More

    ಅಮೆರಿಕದಲ್ಲಿ ‘ಬಾಂಬ್’​ ಎಫೆಕ್ಟ್​; ದೊಡ್ಡಣ್ಣ ಚಳಿಗೆ ತತ್ತರ..!

    ನವದೆಹಲಿ: ಅಮೆರಿಕದಲ್ಲಿನ ಭೀಕರ ಹಿಮಪಾತ ಅಪಾಯಕಾರಿ ಮಟ್ಟದ ತಾಪಮಾನಕ್ಕೆ ಬಂದು ತಲುಪಪಿದೆ. -45 ಡಿಗ್ರಿ ಸೆಲ್ಸಿಯಸ್​ಗೂ ಕಡಿಮೆ ತಾಪಮಾನ ದಾಖಲಾಗಿದ್ದು 43 ಇಂಚುಗಳಷ್ಟು ಎತ್ತರಕ್ಕೆ ಹಿಮಪಾತ ಆಗಿದೆ. ಇದುವರೆಗೂ 30ಕ್ಕೂ ಹೆಚ್ಚು ಸಾವುಗಳಿಗೆ ಈ ಭೀಕರ ಚಳಿ ಕಾರಣವಾಗಿದ್ದು 10 ಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಇಲ್ಲದೆ ಪರದಾಡುತ್ತಿವೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ‘ಬಾಂಬ್​’ ಚಂಡಮಾರುತ.

    ಚಂಡಮಾರುತದ ಪರಿಣಾಮ ಕೆನಡಾದ ಗಡಿಯ ಸಮೀಪವಿರುವ ಗ್ರೇಟ್ ಲೇಕ್ಸ್‌ನಿಂದ ಮೆಕ್ಸಿಕೋ ದೇಶದ ಗಡಿಯ ಸಮೀಪವಿರುವ ರಿಯೊ ಗ್ರಾಂಡೆವರೆಗೆ ಅನುಭವಿಸಲಾಗುತ್ತಿದೆ ಎನ್ನಲಾಗಿದೆ. ನ್ಯೂಯಾರ್ಕ್‌ನಲ್ಲಿನ ಬಫಲೋ ನಗರ ಅತಿ ಹೆಚ್ಚು ಹಾನಿಗೊಳಗಾಗಿದೆ. ರಭಸದ ಗಾಳಿ ಮತ್ತು ದಟ್ಟವಾದ ಹಿಮದಿಂದ ತುರ್ತು ಸೇವೆಗಳು ಜನರಿಗೆ ತಲುಪುತ್ತಿಲ್ಲ.

    ಬೆಚ್ಚಗಿನ ಗಾಳಿ ಮತ್ತು ತಣ್ಣನೆಯ ಗಾಳಿಯ ನಡುವೆ ಘರ್ಷಣೆಯಾದಾಗ ಈರೀತಿಯ ಘಟನೆ ಸಂಭವಿಸುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಇಲಾಖೆ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts