ್ಯಾಯಾಂಗ ಕಸ್ಟಡಿ ವಿಸ್ತರಣೆ

    ಅಮರಾವತಿ: ಕೌಶಲ್ಯಾಭಿವೃದ್ಧಿ ನಿಗಮದ ಹಗರಣದ ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ನ್ಯಾಯಾಂಗ ಬಂಧನವನ್ನು ಅ. 19ರವರೆಗೆ ಸ್ಥಳೀಯ ನ್ಯಾಯಾಲಯ ಗುರುವಾರ ವಿಸ್ತರಿಸಿದೆ. ನಾಯ್ಡು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮತ್ತು ಆಂಧ್ರ ಪೊಲೀಸ್ ಸಿಐಡಿ ಕಸ್ಟಡಿಗೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರಕ್ಕೆ ಮುಂದೂಡಿತು.

    ಸೆನ್ಸಾರ್ ಮಂಡಳಿ ವಿರುದ್ಧ ಸಿಬಿಐ ವಿಚಾರಣೆ

    ನವದೆಹಲಿ: ತಮ್ಮ ಹೊಸ ಚಿತ್ರ ‘ಮಾರ್ಕ್ ಆಂಟೋನಿ’ ಹಿಂದಿ ಅವತರಣಿಕೆಗೆ ಪ್ರಮಾಣಪತ್ರ ನೀಡಲು ಕೆಲವು ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂದು ತಮಿಳು ನಟ ವಿಶಾಲ್ ಹೇಳಿಕೆ ನೀಡಿದ ಬೆನ್ನಲ್ಲೇ, ಚಲನಚಿತ್ರ ಮಂಡಳಿಯ ಸಿಬಿಎಫ್​ಸಿಯಲ್ಲಿನ ಭ್ರಷ್ಟಾಚಾರದ ಆರೋಪಗಳ ಕುರಿತು ಸಿಬಿಐ ತನಿಖೆ ಆರಂಭಿಸಿದೆ. ತಮ್ಮ ಹೊಸ ಚಿತ್ರ ‘ಮಾರ್ಕ್ ಆಂಟನಿ’ಯ ಹಿಂದಿ ಆವೃತ್ತಿಯನ್ನು ಪ್ರಮಾಣೀಕರಿಸಲು ಸೆನ್ಸಾರ್ ಮಂಡಳಿಯ ಇಬ್ಬರು ವ್ಯಕ್ತಿಗಳು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಎಕ್ಸ್ ಜಾಲತಾಣದಲ್ಲಿ ವೀಡಿಯೊವನ್ನು ವಿಶಾಲ್ ಪೋಸ್ಟ್ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts