More

    50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ: ಇನ್ನೊಂದು ಇಲಾಖೆ ಸೇರ್ಪಡೆ

    ಬೆಂಗಳೂರು: ಕರೊನಾ ವೈರಸ್‌ ಭೀತಿಯೀಗ ಎಲ್ಲೆಡೆ ಜೋರಾಗಿದೆ. ಬರುವ ದಿನಗಳಲ್ಲಿ ಇದು ಇನ್ನೂ ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಇದಾಗಲೇ ತಜ್ಞರು ಹೇಳಿದ್ದಾರೆ.
    ಇದಾಗಲೇ ಪೊಲೀಸ್ ಇಲಾಖೆಯಲ್ಲಿ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಕಡ್ಡಾಯ ರಜೆ ನೀಡಲಾಗಿದೆ. ಇದೇ ಮಾರ್ಗವನ್ನು ಇದೀಗ ಸಾರಿಗೆ ಇಲಾಖೆಯೂ ಅನುಸರಿಸಿದೆ. ಈ ವೈರಸ್‌ ಹೆಚ್ಚಾಗಿ 50 ವರ್ಷ ಮೇಲ್ಪಟ್ಟವರಿಗೆ ಬಹುಬೇಗನೆ ತಗಲುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ 9,500 ಮಂದಿಗೆ ಕಡ್ಡಾಯ ರಜೆ ಪಡೆಯುವಂತೆ ತಿಳಿಸಲಾಗಿದೆ.

    ಬಿಎಂಟಿಸಿ, ಕೆಎಸಆರ್‌ಟಿಸಿ, ವಾಯವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಿಬ್ಬಂದಿ ಇದರಲ್ಲಿ ಒಳಗೊಂಡಿದ್ದು, ಎಲ್ಲರಿಗೂ ಕಡ್ಡಾಯ ರಜೆ ಘೋಷಣೆ ಮಾಡಲಾಗಿದೆ. ಇವರಲ್ಲಿ ಕೆಳಹಂತದ ನೌಕರರಿಂದ ಹಿಡಿದು ಅಧಿಕಾರಿಗಳ ಮಟ್ಟದವರೆಗಿನ ಸಿಬ್ಬಂದಿಯೂ ಸೇರಿದ್ದಾರೆ. ಇಲಾಖೆಯಲ್ಲಿ ಸದ್ಯ 32 ಸಾವಿರ ಮಂದಿ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಇವರ ಪೈಕಿ ಹೆಚ್ಚಿನವರು ಡ್ರೈವರ್‌ ಮತ್ತು ಕಂಡಕ್ಟರ್‌ಗಳೇ ಆಗಿದ್ದಾರೆ.

    ಇದನ್ನೂ ಓದಿ: ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’

    ವಯಸ್ಸಾದವರಿಗೆ ಸೋಂಕು ತಗುಲಿದರೆ ಅಂಥವರು ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಇರುವ ಸಿಬ್ಬಂದಿಯೇ ಸಂಸ್ಥೆಯನ್ನು ಮುನ್ನೆಡೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ ಎಂಬ ಕಾರಣವನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ, ಕರೊನಾ ವೈರಸ್‌ ಭೀತಿಯಿಂದ ಜನರು ಬಸ್‌ಗಳಲ್ಲಿ ಪ್ರಯಾಣ ಮಾಡುವುದೂ ಕಷ್ಟವಾಗಿರುವ ಕಾರಣ, ಸಾರಿಗೆ ಇಲಾಖೆ ಸಾಕಷ್ಟು ಸಂಕಷ್ಟದಲ್ಲಿಯೂ ಇದೆ.

    ಲಾಕ್‍ಡೌನ್ ಸಡಿಲಿಕೆಯಾದ ನಂತರ ಸಾರಿಗೆ ಸಂಚಾರವನ್ನು ಆರಂಭಿಸಿದರೂ ಪ್ರಯಾಣಿಕರಿಂದ ಅಷ್ಟಾಗಿ ಪ್ರತಿಕ್ರಿಯೆ ಬರುತ್ತಿಲ್ಲ. ಲಾಕ್‌ಡೌನ್‌ ಸಡಿಲಿಕೆ ಆರಂಭದಲ್ಲಿ ಜನರು ರಶ್‌ ಆಗಿದ್ದರೂ ನಂತರ ಪ್ರಯಾಣಿಸಲು ಹೆದರುತ್ತಿದ್ದಾರೆ. ಆದ್ದರಿಂದ ಸಂಸ್ಥೆಗೆ ಆದಾಯ ಇಲ್ಲದೆ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಿಬ್ಬಂದಿ ಕಡಿತಕ್ಕೆ ಕಾರಣ ಎನ್ನಲಾಗುತ್ತಿದೆ.

    ಸ್ವತಃ ಸಾರಿಗೆ ಸಚಿವರೇ ತಡೆ ಹಿಡಿದಿದ್ದ 200 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ. ಇದಾಗಲೇ ಕೆಲವು ವಿಮಾನಯಾನ ಸಂಸ್ಥೆಗಳೂ ಸಿಬ್ಬಂದಿಗೆ ರಜೆ ಮೇಲೆ ಕಳುಹಿಸಿದೆ. (ಏಜೆನ್ಸೀಸ್‌)

    188 ವರ್ಷದ ‘ಅಜ್ಜ’ನ ಸ್ನಾನ ನೋಡಿ… ದಾಖಲೆ ಪುಟದಲ್ಲಿ ದೀರ್ಘಾಯಸ್ಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts