More

    ಯೂಕ್ರೇನ್​ನಲ್ಲಿ ಮೃತಪಟ್ಟ ನವೀನ್ ಅಂತಿಮ ದರ್ಶನಕ್ಕೆ ಅವಕಾಶ, ದೇಹದಾನ ಮಾಡಲು ನಿರ್ಧಾರ..

    ಹಾವೇರಿ: ಯೂಕ್ರೇನ್​ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗಿ ಮೃತಪಟ್ಟ ಕನ್ನಡಿಗ, ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಪಾರ್ಥಿವ ಶರೀರ, ಅವರು ಸಾವಿಗೀಡಾದ 20 ದಿನಗಳ ಬಳಿಕ ಹುಟ್ಟೂರಿಗೆ ತಲುಪಲಿದೆ. ಅಂದರೆ ಮಾ. 21ರ ಸಂಜೆಯ ಸುಮಾರಿಗೆ ಹಾವೇರಿಗೆ ಬರಲಿದೆ.

    ತಮ್ಮ ಪುತ್ರನ ಪಾರ್ಥಿವ ಶರೀರ ಹುಟ್ಟೂರು ರಾಣೆಬೆನ್ನೂರ ತಾಲೂಕಿನ ಚಳಗೇರಿಗೆ ತಲುಪಲಿರುವ ಕುರಿತು ಆತನ ತಂದೆ ಶೇಖರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಸಂಜೆ ನವೀನ ಪಾರ್ಥಿವ ಶರೀರ ಬರಲಿದೆ. ಅಂದು ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಳಿಕ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಪೂಜೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ನವೀನ್​ಗೆ ಡಾಕ್ಟರ್ ಆಗಬೇಕೆಂಬ ಕನಸು ಇತ್ತು. ಹೀಗಾಗಿ ಅವನ ಪಾರ್ಥಿವ ಶರೀರವನ್ನು ದಾವಣಗೆರೆಯ ಎಸ್​ಎಸ್​ ಆಸ್ಪತ್ರೆಗೆ ದಾನ ಮಾಡಲಾಗುವುದು. ವೈದ್ಯಕೀಯ ವಿದ್ಯಾಭ್ಯಾಸದ ಬೇರೆ ವಿದ್ಯಾರ್ಥಿಗಳು ಆ ದೇಹವನ್ನು ಅಧ್ಯಯನ ಮಾಡುವ ಮೂಲಕವಾದರೂ ಆತನ ಆಸೆ ಈಡೇರಲಿ ಎಂದು ತಂದೆ ಅಭಿಪ್ರಾಯ ಪಟ್ಟಿದ್ದಾರೆ.
    ಇಂದು ನನ್ನ ಜೊತೆ ಮುಖ್ಯಮಂತ್ರಿಯವರು ಮಾತನಾಡಿ, ನವೀನ್ ಪಾರ್ಥಿವ ಶರೀರ ತರುವ ಕುರಿತು ತಿಳಿಸಿದರು. ಆ ಸಂದರ್ಭದಲ್ಲಿ ವಿಮಾನನಿಲ್ದಾಣದಲ್ಲಿ ಹಾಜರಿರುವ ಜತೆಗೆ, ಊರಿಗೂ ದರ್ಶನ ಪಡೆಯಲು ಬರುವುದಾಗಿ ಹೇಳಿದರು ಎಂದು ಶೇಖರಪ್ಪ ತಿಳಿಸಿದ್ದಾರೆ.

    ನಾವು ದುಃಖದಲ್ಲಿದ್ದಾಗ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸ್ವಾಮೀಜಿಗಳು ಸೇರಿ ನಾಡಿನ ಹಲವರು ಧೈರ್ಯ ಹೇಳಿದ್ದರು. ನಾವು ಅವರೆಲ್ಲರಿಗೂ ಆಭಾರಿ ಎಂದು ನವೀನ್ ತಂದೆ ತಿಳಿಸಿದರು. ಮರಳಿ ಮಣ್ಣಿಗೆ ಎನ್ನುವಂತೆ ಮಗ ಹುಟ್ಟೂರಿಗೆ ಬರುತ್ತಿದ್ದಾನೆ. ಪ್ರಧಾನಿ, ಸಿಎಂ, ಮಾಧ್ಯಮ ಹಾಗೂ ಹಲವರ ಸಹಾಯದಿಂದ ಇದು ಸಾಧ್ಯವಾಗಿದೆ ಎಂದು ನವೀನ್ ತಾಯಿ ವಿಜಯಲಕ್ಷ್ಮೀ ತಿಳಿಸಿದರು.

    ಹೋಳಿ ಆಡಲು ಹೋದವನಿಗೆ ಶಾಕ್​; ಆಟಕ್ಕೂ ಮುನ್ನ ಪ್ರಾಣ ಕಳೆದುಕೊಂಡ ಬಾಲಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts