More

    ದೇಣಿಗೆ ವಿಚಾರದಲ್ಲಿ ಚಂದನವನವನ್ನು ಅನುಸರಿಸುತ್ತಿದೆಯೇ ಬಿಗ್​ ಬಾಲಿವುಡ್?

    ಬೆಂಗಳೂರು: ನಿಜಕ್ಕೂ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಮನೆಯಲ್ಲಿಯೇ ಮರೆಯಾಗಿದ್ದಾರೆ. ತಾವಾಯ್ತು ತಮ್ಮ ಕೆಲಸವಾಯ್ತು, ಮಡದಿ ಮಕ್ಕಳೊಂದಿಗೆ ಕಾಲಕಳೆಯುತ್ತ ಗೃಹ ಬಂಧಿಯಾಗಿದ್ದಾರೆ. ದೇಣಿಗೆ ನೀಡುವವರು ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಸಿನಿಮಾ ಕಾರ್ಮಿಕರಿಗೆ ಊಟ, ಸಂಬಳ, ದಿನಸಿ ಪದಾರ್ಥವನ್ನೂ ವಿತರಿಸುತ್ತಿದ್ದಾರೆ. ಆದರೆ, ಅದರ ಪ್ರಮಾಣ ಮಾತ್ರ ಕಡಿಮೆ! ಸಣ್ಣ ಸಣ್ಣ ಕೈಗಳಿಂದ ಈವರೆಗೆ ಒಂದಷ್ಟು ಮೊತ್ತ ಸೇರಿಸಲಾಗಿದೆಯಾದರೂ, ದೊಡ್ಡ ಕೈಗಳು ಅಡಗಿ ಕೂತಿವೆ. ಇದು ಬರೀ ಸ್ಯಾಂಡಲ್‌ವುಡ್‌ಗಷ್ಟೇ ಅನ್ವಯಿಸುವುದಿಲ್ಲ. ವಾರ್ಷಿಕ ಸಾವಿರಾರು ಕೋಟಿ ವಹಿವಾಟು ಮಾಡುವ ಬಾಲಿವುಡ್ ಚಿತ್ರರಂಗಕ್ಕೂ ಸೂಕ್ತವೆನಿಸುತ್ತಿದೆ.

    ಹೌದು, ಇಲ್ಲಿಯವರೆಗೂ ಬಾಲಿವುಡ್‌ನಿಂದ ಒಬ್ಬೇ ಒಬ್ಬ ಸ್ಟಾರ್ ಮುಂದೆ ಬಂದು ದೇಣಿಗೆ ನೀಡಿಲ್ಲ. ಹೃತಿಕ್ ರೋಷನ್ ಮಾಸ್ಕ್ ವಿತರಣೆಗೆ ಕೈ ಜೋಡಿಸಿದರೆ, ಕಾಮಿಡಿ ಶೋನ ಕಪಿಲ್ ಶರ್ಮಾ 50ಲಕ್ಷ ಮೊತ್ತವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದನ್ನು ಬಿಟ್ಟರೆ, ಖಾನ್‌ತ್ರಯರು ಮಂಗಮಾಯವಾಗಿದ್ದಾರೆ! ಸಿನಿಮಾ ಗಳಿಕೆಯನ್ನು ಐವತ್ತು ಕೋಟಿ, ನೂರು ಕೋಟಿ ಎಂದು ಘೋಷಿಸಿಕೊಳ್ಳುವ ಸಿನಿಮಾ ಸ್ಟಾರ್‌ಗಳು, ಪರಿಹಾರ ನಿಧಿಗೆ ಇಲ್ಲಿಯವರೆಗೂ ಒಂದೇ ಒಂದು ರೂಪಾಯಿ ನೀಡಿಲ್ಲ. ಸ್ಯಾಂಡಲ್‌ವುಡ್ ಹೊರತುಪಡಿಸಿದರೆ, ಪಕ್ಕದ ಟಾಲಿವುಡ್ ಮತ್ತು ಕಾಲಿವುಡ್ ಸಿನಿಮಾರಂಗದ ಘಟಾನುಘಟಿಗಳು ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದಂತೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಕಮಲ್ ಹಾಸನ್ ಚಿಕಿತ್ಸೆಗೆ ತನ್ನ ಮನೆಯನ್ನೇ ನೀಡುವುದಾಗಿ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಮಾತ್ರ ಈ ಯಾವ ಬೆಳವಣಿಗೆಗಳೂ ಆಗುತ್ತಿಲ್ಲ.

    ಹಾಗಾದರೆ ಸ್ಟಾರ್ ನಟ, ನಟಿಯರು ಮಾಡುತ್ತಿರುವುದಾದರೂ ಏನು? ಸದ್ಯ ಸ್ಟಾರ್ ಎನಿಸಿಕೊಂಡಿರುವವರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದರೆ, ಪಾಪ ಅವರೆಲ್ಲ ಡಾನ್ಸ್ ಮಾಡುವ, ಅಡುಗೆ ಮಾಡುವ ಮತ್ತು ಯೋಗ ಮಾಡುವುದನ್ನು ಹೇಳಿಕೊಡುವುದರಲ್ಲೇ ತೊಡಗಿಸಿಕೊಂಡಿದ್ದಾರೆ. ಹೀಗೆ ಪದೇಪೆ ಅಂಥ ವಿಡಿಯೋಗಳನ್ನು ಹಾಕಿ ಎಲ್ಲರಿಗೂ ತೊಂದರೆ ಕೊಡಬೇಡಿ ಎಂದು ನಿನ್ನೆಯಷ್ಟೇ ನಿರ್ಮಾಪಕಿ ಫರ್ಹಾ ಖಾನ್ ಗರಂ ಆಗಿದ್ದರು.

    ಲಕ್ಷ್ಮಣ ರೇಖೆ ದಾಟದೇ ಇದ್ದವರಿಗೆ ದೂರದರ್ಶನದಿಂದ ಒಂದು ಗಿಫ್ಟ್ – ನಾಳೆ ಬೆಳಗ್ಗೆಯೇ ನಿಮ್ಮ ಮನೆಯೊಳಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts