More

    ಇಸ್ರೇಲ್​ ಮೇಲಿನ ದಾಳಿಯಲ್ಲಿ ಕೇರಳ ಮಹಿಳೆ ಸಾವು: ಭಾರತ ತಲುಪಿದ ಮಹಿಳೆಯ ಮೃತದೇಹ

    ನವದೆಹಲಿ: ಇಸ್ರೇಲ್​ ಮೇಲೆ ನಡೆದ ಪ್ಯಾಲೇಸ್ಟಿನಿಯನ್ ರಾಕೆಟ್​ ದಾಳಿ ವೇಳೆ ದುರಂತ ಸಾವಿಗೀಡಾದ ಕೇರಳ ಮೂಲದ ಮಹಿಳೆಯ ಮೃತದೇಹ ಶನಿವಾರ ಬೆಳಗ್ಗೆ ನವದೆಹಲಿ ತಲುಪಿದೆ.

    ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್​ ಅವರು ಇಸ್ರೇಲ್​ನ ಉಪ ರಾಯಭಾರಿ ರೊನಿ ಯೆಡಿಡಿಯಾ ಕ್ಲೈನ್ ಅವರೊಂದಿಗೆ ಸೇರಿ ಅಂತಿಮ ಗೌರವ ಸಲ್ಲಿಸಿದರು.

    ಭಾರವಾದ ಹೃದಯದಿಂದ ಶ್ರೀಮತಿ ಸೌಮ್ಯ ಸಂತೋಷ್​ ಅವರ ಪಾರ್ಥೀವ ಶರೀರವನ್ನು ಸ್ವೀಕರಿಸಿ, ದೆಹಲಿಯಲ್ಲಿ ಅಂತಿಮ ಗೌರ ಸಲ್ಲಿಸಿದೆವು. ಇಸ್ರೇಲ್​ ರಾಯಭಾರಿ ರೋನಿ ಯಡಿಡಿಯಾ ಸಹ ಜತೆಯಲ್ಲಿದ್ದರು. ನೋವು ಮತ್ತು ದುಃಖಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಸೌಮ್ಯಾ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಮುರಳೀಧರನ್​ ಟ್ವೀಟ್​ ಮಾಡಿದ್ದಾರೆ.

    ಕೇರಳದ ಇಡುಕ್ಕಿ ಮೂಲದ ಸೌಮ್ಯ (31) ಇಸ್ರೇಲ್​ನ ಆ್ಯಶ್​ಕೆಲೊನ್​ ನಗರದಲ್ಲಿ ವಾಸವಿದ್ದರು. ಕಳೆದ ಮಂಗಳವಾರ ಸಂಜೆ ತನ್ನ ಪತಿ ಸಂತೋಷ್​ರೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡುವಾಗ ರಾಕೆಟ್​ ನೇರವಾಗಿ ಸೌಮ್ಯ ಮನೆಯ ಮೇಲೇ ಬಿದ್ದಿತ್ತು.

    ಈ ಬಗ್ಗೆ ಮಾತನಾಡಿದ್ದ ಸೌಮ್ಯ ಪತಿ ಸಂತೋಷ್​ ಸಹೋದರ ಸಾಜಿ, ವಿಡಿಯೋ ಕಾಲ್​ ವೇಳೆ ನನ್ನ ಸಹೋದರ ಭಾರಿ ಶಬ್ದವನ್ನು ಕೇಳಿದರು. ಇದ್ದಕ್ಕಿದ್ದಂತೆ ಫೋನ್​ ಸಂಪರ್ಕ ಕಡಿತಗೊಂಡಿತು. ತಕ್ಷಣ ನಾವು ಅಲ್ಲಿಯೇ ಕೆಲಸದ ನಿಮಿತ್ತ ವಾಸವಿದ್ದ ಇತರೆ ಮಲಯಾಳಿಗಳನ್ನು ಸಂಪರ್ಕಿಸಿದೆವು. ಆ ಬಳಿಕ ಈ ದುರ್ಘಟನೆ ನಮಗೆ ತಿಳಿಯಿತು ಎಂದಿದ್ದರು.

    ಸೌಮ್ಯ ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದವರು. ಕಳೆದ 7 ವರ್ಷಗಳಿಂದ ಇಸ್ರೇಲ್​ನಲ್ಲಿ ಮನೆ ಕೆಲಸ ಮಾಡುತ್ತಿದ್ದರು ಎಂದು ಅವಳ ಸಂಬಂಧಿಕರು ಹೇಳಿದ್ದಾರೆ.

    ಕಳೆದ ಒಂದು ವಾರದಿಂದ ಇಸ್ರೇಲ್​ ಹಾಗೂ ಪ್ಯಾಲೇಸ್ಟಿನಿಯನ್​ ಬಂಡುಕೋರರ ನಡುವಿನ ಸಂಘರ್ಷ ತೀವ್ರವಾಗಿದ್ದು, ಗಾಜಾ ತತ್ತರಿಸಿ ಹೋಗಿದೆ. (ಏಜೆನ್ಸೀಸ್​)

    ಅಮೇಜಾನ್​ನಲ್ಲಿ ಮೌಥ್​ವಾಶ್​ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಕಾದಿತ್ತು ಬಿಗ್​ ಸರ್ಪ್ರೈಸ್​..!

    ಬ್ಲ್ಯಾಕ್ ಫಂಗಸ್ ಚಿಕಿತ್ಸೆ ದುಬಾರಿ!; ರೋಗಕ್ಕೆ ತುತ್ತಾದರೆ 3 ತಾಸು ಶಸ್ತ್ರಚಿಕಿತ್ಸೆ, 2 ಲಕ್ಷ ರೂಪಾಯಿ ಖರ್ಚು!

    https://www.vijayavani.net/children-are-the-target-in-third-wave/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts