More

    ಬಿಎಂಟಿಸಿ ಬಸ್ ಸಂಚಾರ ಅವಧಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ವಿಸ್ತರಣೆ?

    ಬೆಂಗಳೂರು: ಬಸ್ ಪ್ರಯಾಣದರದಲ್ಲಿ ಬದಲಾವಣೆ ಮಾಡಿರುವ ಬಿಎಂಟಿಸಿ ಈಗ ಬಸ್​ಗಳ ಸಂಚಾರದ ಅವಧಿ ಹೆಚ್ಚಿಸಲು ಪೊಲೀಸ್ ಇಲಾಖೆ ಅನುಮತಿ ಕೋರಿದೆ. ಕರೊನಾ ಸೋಂಕಿನ ಭಯದಿಂದ ಟಿಕೆಟ್ ನೀಡಿಕೆ ರದ್ದು ಮಾಡಿದ್ದ ಬಿಎಂಟಿಸಿ, ದಿನದ, ವಾರದ ಅಥವಾ ಮಾಸಿಕ ಪಾಸ್ ಖರೀದಿಸಿ ಬಸ್​ಗಳಲ್ಲಿ ಸಂಚರಿಸುವುದನ್ನು ಕಡ್ಡಾಯವಾಗಿಸಿತ್ತು. ಇದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಈ ಮೊದಲಿನಂತೆ ಬಸ್​ಗಳಲ್ಲಿಯೇ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

    ಇದನ್ನೂ ಓದಿ: ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

    ಸಮಯದ ಅಭಾವ: ಸರ್ಕಾರದ ಆದೇಶದಂತೆ ಬಿಎಂಟಿಸಿ ಬಸ್​ಗಳು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಸಂಚರಿಸಬೇಕು. ಆದರೆ, ಬಸ್​ಗಳು ಬೆಳಗ್ಗೆ ಡಿಪೋದಿಂದ ನಿಲ್ದಾಣಗಳಿಗೆ ಬರುವಾಗ 30 ನಿಮಿಷ ತಡವಾಗುತ್ತಿದೆ. ಅದೇ ರೀತಿ ರಾತ್ರಿ 7 ಗಂಟೆಯೊಳಗೆ ಚಾಲಕರು, ನಿರ್ವಾಹಕರು ಮನೆಗೆ ಸೇರಬೇಕಿರುವ ಕಾರಣ ಸಂಜೆ 6 ಗಂಟೆಗೆ ಬಸ್ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಬೆಳಗ್ಗೆ 6ಕ್ಕೆ ಸೇವೆ ಆರಂಭಿಸಿ ರಾತ್ರಿ 8 ಗಂಟೆಗೆ ಮುಕ್ತಾಯಗೊಳಿಸಲು ಅನುಮತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ.

    ಇದನ್ನೂ ಓದಿ: ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ

    ಅನುಮತಿ ನಂತರ ಕ್ರಮ: 20ರಂದೇ ಸಲ್ಲಿಕೆಯಾಗಿರುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದ್ದು, ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಆಯುಕ್ತರು ರ್ಚಚಿಸಬೇಕಿದೆ. ಅಲ್ಲದೆ, ಸದ್ಯ ಹೇರಲಾಗಿರುವ ನಿಷೇಧಾಜ್ಞೆಯಲ್ಲಿ ಬಿಎಂಟಿಸಿ ಬಸ್​ಗಳ ಸಂಚಾರದ ಅವಧಿ ಬದಲಿಸಬೇಕಿದೆ. ಈ ಎಲ್ಲ ಕ್ರಮಗಳ ನಂತರ ನಗರ ಪೊಲೀಸ್ ಆಯುಕ್ತರಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ.

    ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ

    ಪ್ರಯಾಣಿಕರು ಹೆಚ್ಚಳ 

    ಈವರೆಗೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಮಂಗಳವಾರ ಟಿಕೆಟ್ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಮಧ್ಯಾಹ್ನದ ವೇಳೆಯೂ ಬಸ್​ಗಳು ಪ್ರಯಾಣಿಕರಿಂದ ತುಂಬಿದ್ದವು.

    ಬಸ್​ಗಳ ಕೊರತೆ: ಮಂಗಳವಾರ 3,500 ಬಸ್​ಗಳ ಸಂಚಾರಕ್ಕೆ ಬಿಎಂಟಿಸಿ ನಿರ್ಧರಿಸಿತ್ತು. ಆದರೆ, ಬೆಳಗ್ಗೆ 10 ಗಂಟೆವರೆಗೆ ನಿಗದಿಯಷ್ಟು ಬಸ್​ಗಳು ಸಂಚರಿಸದೆ ಪ್ರಯಾಣಿಕರು ಪರದಾಡಿದರು. ಕೇಂದ್ರನಿಲ್ದಾಣದಲ್ಲಿ ಬೆಳಗ್ಗೆ ಬಸ್​ಗಳಿಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ನಿಲ್ದಾಣಕ್ಕೆ ಧಾವಿಸಿ ಹೆಚ್ಚಿನ ಬಸ್​ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಇದನ್ನೂ ಓದಿ: ರಾಜ್ಯ ಪೊಲೀಸ್ ಶ್ವಾನ ದಳ ಬಲವರ್ಧನೆ

    93 ಸಾವಿರ ಜನರ ಸಂಚಾರ: ಕೆಎಸ್ಸಾರ್ಟಿಸಿ ಸೇವೆ ಪುನರಾರಂಭವಾದ ನಂತರದಿಂದ ಈವರೆಗಿನ ಅಂಕಿ-ಅಂಶದಂತೆ ಮಂಗಳವಾರ ಅತಿಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. 3,171 ಬಸ್​ಗಳ ಮೂಲಕ 93,700 ಜನರು ವಿವಿಧ ನಗರಗಳಿಗೆ ಬಸ್​ಗಳ ಮೂಲಕ ತೆರಳಿದ್ದಾರೆ. ಮೇ 19ರಿಂದ ಈವರೆಗೆ 18,409 ಬಸ್​ಗಳು ಕಾರ್ಯಾಚರಣೆಗೊಂಡಿದ್ದು ಒಟ್ಟು 5.55 ಲಕ್ಷ ಜನರು ಬಸ್ ಸೇವೆ ಪಡೆದಿದ್ದಾರೆ. ಅದರಲ್ಲಿ ಬೆಂಗಳೂರಿನಿಂದಲೇ 5,032 ಬಸ್​ಗಳ ಮೂಲಕ 82 ಸಾವಿರ ಜನ ವಿವಿಧ ಕಡೆಗೆ ಪ್ರಯಾಣಿಸಿದ್ದಾರೆ.

    ಸತ್ತವ ಎದ್ದು ಬಂದ; ಮತ್ತೆ ಸತ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts