More

    ವರ್ಲ್ಡ್​ ಕ್ಲಾಸ್​ ರೈಲು ನಿಲ್ದಾಣವಾಗಲಿದೆ ಯಶವಂತಪುರ; ರೂ. 377 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

    ಬೆಂಗಳೂರು: ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣ ಮೆಜೆಸ್ಟಿಕ್​ (ಕ್ರಾಂತಿವೀರ ಸಂಳ್ಳಿ ರಾಯಣ್ಣ- ಕೆಎಸ್​ಆರ್), ಇದನ್ನು ಮೀರುವ ರೀತಿಯಲ್ಲಿ ಬೆಂಗಳೂರಿನ ಇನ್ನೊಂದು ರೈಲು ನಿಲ್ದಾಣ ಪ್ರಗತಿ ಕಾಣುತ್ತಿದೆ. ಇದೇ ಯಶವಂತಪುರ ರೈಲು ನಿಲ್ದಾಣ.

    ಈಗಾಗಲೇ ಸಾಕಷ್ಟು ಬೆಳವಣಿಗೆ ಕಂಡಿರುವ ಯಶವಂತಪುರ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಈಗ 377 ಕೋಟಿ ರೂಪಾಯಿ ವ್ಯಯಿಸಲು ಉದ್ದೇಶಿಸಲಾಗಿದೆ.

    ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಸೋಮವಾರ ಈ ವಿಷಯ ಬಹಿರಂಗಪಡಿಸಿದ್ದಾರೆ. ಇಲ್ಲಿ ಕೆಲವು ಸಿವಿಲ್ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

    ಈ ರೈಲು ನಿಲ್ದಾಣವು ಮೇಲ್ಛಾವಣಿ ಪ್ಲಾಜಾ ಹೊಂದಲಿದೆ. ಈ ಪ್ಲಾಜಾದಲ್ಲಿ, ಮಕ್ಕಳ ಆಟದ ಪ್ರದೇಶ ಮತ್ತು ಉತ್ಪನ್ನಗಳ ಮಾರಾಟ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ, ಯಶವಂತಪುರದಲ್ಲಿ ದೊಡ್ಡ ಪ್ರಮಾಣದಲ್ಲಿ ಪುನರಾಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಮಾಡಲು 377 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

    ಇದು ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ, ಬೆಂಗಳೂರು ಮೆಜೆಸ್ಟಿಕ್​, ಹಾಸನ, ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲುಗಳಿಗೆ ಸೇವೆ ಒದಗಿಸುತ್ತದೆ. ರೈಲ್ವೆ ನಿಲ್ದಾಣ ಬಳಸಿಕೊಂಡು ನಗರದ ಎರಡೂ ಬದಿಗಳನ್ನು ಸಂಪರ್ಕಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯು ಸಾಕಾರಗೊಳ್ಳುತ್ತಿದೆ ಎಂದರು.

    ಭವಿಷ್ಯದಲ್ಲಿ ದಟ್ಟಣೆ:

    ಉಪನಗರ, ಮುಖ್ಯ ರೈಲು ಮತ್ತು ಮೆಟ್ರೋ ಇಲ್ಲಿಗೆ ಸೇರುವ ಕಾರಣ ಮುಂಬರುವ 20 ರಿಂದ 30 ವರ್ಷಗಳಲ್ಲಿ ಈ ನಿಲ್ದಾಣವು ಹೆಚ್ಚಿನ ದಟ್ಟಣೆ ಹೊಂದಿರಲಿದೆ ಎಂದು ಸೋಮವಾರ ರೈಲ್ವೆ ತಂಡಕ್ಕೆ ತಿಳಿಸಿದ್ದೇನೆ ಎಂದು ಸಚಿವರು ಹೇಳಿದರು.
    “ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ದಟ್ಟಣೆ ನಿಭಾಯಿಸಲು, ನಾವು ಭೂಮಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ಒಂದು ಮೀಟರ್ ಭೂಮಿ ಲಭ್ಯವಿದ್ದರೂ, ಭವಿಷ್ಯದಲ್ಲಿ ವಿಸ್ತರಿಸಲು ಆ ಭೂಮಿಯನ್ನು ಮುಕ್ತವಾಗಿ ಇಡಬೇಕು” ಎಂದು ವೈಷ್ಣವ್ ಹೇಳಿದರು.
    ಸಾಧ್ಯವಾದಲ್ಲೆಲ್ಲಾ, ರೈಲ್ವೆಯು “ಇಂದೇ” ವಿಸ್ತರಣೆಯನ್ನು ಮಾಡಬಹುದಾದ ರೀತಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಲು ಪ್ರಯತ್ನಿಸಬೇಕು ಎಂದೂ ಅವರು ಹೇಳಿದರು.

    “ಯಶವಂತಪುರ ನಿಲ್ದಾಣದ ಎರಡೂ ಬದಿಗಳು ಸಂಪರ್ಕಗೊಳ್ಳುತ್ತವೆ. ಎರಡೂ ಬದಿಗಳಿಗೆ ಪ್ರವೇಶವಿರುತ್ತದೆ. ತುಂಬಾ ವಿಶಾಲವಾದ ಮೇಲ್ಛಾವಣಿ ಪ್ಲಾಜಾ ಇರುತ್ತದೆ, ದೊಡ್ಡ ಛಾವಣಿಯ ಪ್ಲಾಜಾದಲ್ಲಿ ಜನರು ತುಂಬಾ ಆರಾಮದಾಯಕವಾಗಿ ಕಾಯಬಹುದು. ಇಲ್ಲಿ ಮಕ್ಕಳು ಆಟವಾಡಬಹುದು, ಸ್ಥಳೀಯ ಉತ್ಪನ್ನಗಳ ಪ್ರದರ್ಶಿಸಿ, ಮಾರಾಟ ಮಾಡಬಹುದು. ನಾವು ಪ್ರಪಂಚದಾದ್ಯಂತ ನೋಡಿದ ಉತ್ತಮ ರೈಲು ನಿಲ್ದಾಣಗಳ ರೀತಿಯಲ್ಲಿ, ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ.
    – ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts