More

    ಅಧಿಕೃತ ಕಾರ್ಯಕ್ರಮಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್​ ಡೂಪ್​?

    ಮಾಸ್ಕೋ: ರಷ್ಯಾದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡೂಪ್​(ಬಾಡಿ ಡಬಲ್ಸ್‌) ಬಳಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಊಹಾಪೋಹಗಳನ್ನು ಕ್ರೆಮ್ಲಿನ್(ಅಧ್ಯಕ್ಷ ಭವನವಿರುವ ಸ್ಥಳ) ತಳ್ಳಿಹಾಕಿದೆ.

    ಇದನ್ನೂ ಓದಿ: ಬಿಹಾರದಲ್ಲೂ ದಾಖಲೆ ಪ್ರಮಾಣದಲ್ಲಿ ವಾಯು ಮಾಲಿನ್ಯ: ಬೇಗುಸರಾಯ್‌ನಲ್ಲಿ ಎಕ್ಯೂಐ -363 ದಾಖಲು
    ಕ್ರೆಮ್ಲಿನ್​ ಅಧ್ಯಕ್ಷರ ವಕ್ತಾರ ಡಿಮಿತ್ರಿಪೆಸ್ಕೋವ್ ಇತಹ ವಾದಗಳನ್ನು “ರಂಜನೀಯ”ಕ್ಕಾಗಿ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಶನಿವಾರ ಮಾಸ್ಕೋದಲ್ಲಿ ಪ್ರಾರಂಭವಾದ ರಷ್ಯಾ ಪ್ರದರ್ಶನದಲ್ಲಿ ಮಾತನಾಡಿದ ಪೆಸ್ಕೋವ್ “ನಮ್ಮಲ್ಲಿ ಒಬ್ಬ ಪುಟಿನ್ ಮಾತ್ರ ಇದ್ದಾರೆ. ಬಾಡಿ ಡಬಲ್ಸ್​ ಎಂದು ಬರುತ್ತಿರುವ ಅನಿಸಿಕೆಗಳು ಹಾಸ್ಯಾಸ್ಪದವಾಗಿವೆ” ಎಂದು ಊಹಾಪೋಹಗಳಿಗೆ ತೆರೆ ಎಳೆದರು.

    ವಿವಿಧ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ರಷ್ಯಾದ ಅಧ್ಯಕ್ಷರ ದೇಹವು ಡಬಲ್ಸ್ ಎಂದು ಹೇಳಲಾದ ವದಂತಿಗಳನ್ನು ಅಂತರ್ಜಾಲದಲ್ಲಿ ನಿಪುಣರು ಎನಿಸಿಕೊಂಡವರು ಹಬ್ಬಿಸುತ್ತಿದ್ದಾರೆ. ಕೆಲವರು ಪುಟಿನ್​ ರೂಪಗಳನ್ನು ಲೆಕ್ಕಕ್ಕೆ ಮೀರಿ ಸೃಷ್ಟಿಸುತ್ತಿದ್ದಾರೆ ಎಂದರು.

    ರಷ್ಯಾ ಅಧ್ಯಕ್ಷರ ಬಾಡಿ ಡಬಲ್ಸ್​ನ್ನು ಕೆಲವು ವಿದೇಶ ಪ್ರವಾಸ, ಬಹಿರಂಗ ಕಾರ್ಯಕ್ರಮಗಳಿಗೂ ಬಳಸಲಾಗಿತ್ತು ಎಂದು ವಾರಪತ್ರಿಕೆಯೊಂದು ವರದಿ ಮಾಡಿತ್ತು. ಅದೇ ರೀತಿ ಜಪಾನ್​ನ ಟಿವಿ ಸಹ ಇದೇ ವಿಯವನ್ನು ಪ್ರಸ್ತಾಪಿಸಿತ್ತು. ಉಕ್ರೇನ್​ ಸೇನಾ ಇಂಟಿಲಿಜೆನ್ಸ್​ ಮುಖ್ಯಸ್ಥ ಕಿರಿಲ್​ ಬುಡನೋವ್​ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು.

    ಪುಟಿನ್​ ‘ಲುಕ್​-ಅಲೈಕ್’ ಬಂದ ಹಲವು ಅಭಿಪ್ರಾಯಗಳು ಅನಗತ್ಯವಾದವು. ನಮ್ಮ ನಾಯಕ “ಕೆಲಸ ಮಾಡಲು ಅದ್ಭುತ ಫಿಟ್‌ನೆಸ್” ಹೊಂದಿದ್ದಾರೆ ಮತ್ತು ನಾನ್​ಸ್ಟಾಪ್​ ಆಗಿ ಸಹ ಹಲವು ದಿನಗಳವರೆಗೆ ಒಂದೇ ಸಮನೆ ಕೆಲಸ ಮಾಡಬಲ್ಲರು ಎಂದು ಡಿಮಿತ್ರಿಪೆಸ್ಕೋವ್ ಹೇಳಿದ್ದಾರೆ.

    ಪ್ರಧಾನಿ ಮೋದಿ ನಂತರ ಎಕ್ಸ್‌ನಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts