More

    ಬಿಎಂಟಿಸಿ ಹೊಸ ಆದೇಶ: ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಇಲ್ಲಿದೆ

    ಬೆಂಗಳೂರು: ಇನ್ನುಂದೆ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಒಂದು ವೇಳೆ ಟಿಕೆಟ್ ತೆಗೆದುಕೊಳ್ಳದೇ, ‘ನಿರ್ವಾಹಕ ನನ್ನನ್ನು ಟಿಕೆಟ್ ಕೇಳಿಲ್ಲ’ ಎನ್ನುವ ಹಾಗೇ ಇಲ್ಲ.

    ಹೌದು ಈ ಬಗ್ಗೆ ಬಿಎಂಟಿಸಿ ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ಪ್ರಯಾಣಿಕರ ತಪ್ಪಿಗೆ ಕಂಡಕ್ಟರ್ಸ್ ಹೊಣೆಯಲ್ಲ. ಪ್ರಯಾಣಿಕರೇ ಕಂಡಕ್ಟರ್ಸ್ ಗಳನ್ನು ಹುಡುಕಿ ಟಿಕೆಟ್ ಪಡೆಯಬೇಕು‌. ಈ ಹಿನ್ನೆಲೆಯಲ್ಲಿ ದಂಡ, ಶಿಕ್ಷೆಯಿಂದ ಕಂಡಕ್ಟರ್ ಗಳಿಗೆ ವಿನಾಯಿತಿ ನೀಡಲಾಗಿದೆ.

    ಸೀಟುಗಳ ಲಭ್ಯತೆ ಮೀರಿ ಜನ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದರೇ ಮಾತ್ರ ಈ ನಿಯಮ ಅನ್ವಯವಾಗಲಿದೆ. ಮೂರು ಬಾರಿ ಮಾತ್ರ ಕಂಡಕ್ಟರ್​ಗೆ ವಿನಾಯಿತಿ ಇರಲಿದೆ. ಇದು ಹವಾನಿಯಂತ್ರಿತ ಬಸ್​ಗಳಿಗೆ ಅನ್ವಯವಾಗುವುದಿಲ್ಲ. ಇದೇ ಮಾರ್ಚ್ 15 ರಿಂದ ಈ ಆದೇಶ ಜಾರಿಗೆ ಬರಲಿದೆ.

    ಜನಸಂದಣಿಯ ಬಸ್​ಗಳಲ್ಲಿ ಕೆಲವೊಬ್ಬರು ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್​ಗೆ ವಂಚಿಸುತ್ತಿದ್ದರು. ಹೀಗಾಗಿ ಬಿಎಂಟಿಸಿ ಅಧಿಕಾರಿಗಳು ಕಂಡಕ್ಟರ್​​ನ್ನೂ ಹೊಣೆಗಾರರನ್ನಾಗಿ ಮಾಡಿ ಅವರಿಗೆ ಶಿಕ್ಷೆ ನೀಡುತ್ತಿದ್ದರು. ಈ ನಿಯಮ ಸರಿ ಇಲ್ಲ ಬದಲಾಯಿಸಿ ಎಂದು ಬಿಎಂಟಿಸಿ ಕಾರ್ಮಿಕ ಯೂನಿಯನ್​ಗಳು ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಎಂಡಿ ಸಿ ಶಿಕಾ ಈ ಆದೇಶ ಮಾಡಿದ್ದಾರೆ.

    ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ ಸರ್ಕಾರಿ ಉದ್ಯೋಗಿ: ಇಂಧನ ದರ ಏರಿಕೆ ಕಾರಣವಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts