More

    ಬೆಂಗಳೂರಿನಲ್ಲಿ ಮೆಟ್ರೋ ರೈಲು ಪುನರಾರಂಭಿಸಲು ಬಿಎಂಆರ್‌ಸಿಎಲ್ ಸರ್ವಸನ್ನದ್ಧ

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕಳೆದ ಸುಮಾರು ಎರಡು ತಿಂಗಳಿಂದ ಸ್ಥಗಿತವಾಗಿರುವ ನಮ್ಮ ಮೆಟ್ರೋ ರೈಲು ಸೇವೆಯನ್ನು ಪುನರಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಆರಂಭಿಸಿದೆ.

    ಮೆಟ್ರೋ ರೈಲಿನ ಕಾರ‌್ಯಾಚರಣೆ ಆರಂಭಿಸುವುದಕ್ಕಾಗಿ ಏನೇನು ಸಿದ್ಧತೆ ಮಾಡಿಕೊಳ್ಳಬೇಕೆಂಬುದರ ಕುರಿತು ಅಧಿಕಾರಿಗಳು ಮತ್ತು ನೌಕರರಿಗೆ ಬಿಎಂಆರ್‌ಸಿಎಲ್ ಶುಕ್ರವಾರ ಹೊರಡಿಸಿರುವ ಆದೇಶದಲ್ಲಿ ಮಾಹಿತಿ ನೀಡಿದೆ.

    ಲಾಕ್‌ಡೌನ್‌ಗಿಂತ ಮುಂಚೆ ಹೇಗಿತ್ತೋ ಹಾಗೆ ಕಾರ‌್ಯಾಚರಣೆ ಪ್ರಾರಂಭಿಸಲು ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು, ಸಿಬ್ಬಂದಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು, ಎಲ್ಲ ತಾಂತ್ರಿಕ ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಮುಂತಾದ ವಿಷಯಗಳನ್ನು ಈ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

    ಇದನ್ನೂ ಓದಿ   ಲವ್ ಇನ್ ದ ಟೈಮ್ ಆಫ್ ಕರೊನಾ!

    ಎಲ್ಲ ವಿಭಾಗಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿಗೆ ನಿಯಮಿತ ರೋಸ್ಟರ್ (ಶಿಫ್ಟ್) ಹಾಕಬೇಕು. ಅದನ್ನು ಎಲ್ಲ ಸಿಬ್ಬಂದಿಗಳೂ ತಪ್ಪದೇ ಪಾಲಿಸಬೇಕು. ಮೇ 5ರಿಂದಲೇ ಕೇಂದ್ರ ಸ್ಥಾನದಲ್ಲಿ ಸಿಬ್ಬಂದಿಗಳೆಲ್ಲರೂ ಹಾಜರಿರಬೇಕೆಂದು ಸೂಚಿಸಲಾಗಿತ್ತು. ಆದರೂ ಕೆಲವರು ಹಾಜರಿಲ್ಲ ಎಂಬ ವಿಷಯ ಗಮನಕ್ಕೆ ಬಂದಿದೆ. ಅಂತಹವರನ್ನು ಗೈರುಹಾಜರಿ ಎಂಬುದಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.

    ಕೆಲಸಕ್ಕೆ ಹಾಜರಾಗುವಾಗ ಕರೊನಾ ಸಂಬಂಧಿ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯ ಎಂದು ಸಿಬ್ಬಂದಿಗೆ ಬಿಎಂಆರ್‌ಸಿಎಲ್ ಸೂಚಿಸಿದೆ.

    ಯಾವಾಗ ರೈಲು ಸೇವೆ ಆರಂಭವಾಗಲಿದೆ ಎಂಬುದನ್ನು ನಿರ್ದಿಷ್ಟವಾಗಿ ಈ ಆದೇಶದಲ್ಲಿ ತಿಳಿಸಿಲ್ಲವಾದರೂ, ಸೋಮವಾರದಿಂದ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಿಂಗಳಾಂತ್ಯದವರೆಗೆ ಲಾಕ್​ಡೌನ್​ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts