More

    ರಕ್ತದಾನದಿಂದ ಆರೋಗ್ಯ ವೃದ್ಧಿ

    ಗಂಗಾವತಿ: ನಿರಂತರ ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದ್ದು, ಎಲ್ಲ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಟ ಎಂದು ಇಸ್ಲಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಬ್ರಿನ್ ಸಲಹೆ ನೀಡಿದರು.

    ಇದನ್ನೂ ಓದಿ: ದಾನಗಳಲ್ಲಿ ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠ

    ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಷ್ಮಾನ ಭವ ಯೋಜನೆಯಡಿ ಮಂಗಳವಾರ ರಕ್ತದಾನ ಸ್ವಯಂ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಅಂಗಾಂಗದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಲು ನೆರವಾಗಬೇಕಿದ್ದು, ಸತ್ತ ದೇಹ ಹೂಳುವ ಮತ್ತು ಸುಡುವ ಬದಲು ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದರು.

    ಶಿಬಿರದಲ್ಲಿ 100ಕ್ಕೂ ಹೆಚ್ಚು ಯುವಕ, ಯುವತಿಯರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು. ವೈದ್ಯಾಧಿಕಾರಿ ಡಾ.ರಮೇಶ, ತಾಲೂಕು ಮೇಲ್ವಿಚಾರಕಿ ಅಲವೇಲಮ್ಮ, ಮಲೇರಿಯಾ ಲಿಂಕ್ ವರ್ಕರಗಳಾದ ಎಚ್.ಸುರೇಶ, ರಮೇಶ, ಸಾಲ್ಮನಿ, ಗುರುಪ್ರಸಾದ, ಕಿರಿಯ ಆರೋಗ್ಯ ಸಹಾಯಕ ರಮೇಶ

    ಹಿರೇಮನಿ, ಆರೋಗ್ಯ ಕಾರ್ಯಕರ್ತೆಯರಾದ ಹನುಮಂತಿ, ಸಿ.ಆರ್.ಮಂಜುಳಾ, ಸರಸ್ವತಿ, ಮಾಯಾ, ಆಶಾ ಕಾರ್ಯಕರ್ತೆಯರಾದ ಲಾಲಬೀ, ದೀಪಾ, ಆಫ್ರೀನ್, ಶರಣಮ್ಮ, ದಾನೇಶ್ವರಿ, ನೇತ್ರಾವತಿ, ವಾರ್ಡ್ ಮುಖಂಡ ರಾಜ್‌ಮಹ್ಮದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts