More

    ಸೆಲ್ಫಿಗೆ ಫೋಸ್​ ಕೊಡಲು ಹೋಗಿ ಅಪ್ಪ ಮಗನ ಸಾವು!

    ಮುಂಬೈ: ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿಗೆ ಫೋಸ್​ ಕೊಡುವುದು ಅದೆಷ್ಟು ಡೇಂಜರಸ್​ ಎನ್ನುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೂ ಸೆಲ್ಫಿ ಪ್ರಿಯರ ಸಂಖ್ಯೆಯೇನು ಕಡಿಮೆಯಾಗಿಲ್ಲ. ನದಿಯೊಂದರಲ್ಲಿ ದೋಣಿ ವಿಹಾರಕ್ಕೆ ಹೋದ ಕುಟುಂಬದ ಅಪ್ಪ ಮಗ ಸೆಲ್ಫಿಗೆ ಫೋಸ್​ ಕೊಡಲು ಹೋಗಿ ನೀರಿನಲ್ಲಿ ಮುಳುಗಿ ಸತ್ತಿರುವ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ.

    ಆ ಕುಟುಂಬ ದೋಣಿ ವಿಹಾರಕ್ಕೆಂದು ಉಜನಿ ಹಿನ್ನೀರನ ಬಳಿ ತೆರಳಿತ್ತು. ಗಂಡ, ಹೆಂಡತಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಸ್ನೇಹಿತರು ಸೇರಿ ಒಟ್ಟು ಆರು ಮಂದಿ ಒಂದು ದೋಣಿಯಲ್ಲಿ ಕುಳಿತುಕೊಂಡು ದೋಣಿ ವಿಹಾರ ಆರಂಭಿಸಿದ್ದಾರೆ. ದೋಣಿಯಲ್ಲಿ ಕುಳಿತುಕೊಂಡು ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಾ ದೋಣಿಯ ತುದಿಗೆ ಹೋಗಿದ್ದಾರೆ. ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ದೋಣಿಯ ನಿಯಂತ್ರಣ ತಪ್ಪಿದ್ದು, ಅದು ಮಗಚಿದೆ. ಆರೂ ಮಂದಿ ನೀರಿನೊಳಗೆ ಬಿದ್ದಿದ್ದಾರೆ.

    ದೋಣಿ ನೀರಿನಲ್ಲಿ ಮಗಚಿದ್ದನ್ನು ಕಂಡು ಅಲ್ಲೇ ಹತ್ತಿರವಿದ್ದ ಮೀನುಗಾರರು ನೀರಿಗೆ ಧುಮುಕಿ, ರಕ್ಷಣೆಗೆ ಮುಂದಾಗಿದ್ದಾರೆ. ಆರರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಆದರೆ ಅದರಲ್ಲಿದ್ದ 13 ವರ್ಷದ ಮಗ ಮತ್ತು 49 ವರ್ಷದ ಅಪ್ಪನನ್ನು ದಡಕ್ಕೆ ತರುವುದರಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)

    ‘ಮಕ್ಕಳನ್ನು ಹೆತ್ತವರು ನೀವು, ಸರ್ಕಾರ ಅವರ ಖರ್ಚು ಭರಿಸಬೇಕಾ? ಬೇಕಿದ್ದರೆ ಸರ್ಕಾರಿ ಶಾಲೆಗೆ ಕಳುಹಿಸಿ’

    1.1 ಲಕ್ಷ ರೂಪಾಯಿಯ ಆ್ಯಪಲ್​ ಐಫೋನ್​ ಆರ್ಡರ್​ ಮಾಡಿದವಳಿಗೆ ಬಂದಿದ್ದು ಆ್ಯಪಲ್​ ಜ್ಯೂಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts