More

    ಸದ್ಯದಲ್ಲೇ ರಸ್ತೆಗಿಳಿಯಲಿದೆ, ಬಟನ್ ಒತ್ತಿದರೆ ಬಣ್ಣ ಬದಲಿಸುವ BMW ಕಾರು! ವಿಡಿಯೋ ವೈರಲ್…

    ಜನವರಿ 5 ರಂದು, ಲಾಸ್ ವೇಗಾಸ್‌ನಲ್ಲಿ ಬಿಎಂಡಬ್ಲ್ಯೂ ಸಂಸ್ಥೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಹೊಸ ಕಾರುಗಳನ್ನು ಪ್ರದರ್ಶಿಸಿದೆ. ಅದರಲ್ಲಿ, ವೀಕ್ಷಕರ ಹುಬ್ಬೇರಿಸಿದ ಕಾರು ಅಂದರೆ ಬಣ್ಣ ಬದಲಾಯಿಸುವ ಕಾರು. ಇದಿಷ್ಟೇ ಅಲ್ಲದೇ, ಈ ಕಾರು ಹಿಂಬದಿಯ ಪ್ರಯಾಣಿಕರಿಗಾಗಿ ಹೆಡ್‌ಲೈನರ್‌ನಿಂದ ವಿಸ್ತರಿಸುವ 32-ಇಂಚಿನ ಸಿನಿಮಾ ಪರದೆಯನ್ನು ಹೊಂದಿದೆ. ಹೌದು, BMW iX ಒಂದು ಉನ್ನತಮಟ್ಟದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ವಾಹನವಾಗಿದೆ. BMW iX ನ ಮತ್ತೊಂದು ಆವೃತ್ತಿಯೇ BMW iX ಫ್ಲೋ. ಈ ಕಾರಿನಲ್ಲಿ ಕೇವಲ ಒಂದೇ ಒಂದು ಬಟನ್ ಮೂಲಕ ಕಾರಿನ ಹೊರಬಾಗದ ಬಣ್ಣವು ಬದಲಾಗತ್ತೆ. ಹೀಗೆ, ಬಣ್ಣ ಬದಲಾಯಿಸುವ ವಿಶ್ವದ ಮೊದಲ ಕಾರು ಎಂದು BMW iX ಫ್ಲೋ ಅನಿಸಿಕೊಂಡಿದೆ.

    ಸದ್ಯದಲ್ಲೇ ರಸ್ತೆಗಿಳಿಯಲಿದೆ, ಬಟನ್ ಒತ್ತಿದರೆ ಬಣ್ಣ ಬದಲಿಸುವ BMW ಕಾರು! ವಿಡಿಯೋ ವೈರಲ್...

    ಎಲೆಕ್ಟ್ರಿಕಲ್ ಸಿಗ್ನಲ್‌ಗಳಿಂದ ಮತ್ತು ಎಲೆಕ್ಟ್ರೋಫೋರೆಟಿಕ್ ತಂತ್ರಜ್ಞಾನದಿಂದ ಕಾರು ಬಣ್ಣವನ್ನು ಬದಲಾಯಿಸುತ್ತಂತೆ. BMW iX ಫ್ಲೋ ಕಾರು ಕಪ್ಪು ಮತ್ತು ಬಿಳಿ ಬಣ್ಣಗಳಿಗೆ ಬದಲಾಗುತ್ತೆ. ಅಥವಾ ಗ್ರಾಫಿಕ್ಸ್ ಕೆಲಿಡೋಸ್ಕೋಪ್ನ ರೀತಿಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳಿಗೆ ಬದಲಾವಣೆಯಾಗುತ್ತದೆ. ಈ ಬಣ್ಣ ಬದಲಾಯಿಸುವ ತಂತ್ರಜ್ಞಾನದ ಕುರಿತು ವಾಹನ ತಯಾರಕರು ಯಾವುದೇ ಇತರ ವಿವರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ.
    ಆದರೆ ಟ್ವಿಟರ್ ಬಳಕೆದಾರರು, ಸದ್ಯ ಈ ಬಣ್ಣ ಬದಲಾಯಿಸುವ BMW iX ಫ್ಲೋ ಕಾರಿನ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, BMW iX ಮೊದಲು ಬೂದುಬಣ್ಣದ ಸರಳ ಛಾಯೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಬಟನ್ ಆನ್ ಮಾಡಿದ ಕೂಡಲೆ ಇದ್ದಕ್ಕಿದ್ದಂತೆ ಬಿಳಿ ಬಣ್ಣಕ್ಕೆ ಕಾರು ಪರಿವರ್ತನೆಗೊಳ್ಳುತ್ತದೆ. ಈಗ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 2025ಕ್ಕೆ ರಿಲೀಸ್ ಆದಾಗ ಈ ಕಾರಿನ ಬೆಲೆ ಮಿನಿಮಮ್ 2 ರಿಂದ 3 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. 

    ರಾಜಮೌಳಿಗೆ ಹೊಸ ತಲೆನೋವು ತಂದಿಟ್ಟ ಲೇಡಿ! ರಿಲೀಸ್​ಗೂ ಮುನ್ನ ಕೋರ್ಟ್ ಮೆಟ್ಟಿಲೇರಿದ RRR

    ಅಪ್ಪು ಹಾಡಿದ ಮತ್ತೊಂದು ಹೊಸ ಹಾಡು ರಿಲೀಸ್! ಭಾವುಕರಾದ ಅಭಿಮಾನಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts