More

    ಬಾಲಿವುಡ್​ ನಟ ಸಂಜಯ್​ ದತ್​​ಗೆ ಅನಾರೋಗ್ಯ; ಐಸಿಯುನಲ್ಲಿ ಚಿಕಿತ್ಸೆ

    ಬಾಲಿವುಡ್​ ನಟ ಸಂಜಯ್​ ದತ್​ ಅನಾರೋಗ್ಯದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆ ಅವರಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    ಸಂಜಯ್​ ದತ್​ಗೆ 61ವರ್ಷ ವಯಸ್ಸಾಗಿದೆ. ಜು.29ರಂದು ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ. ಇಂದು ಸಂಜೆ ಉಸಿರಾಟದ ತೊಂದರೆ ಮತ್ತು ಎದೆಯಲ್ಲಿ ನೋವು ಕಂಡುಬಂದಿದ್ದರಿಂದ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ, ಕೊವಿಡ್​-19 ಆ್ಯಂಟಿಜೆನ್​ ಟೆಸ್ಟ್​ ಕೂಡ ಮಾಡಿಸಲಾಗಿತ್ತು. ಅದರ ವರದಿ ನೆಗೆಟಿವ್​ ಬಂದಿದೆ. ಆದರೂ ಆರ್​ಟಿ-ಪಿಸಿಆರ್​ ಟೆಸ್ಟ್​ಗೋಸ್ಕರ ಸ್ವಾಬ್ ಸಂಗ್ರಹಿಸಲಾಗಿದೆ.

    ಕಳೆದ ತಿಂಗಳಷ್ಟೇ ಕೊವಿಡ್​-19ನಿಂದ ಚೇತರಿಸಿಕೊಂಡಿರುವ ಡಾ. ಜಲೀಲ್​ ಪರ್ಕರ್​ ಅವರು ಸಂಜಯ್​ ದತ್​ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗೇ, ದತ್​ ಅವರಿಗೆ ಈಗಾಗಲೇ ಕೆಲವು ತಪಾಸಣೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನಿಡಿದ್ದಾರೆ. (ಏಜೆನ್ಸೀಸ್)

    ಒಂದೊಮ್ಮೆ 2014ಕ್ಕೂ ಮುನ್ನ ಕೊವಿಡ್​-19 ವೈರಸ್​ ಬಂದಿದ್ದರೆ ಏನಾಗುತ್ತಿತ್ತು?- ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts