More

    ಗಂಗಾನದಿಯಲ್ಲೊಂದು ಭಾರಿ ಶಾಕ್​; 30ಕ್ಕೂ ಅಧಿಕ ಮಂದಿಗೆ ಗಾಯ, ಸುಮಾರು 20 ಜನ ನಾಪತ್ತೆ!

    ಬಿಹಾರ: ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ರಾತ್ರಿ ಗಂಗಾ ನದಿಯಲ್ಲೊಂದು ಭಾರಿ ಶಾಕ್​ ಉಂಟಾಗಿದೆ. ಅಂದರೆ ಸುಮಾರು ನೂರೈವತ್ತು ಜನರಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಸಾಗುತ್ತಿದ್ದಾಗ ಹೈಟೆನ್ಷನ್​ ವಯರ್​ ಸಂಪರ್ಕಕ್ಕೆ ಬಂದಿದ್ದು, ತತ್ಪರಿಣಾಮವಾಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸುಮಾರು 20 ಜನರು ನಾಪತ್ತೆ ಆಗಿದ್ದಾರೆ.

    ಪಾಟ್ನಾ ಗ್ರಾಮೀಣ ಭಾಗದ ಫಟುವದಲ್ಲಿ ಕಾಛಿ ದರ್ಗಾ ಘಾಟ್​ ಎಂಬಲ್ಲಿಂದ ನಿನ್ನೆ ರಾತ್ರಿ 8ಕ್ಕೆ ಈ ಬೋಟ್ ಹೊರಟಿದ್ದು, ವೈಶಾಲಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಬೋಟ್​ನಲ್ಲಿದ್ದವರೆಲ್ಲ ದಿನಗೂಲಿಗಳಾಗಿದ್ದು, ಪಾಟ್ನಾ ಮತ್ತು ಮೊಕಮಾಗೆ ಬೆಳಗ್ಗೆ ಬಂದಿದ್ದ ಅವರನ್ನು ಮರಳಿ ಕರೆದೊಯ್ಯುವಾಗ ಅನಾಹುತ ಸಂಭವಿಸಿದೆ.

    ಇದನ್ನೂ ಓದಿ: ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

    ಹೀಗೆ ಹೊರಟಿದ್ದ ಬೋಟ್ ನದಿ ಮಧ್ಯೆ ಹೈಟೆನ್ಷನ್ ವಯರ್​ಗೆ ತಾಗಿದ್ದು, ತಕ್ಷಣ ಮೂವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಜೊತೆಗೆ ಹಲವರು ನದಿಗೆ ಬಿದ್ದಿದ್ದು, ಅವರು ನಾಪತ್ತೆಯಾಗಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ಗಂಗಾ ನದಿ ತುಂಬಿ ಹರಿಯುತ್ತಿದ್ದು, ಜನಜೀವನ ಈಗಾಗಲೇ ಅದರಿಂದಾದ ಸಂಕಷ್ಟಕ್ಕೆ ಒಳಗಾಗಿದೆ. ದುರಂತಕ್ಕೀಡಾದ 38 ಜನ ಪಾರಾಗಿದ್ದು, ಉಳಿದವರ ರಕ್ಷಣಾ ಹಾಗೂ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. (ಏಜೆನ್ಸೀಸ್)

    ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

    ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts