More

    ಇಸ್ರೇಲ್​ ಪ್ರಧಾನಿಗೆ ‘ಭಗವದ್ಗೀತೆ’ ನೀಡಿದ ಬಾಲಿವುಡ್​ ಬೆಡಗಿ! ಹಿಂದಿಯನ್ನೂ ಹೇಳಿಕೊಟ್ಟರು!

    ಜೆರುಸಲೆಂ: ಬ್ಯೂಟಿ ಕ್ವೀನ್​ ಹಾಗೂ ಬಾಲಿವುಡ್​ ನಟಿ ಊರ್ವಶಿ ರೌತೇಲಾ ಇದೀಗ ಇಸ್ರೇಲಿನಲ್ಲಿದ್ದಾರೆ. ಅಲ್ಲಿ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತಾನ್ಯಾಹು ಅವರನ್ನು ಭೇಟಿಯಾದ ಊರ್ವಶಿ, ಭಗವದ್ಗೀತೆಯ ಇಂಗ್ಲಿಷ್​ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ, ನೆತಾನ್ಯಾಹುಗೆ ಹಿಂದಿ ಶಬ್ದಗಳನ್ನು ಕಲಿಸುವ ಪ್ರಯತ್ನ ಮಾಡಿದ್ದಾರೆ.

    ಇಸ್ರೇಲ್​ ಪ್ರಧಾನಿಗೆ 'ಭಗವದ್ಗೀತೆ' ನೀಡಿದ ಬಾಲಿವುಡ್​ ಬೆಡಗಿ! ಹಿಂದಿಯನ್ನೂ ಹೇಳಿಕೊಟ್ಟರು!

    2015ರ ಮಿಸ್​ ದಿವಾ ಯೂನಿವರ್ಸ್​​ ಗೌರವವನ್ನು ಗಳಿಸಿದ್ದ ಊರ್ವಶಿ 2021ರ ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲಿ ಊರ್ವಶಿ ಮತ್ತು ಅವರ ಕುಟುಂಬವನ್ನು ಇಸ್ರೇಲ್​ ಪ್ರಧಾನಿ ಆಮಂತ್ರಿಸಿ ಗೌರವಿಸಿದರು ಎನ್ನಲಾಗಿದೆ. ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿರುವ ನಟಿ, ‘ನಮ್ಮನ್ನು ಆಮಂತ್ರಿಸಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ.

    ಜೊತೆಗೇ, ಪ್ರಧಾನಿ ನೆತಾನ್ಯಾಹು ಅವರೊಂದಿಗೆ ತಮ್ಮ ವಾರ್ತಾಲಾಪದ ವಿಡಿಯೋವೊಂದನ್ನು ಊರ್ವಶಿ ಶೇರ್​ ಮಾಡಿಕೊಂಡಿದ್ದಾರೆ. ಇಸ್ರೇಲ್​ ಪ್ರಧಾನಿ ತಮ್ಮ ಭಾಷೆಯಲ್ಲಿ ಎಲ್ಲಾ ಚೆನ್ನಾಗಿದೆ ಅನ್ನುವುದಕ್ಕೆ ‘ಹಬಾಬಾ’ ಎನ್ನುತ್ತೇವೆ. ಹಿಂದಿಯಲ್ಲಿ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಊರ್ವಶಿ ಅದಕ್ಕೆ ಹಾವಭಾವದೊಂದಿಗೆ ಕೆಲವು ಹಿಂದಿಯಲ್ಲಿ ‘ಸಬ್​ ಶಾಂದಾರ್​ ಸಬ್​ ಬಡಿಯಾ’ ಎಂದು ಹೇಳಿಕೊಟ್ಟಿದ್ದಾರೆ. ನೆತಾನ್ಯಾಹು ಅವರು ಸರಾಗವಾಗಿ ಅನುಕರಿಸಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. (ಏಜೆನ್ಸೀಸ್)

    ಪಾಲಕರೇ ಎಚ್ಚರ! ನಿಮ್ಮ ಮಕ್ಕಳು ಆನ್​​ಲೈನ್​ ಗೇಮ್ಸ್​ ಆಡುತ್ತಾರಾ? ಹಾಗಿದ್ದರೆ ಇದನ್ನು ಓದಿ

    ವಿಕಿ-ಕತ್ರಿನಾ ಮದುವೆಯ ಅಪರೂಪದ ದೃಶ್ಯಗಳು ಇಲ್ಲಿವೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts